ಅನ್ನಪೂರ್ಣ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ
ಅಥಣಿ 13: ಅಥಣಿಯ ಎ ಎಸ್ ಪಾಂಗಿ ಮೆಡಿಕಲ್ ಸರ್ವಿಸಸ್ ಮತ್ತು ರಿಸರ್ಚ್ ಫೌಂಡೇಶನ್ ಟ್ರಸ್ಟ್ ಇದರ ಪೂಜ್ಯ ಅನ್ನಪೂರ್ಣ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿ. 12ರಂದು ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್ ಆರ್ ರಂಗನಾಥನ್ ಅವರ ಜನ್ಮ ದಿನದಂದು ಗ್ರಂಥಪಾಲಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಡಾ. ಎ ಎ ಪಾಂಗಿ ಹಾಗೂ ಪೂರ್ಣಿಮಾ ಪಾಂಗಿ, ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ನಿರ್ದೇಶಕ ಡಾ. ರವಿ ಪಾಂಗಿ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಡಾ. ದೀಪಾ ಪಾಂಗಿ ಅವರು ಆಗಮಿಸಿದ್ದರು. ಗ್ರಂಥಾಲಪಾಲಕರು ಎಲ್ಲರನ್ನು ಸ್ವಾಗತಿಸಿದರು. ಡಾ. ದೀಪಾ ಪಾಂಗಿ ಅವರು ಮಾತನಾಡುತ್ತ ಡಾ ಎಸ್ ಆರ್ ರಂಗನಾಥನ್ ಅವರ ಪಂಚಸೂತ್ರಗಳು ವಿದ್ಯಾರ್ಥಿಗಳಿಗೆ ಹಾಗೂ ಗ್ರಂಥಪಾಲಕರಿಗೆ ಹೇಗೆ ಉಪಯುಕ್ತವಾಗಿವೆ ಎಂದು ಹೇಳಿದರು.
ಗ್ರಂಥಪಾಲಕ ಈರಣ್ಣ ಗದಗಿನಮಠ ಅವರು ಗ್ರಂಥಾಲಯ ಪಿತಾಮಹ ಡಾ. ಎಸ್ ಆರ್ ರಂಗನಾಥನ್ ಅವರ ಜೀವನ, ಸಾಧನೆಗಳ ಕುರಿತಾಗಿ ಮಾತನಾಡಿದರು. ಪ್ರಾಚಾರ್ಯ ಎಂ ಎ ಶಿವಾಪುರ ವಂದನಾರೆ್ಣ ಸಲ್ಲಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಂ ಎ ಶಿವಾಪುರ, ಪ್ರಾದ್ಯಾಪಕ ಡಾ. ಪ್ರವೀಣ ಜೇಡರ, ಪ್ರೋ. ಕಿರಣ, ಪ್ರೋ. ಅಸ್ಲಮ್ ಪಟ್ಟದಕಲ್ ಪ್ರೋ. ಅಮಸಿದ್ದ ಮೆಂಡಿಗೇರಿ ಪ್ರೋ. ಸುಪ್ರಿಯಾ, ಪ್ರೋ. ಸುಶೀಲಾ, ಪ್ರೋ. ಸರಸ್ವತಿ, ಪ್ರೋ. ಪೂರ್ಣಿಮಾ, ಕ್ಲರ್ಕ್ ನಿಂಗಪ್ಪ, ಹಾಗೂ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.