ಬೈಲಹೊಂಗಲ

ಸಿದ್ಧರಾಮೇಶ್ವರ ಮೂರ್ತಿ ಪ್ರತಿಷ್ಟಾಪನಾ ಕಾರ್ಯಕ್ರಮಗಳಿಗೆ ಅದ್ದೂರಿ ಚಾಲನೆ

ಸಿದ್ಧರಾಮೇಶ್ವರ ಮೂರ್ತಿ ಪ್ರತಿಷ್ಟಾಪನಾ ಕಾರ್ಯಕ್ರಮಗಳಿಗೆ ಅದ್ದೂರಿ ಚಾಲನೆ

ಲೋಕದರ್ಶನ ವರದಿ 


ಬೈಲಹೊಂಗಲ 01: ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವಡ್ಡರ ಯಲ್ಲಣ್ಣ ಬಡಾವಣೆಯಲ್ಲಿರುವ ಸಿದ್ಧರಾಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ನೂತನ ಮೂರ್ತಿ ಪ್ರತಿಷ್ಟಾಪನಾ ಕಾರ್ಯಕ್ರಮಗಳಿಗೆ ಗುರುವಾರ ಅದ್ಧೂರಿ ಚಾಲನೆ ನೀಡಲಾಯಿತು.  

    ಉದ್ಯಮಿ ಚಂದ್ರಶೇಖರಯ್ಯ ಕಾರಿಮನಿ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಬೆಳವಡಿ ಗ್ರಾಮವು ಎಲ್ಲ ಜಾತಿ ಧರ್ಮ ಮತ ಪಂಥದ ಜನಾಂಗದವರು ಅತ್ಯಂತ ಸಾಮರಸ್ಯ ಮತ್ತು ಸಹಬಾಳ್ವೆಯಿಂದ ಬದಕುತ್ತಿರುವ ಗ್ರಾಮವಾಗಿದೆ. ಎಲ್ಲರೂ ಒಂದೆಡೆ ಸೇರಿ ಪ್ರೀತಿ ವಿಶ್ವಾಸದಿಂದ ನಡೆಸುವ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜನರ ಬದುಕಿಗೆ ನೆಮ್ಮದಿ ಶಾಂತಿ ನೀಡುತ್ತವೆ ಎಂದರು.  

    ಬೋವಿ ಸಮಾಜದ ಮುಖಂಡ ಹಣಮಂತ ಸಾಲಹಳ್ಳಿ ಮಾತನಾಡಿ, 2 ರಂದು ನಡೆಯುವ ಸಿದ್ಧರಾಮೇಶ್ವರರ ನೂತನ ಮೂರ್ತಿ ಪ್ರತಿಷ್ಟಾಪನಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಬೋವಿ ವಡ್ಡರ ಗುರುಪೀಠದ ನರಂಜನ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ ಸೇರಿದಂತೆ ಹೂಲಿ, ದೊಡ್ಡವಾಡ, ನಯಾನಗರ, ಶಿರಕೋಳ ಗ್ರಾಮಗಳ ಶ್ರೀಗಳು ಆಗಮಿಸಿ ಆಶೀರ್ವದಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದರು.  

     ಸಾನಿಧ್ಯ ವಹಿಸಿದ್ದ ಬಸಯ್ಯಸ್ವಾಮಿ ವಿರಕ್ತಮಠ ಆಶೀರ್ವಚನ ನೀಡಿದರು. ಜಿಪಂ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ಅಮಿತ ಪಾಟೀಲ, ಗ್ರಾಪಂ ಅಧ್ಯಕ್ಷೆ ರೇಣುಕಾ ಕುರಿ, ಸದಸ್ಯರಾದ ವಿಶ್ವನಾಥ ಕರೀಕಟ್ಟಿ, ಈರಣ್ಣ ತುರಾಯಿ, ಮಹೇಶ ಕಾರಿಮನಿ, ಮಟ್ಟಿ, ಗಜಾನಂದ ರಾಯೇಜಿ, ಪರಮನಾಯ್ಕ, ರಿಹಾನಾಬೇಗಂ ಕಿತ್ತೂರ,  ಪ್ರಕಾಶ ಬಳಿಗಾರ, ಉಪಸ್ಥಿತರಿದ್ದರು.  

  ಮಹಾಂತೇಶ ಉಪ್ಪಿನ ನಿರೂಪಿಸಿದರು. ನಾಗೇಶ ಬೆಳ್ಳಿಕಟ್ಟಿ ಸ್ವಾಗತಿಸಿದರು. ಬಸವರಾಜ ನರೆಗಲ್ಲ ವಂದಿಸಿದರು. 


ಸುದ್ದಿ ಓದಿ