ಅಥಣಿ

ರಸ್ತೆ ಕಾಮಗಾರಿಗೆ ಲಕ್ಷ್ಮಣ ಸವದಿ ಭೂಮಿಪೂಜೆ

ರಸ್ತೆ ಕಾಮಗಾರಿಗೆ ಲಕ್ಷ್ಮಣ ಸವದಿ ಭೂಮಿಪೂಜೆ

ಲೋಕದರ್ಶನ ವರದಿ

ಅಥಣಿ 23:  ನಿರುದ್ಯೋಗಿ ಯುವಕರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ 20 ವಿದ್ಯಾರ್ಥಿಗಳಿಗೆ ಬೈಕ್ಗಳನ್ನು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಯುಗಾದಿ ಯುಗಾದಿ ಸಂದರ್ಭದಲ್ಲಿ  ವಿತರಿಸಿದರು.

          ನಂತರ ಮಾತನಾಡಿದ ಅವರು, ಸ್ವಾವಲಂಬನವಿಲ್ಲದ ವಿದ್ಯಾವಂತ ಯುಕರಿಗೆ ಸ್ವಯಂ ಉದ್ಯೋಗ ಸೃಷ್ಟಿಸಿ ಮೋಟಾರ್ ಬೈಕ್ ನೀಡಲಾಗಿದೆ. ಇವುಗಳನ್ನು ಉಪಯೋಗಿಸಿಕೊಂಡು ಒಂದೇ ಪೋನ್ ಕರೆಗೆ ಹೊಟೆಲ್ ತಿಂಡಿ, ಆಹಾರ ಸಾಮಗ್ರಿಗಳನ್ನು, ಔಷಧಗಳನ್ನು ಅವರ ಮನೆಗೆ ತಲುಪಿಸುವ ಮುಖಾಂತರ ಉದ್ಯೋಗದ ಜೊತೆಗೆ ಆದಾಯ ಮಾಡಿಕೊಳ್ಳಬಹುದು ಎಂದರು.

         ಇಂತಹ ಸೇವೆಗೆ ತಾಲೂಕಿನ 40 ಜನರನ್ನು ಆಯ್ಕೆ ಮಾಡಿ ಮೊದಲ ಹಂತದಲ್ಲಿ 20 ಜನರಿಗೆ ಬೈಕ್ ವಿತರಿಸಲಾಗಿದೆ ಈ ಯೋಜನೆಯನ್ನು ಸರಕಾರ ಜಾರಿಗೆ ತಂದಿದ್ದು ಒಟ್ಟು ಅಥಣಿ ಕ್ಷೇತ್ರಕ್ಕೆ ಕನಿಷ್ಠ ಪಕ್ಷ 500 ನಿರುದ್ಯೋಗಿಗಳಿಗೆ ಬೈಕ್ ಕೊಡುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಸಚಿವರಿಗೆ ಮನವಿ ಮಾಡಿದ್ದು ಯುವಕರು ಈ ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದರು.

           ರಾಘವೇಂದ್ರ ಮಠದ ರಸ್ತೆಗೆ ಸರಕಾರ 2 ಕೋಟಿ ರೂ ವಿಶೇಷ ಅನುದಾನದಡಿ ಸಿಸಿ ರಸ್ತೆ ನಿರ್ಮಾಣ ಮತ್ತು 50 ಲಕ್ಷ ರೂ ವೆಚ್ಚದಲ್ಲಿ ವಿದ್ಯುತ್ ಕಂಬಗಳು, ಲೈಟ್ ವ್ಯವಸ್ಥೆಗೆ ಸಚಿವ ಮಿತ್ರರಾದ ಎಂಟಿಬಿ ನಾಗರಾಜ ಸಹಕಾರದಿಂದ ಸಾಧ್ಯವಾಗಿದೆ ಇದರಿಂದ ಮಠದಲ್ಲಿ ನಡೆಯುವ ಧಾರ್ಮಿಕ  ಕಾರ್ಯಕ್ರಮಗಳಿಗೆ, ಮದುವೆ ಮುಂತಾದ ಕಾರಣಗಳಿಗೆ ತಾಲೂಕಿನ ವಿವಿಧೆಡೆಯಿಂದ ಬರುವ ಜನತೆಗೂ ಸಹ ಅನುಕೂಲವಾಗಿದೆ ಎಂದರು.

          ಆರ್ ಎಸ್ ಎಸ್ ಮುಖಂಡ ಅರವಿಂದ ದೇಶಪಾಂಡೆ, ಪುರಸಭಾ ಸದಸ್ಯರಾದ ರಾಜು ಗುಡೊಡಗಿ, ಮೃಣಾಲಿನಿ ದೇಶಪಾಂಡೆ, ರಾಜು ಬುಲಬುಲೆ, ದಿಲೀಪ ಲೋಣಾರಿ, ಮಲ್ಲು ಹುದ್ದಾರ, ದತ್ತಾ ವಾಸ್ಟರ್, ಆಸಿಫ್ ತಾಂಬೋಳಿ, ತಮ್ಮಣ್ಣ ಹುಲಕುಂದ, ಶಿವರುದ್ರ ಘೂಳಪ್ಪನವರ, ಸುಶೀಲ ಪತ್ತಾರ, ರಾಜು ಅಲಬಾಳ, ಅಮರ ದುರ್ಗಣ್ಣವರ, ರಾಜು ಚೌಗಲಾ, ಶ್ರೀಶೈಲ ನಾಯಕ, ಸಂಗಮೇಶ ಪಲ್ಲಕ್ಕಿ, ಪ್ರದೀಪ ನಂದಗಾಂವ, ಲೋಕೆಶ್ ಪಾಟೀಲ, ಅರುಣ ಭಾಸಿಂಗಿ, ಮತ್ತಿತರಿದ್ದರು 

ಸುದ್ದಿ ಓದಿ