ಡಿ.31ರಂದು ಲಚ್ಯಾಣ ಸಿದ್ದಲಿಂಗ ಮಹಾರಾಜ ಕನ್ನಡ ಚಲನಚಿತ್ರ ಪ್ರದರ್ಶನ
ಇಂಡಿ25: ತಾಲೂಕಿನ ಲಚ್ಯಾಣ ಗ್ರಾಮದ ಆರಾಧ್ಯ ದೇವ ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಜೀವನ ಚರಿತ್ರೆ ಆಧಾರಿತ ಲಚ್ಯಾಣ ಸಿದ್ದಲಿಂಗ ಮಹಾರಾಜ ಕನ್ನಡ ಚಲನಚಿತ್ರ ಡಿ.31ರಂದು ಪಟ್ಟಣದ ಶ್ರೀನಿವಾಸ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಲನಚಿತ್ರ ನಿರ್ಮಾಪಕರಾದ ಮಲ್ಲೇಶಿ ಮುಜಗೊಂಡ, ವಿ.ಎಂ.ಕರಾಳೆ ತಿಳಿಸಿದ್ದಾರೆ.
ಅವರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿತ್ರ ಬಿಡುಗಡೆ ಸಮಾರಂಭದಲ್ಲಿ ಲಚ್ಯಾಣ ಹಾಗೂ ಬಂಥನಾಳದ ಪೀಠಾಧಿಪತಿಗಳಾದ ಪೂಜ್ಯ ಡಾ. ವೃಷಭಲಿಂಗ ಮಹಾಶಿವಯೋಗಿಗಳು, ಹಳಿಂಗಳಿಯ ಕಮರಿಮಠದ ಶಿವಾನಂದ ಮಹಾಸ್ವಾಮಿಗಳು, ಶಾಸಕ ಯಶವಂತರಾಯಗೌಡ ಪಾಟೀಲ, ಬಿಜೆಪಿ ಧುರೀಣರಾದ ಕಾಸುಗೌಡ ಬಿರಾದಾರ ಪಾಲ್ಗೊಳ್ಳುವರು.
ಅಂದಾಜು 70 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಚಿತ್ರಕ್ಕೆ ನಟ ಶ್ರೀಧರ ನಾಯಕ ನಟನಾಗಿ ಮತ್ತು ಕಾವ್ಯ ಅಭಿನಯಿಸಿದ್ದಾರೆ. ಲಚ್ಯಾಣ, ಕಕ್ಕಳಮೇಲಿ, ಶ್ರೀಶೈಲದ ಕಮರಿಮಠ, ಕನ್ನೊಳ್ಳಿ ಸಾಹುಕಾರರ ಮನೆ, ಜಿಗಜಿವಣಗಿಯ ಕೌದೆಪ್ಪ್ಪ ಮಹಾರಾಜರ ಮಠದಲ್ಲಿ, ಮಹಾರಾಷ್ಟ್ರ ಅಕ್ಕಲಕೋಟದ ಶ್ಯಾವಳ, ಪಂಡರಪೂರ ದಲ್ಲಿ ಚಿತ್ರಿಕರಿಸಲಾಗಿದೆ. ಹಳಂಗಳಿಯ ಕಮರಿಮಠದ ಪೂಜ್ಯ ಶಿವಾನಂದ ಶ್ರೀಗಳು ರಚಿಸಿದ ಗ್ರಂಥವನ್ನು ಆಧರಿಸಿ, ಶಂಕರ ಪಾಟೀಲ ಹಾಗೂ ಸಿ.ಜಿ.ವೆಂಕಟರಾವ್ ನಿರ್ದೇಶನದಲ್ಲಿ ಚಿತ್ರ ನಿರ್ಮಾಣಗೊಂಡಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮಠದ ಸೇವಾ ಸಮಿತಿಯ ನಿವೃತ್ ಪ್ರಾಚಾರ್ಯ ಎ.ಪಿ.ಕಾಗವಾಡಕರ, ವಿನೋದ ಮುಜಗೊಂಡ, ವಿಶ್ವನಾಥ ಪೋಲಾಶಿ, ಮಲ್ಲಿಕಾರ್ಜುನ ಹೂಗಾರ ಮತ್ತಿತರಿದ್ದರು.
ಪೋಟೊ ಕ್ಯಾಪ್ಸನ್ 25 ಇಂಡಿ 02: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಮಲ್ಲೇಶಿ ಮುಜಗೊಂಡ, ವಿ.ಎಂ.ಕರಾಳೆ ಮತ್ತು ಎ.ಪಿ.ಕಾಗವಾಡಕರ ಮಾತನಾಡಿದರು.