ಬೈಲಹೊಂಗಲ

ಮಹಿಳೆಯರಲ್ಲಿ ಸ್ವಾವಲಂಬಿ ಗುಣ ಬೆಳೆಸುವಲ್ಲಿ ಕ್ಷೇತ್ರ ಮುಂಚೂಣಿ

ಮಹಿಳೆಯರಲ್ಲಿ ಸ್ವಾವಲಂಬಿ ಗುಣ ಬೆಳೆಸುವಲ್ಲಿ ಕ್ಷೇತ್ರ ಮುಂಚೂಣಿ

ಬೈಲಹೊಂಗಲ 13: ಜೀವನ ನಿರ್ವಹಣೆಗಾಗಿ ಮಹಿಳೆಯರಿಗೆ ಸಮಾಜದಲ್ಲಿ  ಸ್ವ-ಉದ್ಯೋಗ ಕೈಗೊಳ್ಳಲು ಹಲವಾರು ಅವಕಾಶಗಳಿದ್ದು ಅವುಗಳ ಉಪಯೋಗ ಪಡೆದು ಆರ್ಥಿಕ ಸ್ವಾವಲಂಬಿಯಾಗಬೇಕೆಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕಾ ಯೋಜನಾಧಿಕಾರಿ ಪಿ.ವಿಜಯಕುಮಾರ ಹೇಳಿದರು.  

ಪಟ್ಟಣದ ಮೂರುಸಾವಿರ ಮಠದ ಸಭಾಭವನದಲ್ಲಿ ಮಂಗಳವಾರ ತಾಲೂಕಾ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಮಹಿಳೆಯರಿಗಾಗಿ ಸ್ವ-ಉದ್ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ಈ ನಾಡಿನಲ್ಲಿ ವ್ಯಕ್ತವಾಗುತ್ತಿದ್ದು ಸ್ವ-ಉದ್ಯೋಗ ಮಾಡುವಂತಹ ಇಚ್ಚಾಶಕ್ತಿಯುಳ್ಳ ಮಹಿಳೆಯರಿಗೆ ಸಂಸ್ಥೆಯ ವತಿಯಿಂದ ಸಾಲದ ರೂಪದಲ್ಲಿ ಹಣಕಾಸು ವ್ಯವಸ್ಥೆ ಕಲ್ಪಿಸಲಾಗುವದೆಂದರು.  

ಮುಖ್ಯ ಅಥಿತಿಗಳಾಗಿ ಆಗಮಿಸಿದ ಕೆವಿಜಿ ಬ್ಯಾಂಕ್ ಅರ್ಥಿಕ ಸಮಾಲೋಚಕಿ ಗೀತಾ ಖಾನಪೇಟ್, ಎನ್‌ಆರ್‌ಎಲ್‌ಎಂ ಸಂಜೀವಿನಿ ಸಮಾಲೋಚಕಿ ಬಸಮ್ಮ ಸಂಬರಗಿ ಬ್ಯಾಂಕೇತರ ಸಂಸ್ಥೆಗಳ ಕಿರು ಸಾಲಗಳ ಕುರಿತು ತಿಳುವಳಿಕೆ ನೀಡಿದರು.  

ಶಿವಾ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷ್ಯೆ ಲೀಲಾ ಹುಬ್ಬಳ್ಳಿ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶೈಲಾ ಜಕ್ಕನ್ನವರ, ವಲಯ ಮೇಲ್ವಚಾರಕ ನಾಗರಾಜ ಪೋತಾನವರ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ ವೇದಿಕೆ ಮೇಲಿದ್ದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಸ್ವ-ಸಹಾಯ ಸಂಘಗಳ ಸದಸ್ಯರು, ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.  ಸತ್ಯ ನಾರಾಯಣ ಪೂಜೆ ನೆರವೇರಿಸಲಾಯಿತು.   

ಸೇವಾ ಪ್ರತಿನಿಧಿ ಸುವರ್ಣ ಅಬ್ಬಾಯಿ ಸ್ವಾಗತಿಸಿದರು. ಪ್ರತಿಭಾ ಮಿಡಕನಟ್ಟಿ ನಿರೂಪಿಸಿದರು. ಸುರೇಖಾ ಹುಲಮನಿ ವಂದಿಸಿದರು.  

 

ಸುದ್ದಿ ಓದಿ