ಕಿರಣಗಿ ಪ್ರಾಥಮಿಕ ಶಾಲಾ ಕಾಮಗಾರಿಗೆ ಚಾಲನೆ
ಸಂಬರಗಿ 09: ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರದ ಮತದಾರರು, ಸ್ವಾಭಿಮಾನಕ್ಕಾಗಿ ಆಯ್ಕೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ರೈತಪರ ವಿವಿಧ ಯೋಜನೆಗಳು ಜಾರಿಗೆ ತಂದ ರೈತರ ಅನಕೂಲಕಾಗಿ ನಿರ್ಧಾರವನ್ನು ತಗೆದುಕೊಳ್ಳುವ ಮೂಲಕ ವಿಶೇಷ ಯೋಜನೆ ತಂದು ಬರಡು ಭೂಮಿಗೆ ನೀರು ಹರಿಸಿ ಹಸಿರುಭೂಮಿಯಾಗಿ ಮಾಡಿ ಕ್ಷೇತ್ರದಲ್ಲಿ ಜೋಡು ಎತ್ತುಗಳು ಗಡಿ ಭಾಗದಲ್ಲಿ ಕ್ರಾಂತಿ ಮಾಡೆ ತೀರುತ್ತಾರೆ ಎಂದು ಕಾಂಗ್ರೆಸ ಮುಖಂಡ ತಾತ್ಯಾಸಾಹೇಬ ಚವ್ಹಾಣಸರಕಾರ ಹೇಳಿದರು.
ಗಡಿಭಾಗದ ಕಿರಣಗಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಕೊಠಡಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು ಶಾಸಕರಿಗೆ ಈಗಾಗಲೆ ಈ ಭಾಗದ ನೀರಾವರಿ ಯೋಜನೆಗೆ ಹೆಚ್ಚು ಒತ್ತು ನೀಡಿ ರಸ್ತೆ ಶಾಲಾ ಕೊಠಡಿ ಇನ್ನಿತರ ಕಾಮಗಾರಿ ಪ್ರಾರಂಭ ಮಾಡಬೇಕು. ಗಡಿ ಭಾಗದಲ್ಲಿ ಬರಗಾಲ ಇದ್ದು ಗೋಶಾಲೆ ನೀರಿನ ಟ್ಯಾಂಕರ ಪ್ರಾರಂಭ ಮಾಡುವಂತೆ ಮನವಿ ಮಾಡಿದ್ದೇವೆ ತಾಲುಕಾ ಅಡಳಿತಕ್ಕೆ ಸೂಚನೆ ನೀಡಿದ್ದಾರೆ. ಎಂದರು.
ಚಿಕ್ಕೋಡಿ ಜಿಲ್ಹಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಬನಪ್ಪಾ ನಂದಗಾಂವ ಮಾತನಾಡಿ ಕಾಂಗ್ರ್ರೆಸ್ ಸರಕಾರ ಘೋಷಣೆ ಮಾಡಿರುವ 5 ಗ್ಯಾರಂಟಿಗಳನ್ನು ಪೂರ್ಣ ಮಾಡುತ್ತಾರೆ. ಬಡ ಜನರಿಗೆ ಅನುಕೂಲವಾಗಿದೆ ನುಡಿದಂತೆ ನಡೆವ ಸರಕಾರ ಎಂದು ಸ್ಪಷ್ಟಪಡಿಸಿದರು.
ಸುರೇಶ ಮೆಂಡಿಗಿರಿ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಗೌಡಾ ಪಾಟೀಲ, ತುಕಾರಾಮ ಕೋಡಗ, ಹೆಡ್ಮಾಸ್ತರ ಬಸು ಚವ್ಹಾಣ, ಎಸ್.ಎಂ.ಸೂರ್ಯವಂಶಿ, ಎಸ್.ಜಿ.ಚೌರಿ, ಶ್ರೀಶೈಲ ನಂದಗಾಂವ, ಸಚಿನ ಪಾಟೀಲ, ರಜಾಕ ಮುಲ್ಲಾ, ಇರಾಪ್ಪಾ ಮೆಂಡಿಗಿರಿ, ಗುತ್ತಗೆದಾರ ಸುರೇಶ ಚನ್ನರೆಡ್ಡಿ, ಕುಮಾರ ಚನ್ನರೆಡ್ಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು