ಅಥಣಿ

ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಶೀಘ್ರದಲ್ಲೇ ಉದ್ಘಾಟನೆ

ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಶೀಘ್ರದಲ್ಲೇ ಉದ್ಘಾಟನೆ

ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ 

ವೆಂಕಟೇಶ ದೇಶಪಾಂಡೆ 

ಅಥಣಿ 17: ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಕೆಲವೇ ದಿನಗಳಲ್ಲಿ ಈ ಯೋಜನೆ ಉದ್ಘಾಟನೆಯಾಗಲಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.  

ಅವರು ಸಿದ್ದೇವಾಡಿ ಗ್ರಾಮದಲ್ಲಿ ಜಲಜೀವನ್, ಹಣಮಾಪುರದಲ್ಲಿ ಜಲಜೀವನ್, ಎಸ್ ಸಿ ಸಮುದಾಯ ಭವನ, ಶಾಲಾ ಕೊಠಡಿ,  ತೆವರಟ್ಟಿಯಲ್ಲಿ ಜಲಜೀವನ್ ಮಿಶನ್ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. 

ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಕಾರಖಾನೆಯ ನೂರಕ್ಕೂ ಹೆಚ್ಚು ಎಲೆಕ್ಟ್ರಿಕ್ ಹಾಗೂ ಸಿವಿಲ್ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ವರು ನನು ಚುನಾವಣೆ ಸ್ಪರ್ಧಿಸಿದಾಗಲೊಮ್ಮೆ ಸಿದ್ದೇವಾಡಿ ಗ್ರಾಮಸ್ಥರು ಒಟ್ಟು ಮತಗಳಲ್ಲಿ 800 ರಿಂದ 1000 ಹೆಚ್ಚುವರಿ ಮತಗಳನ್ನು ನೀಡಿರುವುರಿ ತಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆಯುವದಿಲ್ಲ ಎಂದರು. 

 ನಾನು ನನ್ನ ಅಧಿಕಾರಾವಧಿಯಲ್ಲಿ ಕುಡಿಯುವ ನೀರು, ಶಿಕ್ಷಣ, ವಿದ್ಯುತ್, ರಸ್ತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಜನಪರ ಅಭಿವೃದ್ಧಿ ಪರ ಯೋಜನೆಗಳನ್ನು  ಅನುಷ್ಠಾನಗೊಳಿಸಿರುವೆ ಎಂದರು. 

  ಬಿಜೆಪಿ ಮುಖಂಡ ಮಹಾದೇವ ಕೋರೆ ಮಾತನಾಡಿ, ಕಾಗವಾಡ ಕ್ಷೇತ್ರದ ಹಿಂದಿನ ಶಾಸಕರೆಲ್ಲರೂ ತಮ್ಮ ಐದು ವರ್ಷಗಳ ಅವಧಿಯಲ್ಲಿ ಒಂದು ಸಮುದಾಯ ಭವನ ಅಥವಾ ಒಂದು ಸಂಪರ್ಕ ರಸ್ತೆ ನಿರ್ಮಿಸಿದ್ದರು ಆದರೆ ನಮ್ಮ ಶಾಸಕರು ಕಾಗವಡ ಕ್ಷೇತ್ರದ ಅಭಿವೃದ್ಧಿಗಾಗಿ 3000ಕೋಟಿಗೂ ಹೆಚ್ಚು ಅನುದಾನದಲ್ಲಿ ಜನಪರ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು. 

 ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿನಾಯಕ ಬಾಗಡಿ ಮಾತನಾಡಿ, ಕಾಗವಾಡ ಕ್ಷೇತ್ರದಲ್ಲಿ ಶಾಸಕ ಶ್ರೀಮಂತ ಪಾಟೀಲರ ಅವಧಿಯಲ್ಲಿ ಹಿಂದೆಂದೂ ಅನುಷ್ಠಾನಗೊಳ್ಳದ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು. 

 ಧುರೀಣರಾದ ವಸಂತ ಮಜ್ಜಗಿ, ಅಪ್ಪಾಸಾಹೇಬ ಚೌಗಲಾ, ಆರ್‌.ಎಂ.ಪಾಟೀಲ, ಈಶ್ವರ ಕುಂಬಾರೆ, ಧರೆಪ್ಪ ಹೊನ್ನಾಗೋಳ, ಗಣೇಶ ನಾಗೋಳ, ಲಕ್ಷ್ಮಣ ಅವಳೆ, ಸಿದರಾಯ ಕಾಳೇಲಿ, ಮುತ್ತಣ್ಣಾ ತಿಗಣಿ, ಈಶ್ವರ ಮುಜಗೋಣಿ, ಕಲ್ಲಪ್ಪ ಕಮತಿ, ಎಸ್‌.ಎಂ.ಜಮಖಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ