ಯರಗಟ್ಟಿ

ಪರಿಸರ ಸ್ವಚ್ಛವಾಗಿಟ್ಟು ಆರೋಗ್ಯ ಕಾಪಾಡಿ: ತಂಬಾಕೆ

ಪರಿಸರ ಸ್ವಚ್ಛವಾಗಿಟ್ಟು ಆರೋಗ್ಯ ಕಾಪಾಡಿ: ತಂಬಾಕೆ

ಯರಗಟ್ಟಿ 30: ನಮ್ಮ ಸುತ್ತಮುತ್ತಲು ಪರಿಸರವನ್ನು ಸ್ವಚ್ಚವಾಗಿಟ್ಟಾಗ ಅನೇಕ ರೋಗಗಳು ಬರದಂತೆ ತಡೆಯಬಹುದು ಎಂದು ಪ್ರಾಚಾರ್ಯ ಮಹಾಂತೇಶ ತಂಬಾಕೆ ಹೇಳಿದರು. 

ಪಟ್ಟಣದ ಸಿ.ಎಮ್‌.ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ, ಡಾ.ಬಿ.ಆರ್‌.ಅಂಬೇಡ್ಕರ ಜಾನಪದ ಕಲಾ ಪೋಷಕ ಸಂಘ ತಾವಲಗೇರಿ ಹಾಗೂ ಸಿ.ಎಮ್‌.ಮಾಮನಿ ಕಾಲೇಜ ಹಮ್ಮಿಕೊಂಡಿರುವ ಸ್ವಚ್ಚತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರತಿಯೊಬ್ಬರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ಕೊಟ್ಟಾಗ ಸುಂದರ ಪರಿಸರ ನಿರ್ಮಾಣವಾಗುತ್ತದೆ ಎಂದರು. ್ಲ ಕಾಲೇಜು ಆವರಣ ಸ್ವಚ್ಛಗೊಳಿಸಲಾಯಿತು. 

ಬಸವರಾಜ ಹರಿಜನ, ಗುರುಪ್ರಸಾದ ಗೂಗೆಶ್ನರ, ವಿಜಯಲಕ್ಷ್ಮೀ ಬದ್ದಿ, ಸಿದ್ಲಿಂಗಪ್ಪ ಗಾಳಿ, ಕಲ್ಲಪ್ಪಾ ಹಂದಿಗುಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ