ಕಲ್ಲಗುಡಿ ರಾಮಲಿಂಗೇಶ್ವರ ದೇವರ ಅದ್ಧೂರಿ ರಥೋತ್ಸವ
ಬೈಲಹೊಂಗಲ 12: ಪಟ್ಟಣದ ಇತಿಹಾಸ ಪ್ರಸಿದ್ಧ ಕಲ್ಲಗುಡಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವ ಸೋಮವಾರ ಸಂಜೆ ಅದ್ದೂರಿಯಿಂದ ನಡೆಯಿತು.
ಬೆಳಿಗ್ಗೆ ಪ್ರಾಥಃಕಾಲದಲ್ಲಿ ರಾಮಲಿಂಗೇಶ್ವರನಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಜರುಗಿದವು. ಎಂಬತ್ತು ತರಹದ ಹಣ್ಣುಗಳಲ್ಲಿ ಶ್ರೀ ರಾಮಲಿಂಗೇಶ್ವರನನ್ನು ಅಲಕೃಂತಗೊಳಿಸಲಾಗಿತ್ತು. ಅರ್ಚಕರಾದ ರಾಮಲಿಂಗಯ್ಯ ಪೂಜಾರ, ಹರ್ಷ ಪೂಜಾರ ವಿವಿದ ಪೂಜೆ ನೆರವೇರಿಸಿದರು.
ತರತರನಾದ ಹೂ, ಮಾಲೆಗಳಿಂದ ಕಂಗೊಳಿಸಿದ ರಥೋತ್ಸವಕ್ಕೆ ಭಕ್ತರು ಹಣ್ಣು, ಕಾರಿಕು ಸಮರ್ಿಸಿದರು. ರಾಮಲಿಂಗೇಶ್ವರನಿಗೆ ಜೈ ಷೋಷ ಮೊಳಗಿಸಿದರು. ಹರಹರ ಮಹಾದೇವ ಎಂದು ರಥೋತ್ಸವ ಎಳೆದರು. ಬೆಳಿಗ್ಗೆಯಿಂದ ಸಂಜೆವರೆಗೆ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಶಾಖಾ ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥೋತ್ಸವ ದೇವಸ್ಥಾನ ದಿಂದ ಉಪ್ಪಿನಕೂಟ ಪ್ರಮುಖ ಬಜಾರ ರಸ್ತೆ ಮೂಲಕ ಹಾಯ್ದು ಪುನಃ ದೇವಸ್ಥಾನಕ್ಕೆ ಬಂದು ತಲುಪಿತು. ದೇವಸ್ಥಾನದ ಸೇವಾ ಸಮಿತಿಯ ಸದಸ್ಯರು ಜಾತ್ರೆ ಯಶಸ್ವಿಗೆ ಶ್ರಮಿಸಿದರು.