ಮಕ್ಕಳಲ್ಲಿ ಸಂಗೀತ, ಸಾಹಿತ್ಯದ ಅಭಿರುಚಿ ಬೆಳೆಸಿ : ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜನವರು ಕರೆ: ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಬೈಲಹೊಂಗಲ 27: ಮಕ್ಕಳಿಗೆ ಸಂಗೀತ, ಸಾಹಿತ್ಯದ ಅಭಿರುಚಿ ಬೆಳೆಸಿ. ಸಂಗೀತ, ಸಾಹಿತ್ಯ ಎರಡು ಮಾನವನ ಮನೋವಿಕಾಸಕ್ಕೆ ಸಹಕಾರಿ ಆಗಿವೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜನವರು ಹೇಳಿದರು.
ಪಟ್ಟಣದ ದುರ್ಗಾಪರಮೇಶ್ವರಿ ದೇವಸ್ಥಾನದ 13 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಕೊನೆ ದಿನದ ನಡೆದ ಕಾರ್ಯಕ್ರಮದಲ್ಲಿ ತುಲಾಭಾರ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಮಠಕ್ಕೆ ಲಕ್ಷಲಕ್ಷ ಹಣ ಕೊಡಿ ಎಂದು ಕೇಳಲ್ಲ. ಅಂಧ ಮಕ್ಕಳನ್ನು ಕೊಡಿ. ಅಂತಹ ಅಂಧ ಮಕ್ಕಳಿಗೆ ಜ್ಞಾನ ಸಂಪತ್ತು ನೀಡಿ ಗಾಯನ ಲೋಕದಲ್ಲಿ ಪರಿಚಯಿಸಲಾಗುತ್ತದೆ. ನಾವು ಯಾವುದೇ ಜಾತಿ, ಮತ, ಪಂತಗಳಿಗೆ ಸೀಮಿತವಲ್ಲ. ನಮ್ಮಲ್ಲಿ ಎಲ್ಲರೂ ಒಂದೇ ಎಂದರು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ 'ಶಾಂಭವಿಶ್ರೀ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಆ ತಾಯಿ ಆಶೀರ್ವಾದದಿಂದ ಮಹಾನ ಪೂಜ್ಯರ ಎದುರಗಡೆ ಶಾಂಭವಿಶ್ರೀ ಪ್ರಶಸ್ತಿ ಸ್ವೀಕರಿಸಿದ್ದು ಸಂತಸ ತಂದಿದೆ. ಇದು ನನ್ನ ಪೂರ್ವ ಜನ್ಮದ ಪುಣ್ಯದ ಫಲವಾಗಿದೆ. ಈ ದಿನ, ಕ್ಷಣ ಯಾವ ರೀತಿ ಸ್ವೀಕರಿಸಬೇಕು ಎನ್ನುವುದು ತಿಳಿಯುತ್ತಿಲ್ಲ. ನನ್ನನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿ ಗೌರವಿಸಿದ ಆರಾದ್ರಿಮಠ ಅವರಿಗೆ ಧನ್ಯವಾದಗಳು ಎಂದರು. ಕರುನಾಡು ಸೇವಕರು ರಾಜ್ಯಾಧ್ಯಕ್ಷ ರುಪೇಶ ರಾಜಣ್ಣ ಮಾತನಾಡಿದರು.
ಮುರಗೋಡ ನೀಲಕಂಠ ಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು.
ಹುಕ್ಕೇರಿ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಮತಗಿ ಹುಚ್ಚೇಶ್ವರ ಸ್ವಾಮೀಜಿ, ಮಾಯಾಕರ ಗುರುಕುಲಕದ ಮೂಗುರು ಮಧು ದಿಕ್ಷಿತ ಗೂರುಜಿ, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಮೂರ್ತಿ ದೇವರು, ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ, ಅರಳಿಟ್ಟಿ ಶಿವಮೂರ್ತಿ ದೇವರು ಸಾನಿಧ್ಯವಹಿಸಿದ್ದರು.
ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಆಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಸದಸ್ಯರಾದ ಬಾಬು ಕುಡಸೋಮನ್ನರ, ಉಳವಪ್ಪ ಬಡ್ಡಿಮನಿ, ಸುಧೀರ ವಾಲಿ, ಮುಖ್ಯಾಧಿಕಾರಿಗಳಾದ ಕವಿರಾಜ ನಾಗನೂರ, ಶಿವಾನಂದ ಹಿರೇಮಠ, ಹಿರಿಯರಾದ ಮಲ್ಲಿಕಾರ್ಜುನ ಬೋಳನ್ನವರ, ಪಾಂಡಪ್ಪ ಇಂಚಲ,
ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಶಿವು ನಂದಗಾಂವ, ಮುರಗೇಶ ಗುಂಡ್ಲೂರ, ಜಿಲ್ಲಾಧ್ಯಕ್ಷ ಶಿವಾನಂದ ದೇವರವರ, ಸಾಹಿತಿ ಗೋದಾವರಿ ಪಾಟೀಲ ವೇದಿಕೆಯಲ್ಲಿ ಇದ್ದರು.
ಸರಿಗಮಪ ಮುಖ್ಯಸ್ಥ ಸಚಿನ ಪ್ರಕಾಶ, ಗಾಯಕಿ ಸಾದ್ವಿನಿ ಗ್ರ್ಯಾಂಡ್ ಫಿನಾಲೆಯ ಯುವ ಗಾಯಕ, ಗಾಯಕಿರನ್ನು ಆಯ್ಕೆಗೊಳಿಸಿದರು.
ಗಾಯಕಿ ಸ್ವಾತಿ ಸುತಾರ ಪ್ರಥಮ, ವರ್ಷಿಣಿ ಶೆಟ್ಟಿ ದ್ವಿತೀಯ, ಶಿವಪುತ್ರಯ್ಯ ಸಿಮಿಕೇರಿಮಠ ತೃತೀಯ ಸ್ಥಾನ ಪಡೆದರು.