ಜಮಖಂಡಿ

ಜಮಖಂಡಿ ನಗರಸಭೆ ಸಾಮಾನ್ಯ ಸಭೆ: ಅಧಿಕಾರಿಗಳ ತರಾಟೆಗೆ

ಜಮಖಂಡಿ ನಗರಸಭೆ ಸಾಮಾನ್ಯ ಸಭೆ: ಅಧಿಕಾರಿಗಳ ತರಾಟೆಗೆ

ಜಮಖಂಡಿ 01: ನಗರದಲ್ಲಿ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಯಾವದೇ ಸದಸ್ಯರ ಗಮನಕ್ಕೆ ತರದೆ ಟೆಂಡರ ಹೇಗೆ ಮಾಡಿದಿರಾ. ಕಳಪೆ ಮಟ್ಟದ ಕಾಮಗಾರಿ ಕುರಿತು ಕೇಳಿದರೆ ಉಡಾಪೆ ಉತ್ತರ ನೀಡುತ್ತಿದ್ದಾರೆಂದು ಎಂದು ಮಾಜಿ ಅಧ್ಯಕ್ಷ, ಸದಸ್ಯ ಸಿದ್ದು ಮೀಶಿ ಪೌರಾಯುಕ್ತರನ್ನು ಪ್ರಶ್ನಿಸಿದರು. 

ಸ್ಥಳೀಯ ನಗರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಅದಕ್ಕೆ ಪ್ರತಿಕ್ರಿಯಿದ ಪೌರಾಯುಕ್ತ ಜೋತಿ ಗೀರೀಶ, ಕಳಪೆ ಮಟ್ಟದ ಕಾಮಗಾರಿಯ ಕೆಲಸಗಳನ್ನು ಮಾಡಿದವರ ಬಿಲ್ಲು ಯಾವುದೇ ಕಾರಣಕ್ಕೂ ತೆಗೆಯಲಾಗುವುದಿಲ್ಲ ಎಂದರು. 

ಸದಸ್ಯೆಯರಾದ ಪೂಜಾ ವಾಳ್ವೇಕರ, ಮಲ್ಲಮ್ಮ ಪಾಯಗೊಂಡ ಮಾತನಾಡಿ, ನಮ್ಮ ವಾರ್ಡಗಳಲ್ಲಿ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮಕ್ಕೆ ತಂದರು ಕ್ಯಾರೆ ಮಾಡುತ್ತಿಲ್ಲ. ಇದ್ದರಿಂದ ಅಲ್ಲಿನ ನಿವಾಸಿಗಳು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುವಂತ ಪರಿಸ್ಥಿತಿ ಬಂದಿದೆ ಎಂದರು. 

ಸದಸ್ಯ ಕುಶಾಲ ವಾಗಮೋರೆ ಮಾತನಾಡಿ, ಗಣೇಶ ಹಬ್ಬ ಸಮೀಪಕ್ಕೆ ಬಂದಿದೆ. ಅದಕ್ಕಾಗಿ ಕೆರೆಯಲ್ಲಿ ಗಣೇಶನ ವಿಸರ್ಜನೆ ಮಾಡುವದಕ್ಕೆ ಪ್ರತ್ಯಕವಾಗಿ ಒಂದು ಕಟ್ಟೆಯನ್ನು ನಿರ್ಮಿಸಿದರೆ ಗಣೇಶನ ವಿಸರ್ಜನೆ ಮಾಡಲು ಅನುಕೂಲವಾಗುತ್ತದೆ. ಹಾಗೂ ಡ್ರೇನೆಜ್‌ಗಳ ಸಮಸ್ಯೆಗಳು ತುಂಬಾ ಇದೆ. ವಾರ್ಡಗಳಲ್ಲಿ ರಸ್ತೆಗಳು ಹಾಳಾಗಿವೆ ಅಧಿಕಾರಿಗಳು ಕೆಲಸ ಯಾವುದೇ ಕೆಲಸ ಮಾಡುತ್ತಿಲ್ಲ ಎಂದರು. 

ಸದಸ್ಯೆರು ಕೇಳುವ ಪ್ರಶ್ನೆಗಳಿಗೆ ಪೌರಾಯುಕ್ತರು ದಾಖಲೆಗಳನ್ನು ತರಲು ಸಿಬಂದಿಗಳಿಗೆ ತಿಳಿಸಿದರು. ಆದರೆ ಸಿಬಂದಿಗಳು ಸರಿಯಾದ ಮಾಹಿತಿಯನ್ನು ನೀಡದಕ್ಕೆ. ಪೌರಾಯುಕ್ತ ಮಾತನಾಡಿ, ಈ ಸಭೆಯಲ್ಲಿ ನಮ್ಮ ಅಣ್ಣ,ತಂಮ್ಮದಿರು ಬಂದಿರುವುದಲ್ಲ. ನಗರದ ಗಣ್ಯವಕ್ತಿಗಳು ಇರುತ್ತಾರೆ. ಸಭೆಗೆ ಬರುವಾಗ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಬರಬೇಕು ಎಂದು ಖಡಕ್ಕಾಗಿ ಎಚ್ಚರಿಕ್ಕೆಯನ್ನು ನೀಡಿದರು. 

ಬೀದಿನಾಯಿಗಳು ಹಾಗೂ ಬೀದಿದನಗಳ ಹಾವಳಿ ನಗರದಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಿ ಎಂದು ಸದಸ್ಯರು ಪೌರಾಯುಕ್ತರನ್ನು ಪ್ರಶ್ನೀಸಿದರು. ಅದಕ್ಕೆ ಉತ್ತರಿಸಿದ ಅವರು. ಬೀದಿದನಗಳ ಮಾಲಿಕರಿಗೆ ದನಗಳನ್ನು ಬಿಡದ ಹಾಗೆ ಎಚ್ಚರಿಕ್ಕೆ ನೀಡಲಾಗಿದೆ. ಇನ್ನೂ ಬೀದಿನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. 

ಸದಸ್ಯೆ ಮಲ್ಲಮ್ಮ ಪಾಯಗೊಂಡ ಮಾತನಾಡಿ, ಎಷ್ಟು ಬಾರಿ ಬೀದಿನಾಯಿಗಳ ಹಾವಳಿ ಬಗ್ಗೆ ಪೌರಾಯುಕ್ತರ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ನೀವುಗಳು ಸಭೆಯಲ್ಲಿ ಮಾತ್ರ ಕ್ರಮ ತೆಗೆದುಕೊಳ್ಳುತ್ತೆವೆಂದು ಹೇಳುತ್ತಿರಿ. ಯಾವ ಕ್ರಮ ತೆಗೆದುಕೊಂಡಿರಾ ಎಂದು ಪ್ರಶ್ನೀಸಿದಕ್ಕೆ. ಪೌರಾಯುಕ್ತ ಜೋತಿಗೀರೀಶ ಕೋಪಗೊಂಡವರ ಹಾಗೆ ಮೇಡಂ ನಾನೇನು ಇಲ್ಲಿ ಕಳತನ ಮಾಡಲು ಬಂದಿದೆನಾ, ನೀವುಗಳು ಸಮಾಧಾನದಿಂದ ಮಾತನಾಡಿ. ಒಂದು ಬೀದಿನಾಯಿ, ಹಾಗೂ ಒಂದು ಬೀದಿದನ ಹಿಡಿಯಲ್ಲು ಖರ್ಚು ಕಡಿಮೆಯಿಲ್ಲ. ಅದಕ್ಕೆ ಸರಕಾದಿಂದ ಅನುದಾನ ಬಂದರೆ ನಾವುಗಳು ಮೊದಲು ಕೆಲಸ ಮಾಡುತ್ತೇನೆ. ಈ ವಿಷಯದ ಬಗ್ಗೆ ಸಭೆಯಲ್ಲಿ ಮಾತನಾಡುವುದಿಲ್ಲ. ಸಭೆ ಮುಗಿದ ಬಳಿಕ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಇವಾಗ ಮಾಧ್ಯಮದವರು ಅದನ್ನೇ ಬರೆಯುತ್ತಾರೆ ಎಂದರು. 

ಸದಸ್ಯ ಗುರುಪಾದ ಮೆಂಡಿಗೇರಿ ಮಾತನಾಡಿ, ನಗರದ ಜನತೆಗೆ ದಿನದ 24 ಗಂಟೆ ನೀರು ಕೊಡುತ್ತೇವೆ ಎಂದು ಹೇಳಿ ಹಣ ಕಟ್ಟಿಸಿಕೊಂಡು ಮೂರಾಲ್ಕು ದಿನಕ್ಕೊಮ್ಮೆ ನೀರು ಬಿಟ್ಟರೆ ಹೆಂಗ್ರಿ, ಕನಿಷ್ಠ ಒಂದಿನ ಬಿಟ್ಟು ಒಂದಿನವಾದ್ರು ನೀರು ಕೊಡುವ ವ್ಯವಸ್ಥೆ ಮಾಡಿ ಎಂದರು. 

ಪೌರಾಯುಕ್ತ ಮಾತನಾಡಿ, ಪ್ರತಿದಿನ 50 ಲಕ್ಷ ಲೀಟರ್ ನೀರಿನ ಬೇಡಿಕೆ ಇದೆ. ನಗರದಲ್ಲಿ ಪ್ರತಿ ಮನೆಗೆ ಪೈಪ್‌ಲೈನ್ ಜೋಡಣೆಯಾಗಿದೆ. ನಮಗೆ 14 ಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ಇದನ್ನು ಸರಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಮೃತ ಯೋಜನೆಯಡಿ 19 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಜಿಎಲ್‌ಬಿಸಿ ಅತಿಥಿಗೃಹ ಹತ್ತಿರ 10 ಲಕ್ಷ ಲೀಟರ್‌ವಿದ್ದು, ಸಾಯಿಬಾಬಾ ಮಂದಿರ ಹತ್ತಿರ ಸೇರಿ ಎತ್ತರ ಪ್ರದೇಶದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕರ್ ನಿರ್ಮಿಸಲಾಗುವುದು. ಹಳೇ ಪೈಪ್‌ಲೈನನ್ನೆ ದುರಸ್ತಿ ಮಾಡಿಸಿ, 400 ಎಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್‌ಗಳನ್ನು ವಿದ್ಯುತ್ ಟ್ರಾನ್ಸಾ-್ಫರ್ಮರ್‌ಗಳನ್ನು ಅಳವಡಿಸಿದರೆ ಮಾತ್ರ ಪ್ರತಿ ದಿನ ನೀರು ಪೊರೈಸಲು ಸಾಧ್ಯ ಎಂದರು. 

ಗುತ್ತಿಗೆ ಕಾರ್ಮಿಕರನ್ನು ಪೂರೈಸುವ ಜೈ ಭಾರತ ಮಾತೆ ಎನ್‌ಜಿಒ ಗುತ್ತಿಗೆದಾರರು 50 ಸಾವಿರ ರೂ. ತೆಗೆದುಕೊಂಡು ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ, ಅವರು ಗುತ್ತಿಗೆ ಪಡೆಯಲು ಶೇ. 1 ಪಸೆಂರ್ಟೇಜ್‌ನಲ್ಲಿ ಗುತ್ತಿಗೆ ಪಡೆದಿದ್ದಾರೆ. ಅದು ಹೇಗೆ ಸಾಧ್ಯವಾಗುತ್ತದೆ? ನಗರ ಸ್ವಚ್ಛಮಾಡುವ ಕಾರ್ಮಿಕರ ಹಣ ಪೋಲಾಗಬಾರದು. ದುಡಿದ ಕಾರ್ಮಿಕರ ಹಣ ತಿನ್ನುವುದು ಪಾಪದ ಕೆಲಸ. ಈ ಗುತ್ತಿಗೆಯನ್ನು ಪುನಃ ಕರೆಯಬೇಕು ಎಂದು ಸದಸ್ಯ ಸಿದ್ದು ಮೀಶಿ ಒತ್ತಾಯಿಸಿದರು. 

ಪೌರಾಯುಕ್ತ ಜ್ಯೋತಿಗೀರೀಶ ಮಾತನಾಡಿ, ನಗರದಲ್ಲಿ ಉದ್ಯಮ ಪರವಾನಗಿ ಶುಲ್ಕವನ್ನು 12 ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಈ ಬಾರಿ ಪರಿಷ್ಕರಣೆ ಮಾಡಲಾಗುವುದು. ಏಕ ನಿವೇಶನ ಅಭಿವೃದ್ಧಿ ಶುಲ್ಕವನ್ನು 52 ರೂ.ಗೆ ಹೆಚ್ಚಿಸಲಾಗುತ್ತದೆ ಎಂದರು. 

ಸದಸ್ಯರಾದ ಸಿದ್ದು ಮೀಶಿ, ಈಶ್ವರ ವಾಳೆನ್ನವರ, ದಿಲಾವರ ಶಿರೋಳ ಮಾತನಾಡಿ, ಶೇ.30ಕ್ಕಿಂತ ಕಡಿಮೆಗೆ ಗುತ್ತಿಗೆ ಪಡೆದು ಕೆಲಸ ಮಾಡುವುದರಿಂದ ಕಳಪೆ ಕಾಮಗಾರಿಯಾಗುತ್ತದೆ. ಅಂತಹುದಕ್ಕೆ ಯಾವುದಕ್ಕೂ ಅವಕಾಶ ನೀಡಬೇಡಿ ಎಂದರು. 

ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಉಪಾಧ್ಯಕ್ಷೆ ರೇಖಾ ಕಾಂಬಳೆ ಸಭೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ