ಜಕಾರಟ್ಟಿ: 40ಕ್ಕೂ ಹೆಚ್ಚು ಧುರೀಣರು ಕಾಂಗ್ರೆಸ್ ತೊರೆದು ಬಿಜೆಪಿ ಸೇರೆ್ಡ
ಅಥಣಿ 30: ಕಾಗವಾಡ ಮತಕ್ಷೇತ್ರದ ಜಕಾರಟ್ಟಿ ಗ್ರಾಮದ 40ಕ್ಕೂ ಹೆಚ್ಚು ಧುರೀಣರು ಕಾಂಗ್ರೆಸ್ ತೊರೆದು ಬಿಜೆಪಿ ಧುರೀಣ ಶ್ರೀನಿವಾಸ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಸೇರೆ್ಡಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಜಕಾರಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ದು ಖೋತ, ಹಿಂದುಳಿದ ಕಾಗವಾಡ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ನೀರಾವರಿ ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಗೊಳಿಸಿದ್ದಾರೆ ಎಂದರು.
ಕ್ಷೇತ್ರದ ಜನರ ನಿರಂತರ ಸಂಪರ್ಕ ದಲ್ಲಿರುವ ಶಾಸಕ ಶ್ರೀಮಂತ ಪಾಟೀಲ ಹಾಗೂ ಬಿಜೆಪಿ ಯುವ ಧುರೀಣ ಶ್ರೀನಿವಾಸ ಪಾಟೀಲ ಜನಪರ ಕಾಳಜಿಯುಳ್ಳವರಾಗಿದ್ದು, ಕೊರೋನಾ, ಮಹಾಪುರ, ಬರಗಾಲದಂತಹ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನರಿಗೆ ಸಹಕಾರ ನೀಡಿದ್ದಾರೆ ಎಂದ ಅವರು ಇದನ್ನೆಲ್ಲ ಗಮನಿಸಿದ ಮತದಾರರು ಶ್ರೀಮಂತ ಪಾಟೀಲರಿಗೆ ವ್ಯಾಪಕ ಬೆಂಬಲ ಕೊಡುತ್ತಿದ್ದು, ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀಮಂತ ಪಾಟೀಲರ ಗೆಲುವು ನಿಶ್ಚಿತ ಎಂದರು.
ಯುವ ಮುಖಂಡ ಶ್ರೀನಿವಾಸ ಪಾಟೀಲ, ಜಕಾರಟ್ಟಿ ಗ್ರಾಮದ ಮುಖಂಡರಾದ ರಾವಸಾಬ ಗೋರೆ್ಡ, ವಿಠ್ಠಲ ಖೋತ, ಸಿದ್ರಾಮ ಖೋತ, ಸಚೀನ ಜಗತಾಪ, ಸಂಜಯ ಜಗತಾಪ, ಗಜಾನನ ಜಗತಾಪ, ಸಂಜಯ ಶಿಂದೆ, ಪ್ರಕಾಶ ಸಾವಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.