ಅಥಣಿ

ಮಕ್ಕಳಿಗೆ ಅಭ್ಯಾಸದೊಂದಿಗೆ ಸಂಸ್ಕಾರಗಳ ಅರಿವು ಮೂಡಿಸುವುದವಶ್ಯಕ ; ಶಿಕ್ಷಕಿ ಡಾ.ಅರ್ಚನಾ ಅಥಣಿ ಅಭಿಮತ: ಸ್ಪಾರ್ಕಲಿಂಗ್ ಕಿಡ್ಸ ಮಾಂಟೆಸರಿಯಲ್ಲಿ ಮಾತೃವಂದನಾ ಕಾರ್ಯಕ್ರಮ

ಮಕ್ಕಳಿಗೆ ಅಭ್ಯಾಸದೊಂದಿಗೆ ಸಂಸ್ಕಾರಗಳ ಅರಿವು ಮೂಡಿಸುವುದವಶ್ಯಕ  ; ಶಿಕ್ಷಕಿ ಡಾ.ಅರ್ಚನಾ ಅಥಣಿ ಅಭಿಮತ: ಸ್ಪಾರ್ಕಲಿಂಗ್ ಕಿಡ್ಸ ಮಾಂಟೆಸರಿಯಲ್ಲಿ ಮಾತೃವಂದನಾ ಕಾರ್ಯಕ್ರಮ

ಲೋಕದರ್ಶನ ವರದಿ 


ಅಥಣಿ 24: ಒತ್ತಡ ರಹಿತ ವಾತಾವರಣದಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಶಾಲೆಯ ಕಾರ್ಯ ಶ್ಲಾಘನೀಯ ಎಂದು ಶಿಕ್ಷಕಿ ಡಾ.ಅರ್ಚನಾ ಅಥಣಿ ಹೇಳಿದರು. 

  ಅಥಣಿಯ ಮಿರಜ ಎಜುಕೇಶನ್ ಟ್ರಸ್ಟನ ಸ್ಪಾರ್ಕಲಿಂಗ್ ಕಿಡ್ಸ ಮಾಂಟೆಸರಿಯ ಮಾತೃವಂದನಾ ಕಾರ್ಯಕ್ರಮದ ಅತಿಥಿಯಾದ 

 ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಪುಸ್ತಕಗಳ ಅಭ್ಯಾಸದೊಂದಿಗೆ ಸಂಸ್ಕಾರಗಳನ್ನು ನೀಡುವುದು ಅವಶ್ಯಕ, ತಂದೆ ತಾಯಿ ಗುರುಹಿರಿಯರ ಬಗ್ಗೆ ಗೌರವ, ಶಾಲೆಯ ಶಿಕ್ಷಕರೊಂದಿಗೆ ಗೌರವಭಾವನೆ ತಿಳಿಸಕೊಡಬೇಕು, ಮಕ್ಕಳಿಗೆ ಕಲಿಯುತ್ತಿರು ಶಿಕ್ಷಣದ ಮಹತ್ವ   ಕಲಿಕೆಯಲ್ಲಿ  ಸ್ವಚ್ಛವಾದ ಮನಸ್ಸಿನಿಂದ, ಶುದ್ಧ  ಶಾಲೆಗೆ ಬಂದಿರುತ್ತಾರೆ, ಒಳ್ಳೆಯ ಸಂಸ್ಕಾರಗಳನ್ನು ಹಾಗೂ ಒಳ್ಳೆಯ ಆದರ್ಶ ಗುಣಗಳನ್ನು ನೀಡಿದಲ್ಲಿ ಮಾತ್ರ ಅತ್ಯುತ್ತಮ ನಾಗರಿಕರಾಗಲು ಸಾಧ್ಯ,  ಮಕ್ಕಳಿಗೆ ತಾಯಿಯ ಬಗೆಗೆ ಇರಬೇಕಾದ ಪ್ರೀತಿ ವಾತ್ಸಲ್ಯ ಮಮತೆಯೊಂದಿಗೆ ತಾಯಿಯಿಂದ ದೊರೆತ ಆದರ್ಶಗಳನ್ನೂ ಸಹ ಮೈಗೂಡಿಸಿಕೊಳ್ಳಬೇಕು ಎಂದರು  

            ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ ಮಾತನಾಡಿ ಪ್ರತಿನಿತ್ಯದ ಜೀವನದಲ್ಲಿನ ನಮ್ಮ ನಡುವಳಿಕೆಗಳು ಮಕ್ಕಳ ಮೇಲೆ ಗಾಢ ಪ್ರಭಾವ ಬೀರುತ್ತವೆ, ನಾವು ಮನೆಯಲ್ಲಿ ಆಚರಿಸುವ ಕ್ರಮಗಳನ್ನು ಮಕ್ಕಳು ಅನುಸರಿಸುತ್ತಾರೆ, ಮಕ್ಕಳು ಹೇಳಿದ್ದನ್ನು ಕೇಳಿ ಕಲಿಯುವುದಕ್ಕಿಂತ ನಾವು ಮಾಡಿದ್ದನ್ನು ನೋಡಿ ಅದನ್ನು ತಮ್ಮಲ್ಲಿ ಅಳವಡಿಸಕೊಂಡು ಕಲಿಯುತ್ತಾರೆ  ತಂದೆ ತಾಯಿಗಳ, ಶಾಲಾ ಶಿಕ್ಷಕರ, ಅನುಕರಣೆ ಮಾಡುತ್ತಾರೆ ತಮ್ಮ ನಡವಳಿಕೆಯಲ್ಲಿ ಮಕ್ಕಳು ತಮ್ಮನ್ನು ಗಮನಿಸುತ್ತಿದ್ದಾರೆ ಎನ್ನುವ ಎಚ್ಚರಿಕೆಯಿಂದ ಇರಬೇಕು ಎಂದರು. ಅವರು ನಮ್ಮ ನಡವಳಿಕೆ ಸಂಸ್ಕಾರಯುತರಾಗಿದ್ದಲ್ಲಿ ಮಕ್ಕಳೂ ಸಹ ಸುಸಂಸ್ಕೃತರಾಗುತ್ತಾರೆ ಎಂದು ಹೇಳಿದರು. 


      ವಿಧ್ಯಾರ್ಥಿಗಳಿಂದ ದೇಶ ಭಕ್ತಿಗೀತೆ, ಜಾನಪದ ಗೀತೆ, ನಾಟಕ,  ಮನರಂಜನಾ ಕಾರ್ಯಕ್ರಮ ಜರುಗಿದವು. ವಿಶೇಷವಾಗಿ ‘ಮಾ’ ಎಂದು ವಿವಿಧ ಭಾಷೆಗಳಲ್ಲಿ ಬರೆದ ಸೆಲ್ಫಿ ಕಾರ್ನರ್ ಎಲ್ಲ ತಂದೆ ತಾಯಿಯರ ಮತ್ತಿತರನ್ನು ಗಮನ ಸೆಳೆಯಿತು             

     

     ಮಿರಜ ಎಜುಕೇಶನ್ ಟ್ರಸ್ಟನ ಡಾ.ಪ್ರಮೋದ ಮಿರಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸುಮೇಧಾ ಮಿರಜ ಹಾಗೂ ಡಾ.ಸಚೀನ ಮಿರಜ ಪರಿಚಯಿಸಿದರು, ಡಾ.ನಿರಧಿ ಮಿರಜ ವಂದಿಸಿದರು, ನಾಗಾರ್ಜುನ ಕರ್ನಾಟಕಂ, ಪಾಲಕರು, ಸಿಬ್ಬಂದಿ ವರ್ಗ, ವಿದ್ಯಾಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ