ಚಿರತೆ ಬಂದಿದೆ ಎಂಬುದು ಸುಳ್ಳು ವದಂತಿ
ಇಂಡಿ 03: ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಕಬ್ಬಿನ ತೋಟ ಒಂದರಲ್ಲಿ ಚಿರತೆ ಕಂಡು ಬಂದಿದೆ ಎಂದು ಇಂದು ಮಂಗಳವಾರ ಬೆಳಗ್ಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದುದನ್ನು ನೋಡಿದ ಜನರು ಭಯಭೀತರಾದರು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಇದು ಸುಳ್ಳು ವದಂತಿ ಆಗಿದೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಇಂಡಿ ಅರಣ್ಯ ಇಲಾಖೆಯ ಅಧಿಕಾರಿ ಎಸ್ ಜಿ ಸಂಗಾಲಕ ತಿಳಿಸಿದ್ದಾರೆ. ಆದರು ಕೂಡಾ ನಾವು ಈಗ ಅಥರ್ಗಾ, ಬೆನಕನಹ್ಳಿ, ಗ್ರಾಮದ ಅಡವಿ ಪ್ರದೇಶದಲ್ಲಿ ಇದ್ದೇವೆ ಎಂದು ಹೇಳಿದರು. ಆದರೆ ನಿಜಕ್ಕೂ ಚಿರತೆ ಬಂದಿದೆ, ಇಲ್ಲವೋ ಗೊತ್ತಿಲ್ಲ, ಆ ಒಂದು ವಿಡಿಯೋ ತುಣುಕು ಜನರನ್ನು ನಿದ್ದೆಗಡಿಸಿದ್ದು ಮಾತ್ರ ಸುಳ್ಳಲ್ಲ.