ಇರಾನ್ ಮತ್ತೆ ಪರಮಾಣು ಕೇಂದ್ರ ಮರು ನಿರ್ಮಾಣಕ್ಕೆ ಮುಂದಾದ್ರೆ ಭೀಕರ ದಾಳಿ: ಟ್ರಂಪ್

ಇರಾನ್ ಮತ್ತೆ ಪರಮಾಣು ಕೇಂದ್ರ ಮರು ನಿರ್ಮಾಣಕ್ಕೆ ಮುಂದಾದ್ರೆ ಭೀಕರ ದಾಳಿ: ಟ್ರಂಪ್ Iran will face a massive attack if it rebuilds nuclear facility: Trump

ವಾಷಿಂಗ್ಟನ್ 25:‌ ಅಮೆರಿಕದ ವಾಯುಪಡೆ ದಾಳಿಯಲ್ಲಿ ಇರಾನ್ ಪರಮಾಣು ಘಟಕಗಳು ಸಂಪೂರ್ಣವಾಗಿ ನಾಶವಾಗಿರುವುದಾಗಿ ತಿಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್‌, ಒಂದು ವೇಳೆ ಇರಾನ್ಮತ್ತೆ ಪರಮಾಣು ಸ್ಥಾವರಗಳನ್ನು ಪುನರ್ನಿಮಾಣ ಮಾಡಲು ಹೊರಟರೆ ಅಮೆರಿಕ ಮತ್ತೆ ಭೀಕರ ದಾಳಿ ನಡೆಸಲಿದೆ ಎಂದು ಎಚ್ಚರಿಸಿರುವುದಾಗಿ ವರದಿ ವಿವರಿಸಿದೆ.

ಅಮೆರಿಕ ಸೇನಾಪಡೆಯ ಬಾಂಬ್ದಾಳಿಯ ಪರಿಣಾಮ ಇರಾನ್ನ್ಯೂಕ್ಲಿಯರ್ಶಸ್ತ್ರಾಸ್ತ್ರಗಳನ್ನು ತಯಾರಿಸುವ ಸಾಮರ್ಥ್ಯವನ್ನು ನಾಶ ಮಾಡಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಪೀಟ್ಹೆಗ್ಸೆಥ್ಹೇಳಿಕೆಯ ನಂತರ ಟ್ರಂಪ್ ಪ್ರತಿಕ್ರಿಯೆ ಹೊರಬಿದ್ದಿರುವುದಾಗಿ ವರದಿ ತಿಳಿಸಿದೆ.

ಹೌದು ನಾವು ಪ್ರತಿಯೊಂದನ್ನು ಪರಿಶೀಲಿಸಿದ ಆಧಾರದಂತೆ, ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶ ಮಾಡಿದ್ದೇವೆ. ನಮ್ಮ ಗಜಗಾತ್ರದ ಬಾಂಬ್ಗಳು ನೇರವಾಗಿ ಪರಮಾಣು ಸೌಕರ್ಯದ ನೆಲೆಗಳನ್ನು ಧ್ವಂಸಗೊಳಿಸಿಬಿಟ್ಟಿದೆ. ದಾಳಿಯ ಹೊಡೆತಕ್ಕೆ ಇರಾನ್ ಪರಮಾಣು ಭೂಗತ ಸ್ಥಾವರದ ಅವಶೇಷಗಳು ಪರ್ವತದೊಳಗೆ ಹೂತುಹೋಗಿದೆ ಎಂದು ಹೆಗ್ಸೆಥ್ತಿಳಿಸಿರುವುದಾಗಿ ಸಿಎನ್ಎನ್ವರದಿ ಮಾಡಿದೆ.

ಆದರೆ ಗುಪ್ತಚರ ಮೂಲಗಳ ಮಾಹಿತಿಯಂತೆ, ಇರಾನ್ ನ್ಯೂಕ್ಲಿಯರ್ಘಟಕಗಳ ಸೆಂಟ್ರಿಫ್ಯೂಜಸ್ಬಹುತೇಕ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಅಮೆರಿಕದ ದಾಳಿಗೂ ಮುನ್ನ ಇರಾನ್ತನ್ನ ಬಳಿ ಇದ್ದ ಯುರೇನಿಯಂ ಅನ್ನು ರಹಸ್ಯ ಸ್ಥಳಕ್ಕೆ ಸಾಗಿಸಿರುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.