ಪುಸ್ತಕಗಳು

'ಹೆಜ್ಜೆ ಗುರುತು' ಕವನ ಸಂಕಲನ ಪರಿಚಯ

'ಹೆಜ್ಜೆ ಗುರುತು' ಕವನ ಸಂಕಲನ ಪರಿಚಯ

ಗದಗ ಜಿಲ್ಲೆಯ ಮಲ್ಲಸಮುದ್ರ ಮೂಲದ ಶ್ರೀ ಬಿ ಎಂ ಪಾಟೀಲ್ ಮತ್ತು ಲಿಂಗೈಕ್ಯ ಶರಣೆ ಅಕ್ಕ ಮಹಾದೇವಿ ಪಾಟೀಲ ಇವರ ಹಿರಿಯ  ಮಗಳು ಶರಣೆ ಸುಧಾ   ಶಿವಾನಂದ ಟೀಲರು ಒಬ್ಬ ಅತ್ಯಂತ ಸೃಜನಶೀಲ ಕವಯಿತ್ರಿ ಎಂದು ಗುರುತಿಸಿಕೊಂಡ ಶರಣ ಜೀವಿ .ಬೆಳಗಾವಿ ಜಿಲ್ಲೆಯ ಲೇಖಕ ಲೇಖಕಿಯವರ ಸಮುದಾಯದಲ್ಲಿ ಕೊಡುಗೈ   ದಾನಿ ಎಂದು ಪ್ರತೀತಿ ಪಡೆದಿದ್ದಾರೆ  .  ಇವರು ಅನೇಕ ಲೇಖನ ಶರಣ ಸಾಹಿತ್ಯದ ವಚನ ವಿಶ್ಲೇಷಣೆ ಗಜಲ್ ವಿಮರ್ಶೆ ಕವನಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  

ಈಗ ಇವರು ಹೆಜ್ಜೆ ಗುರುತು ಎಂಬ 100  ಕವನಗಳನ್ನೊಳಗೊಂಡ ಕವನ ಸಂಕಲನ ಹೊರ ತರುತ್ತಿರುವುದು ಕನ್ನಡ ಸಾಹಿತ್ಯ ಲೋಕದ  ಸಂಭ್ರಮದ ಸಂಗತಿ ಎಂದೇ ಹೇಳಬಹದು .  ಇದು ಸುಧಾ ಅವರ ಚೊಚ್ಚಲ ಕವನ ಸಂಕಲನ .ಮೊದಲನೆಯ ಕವನ ಸಂಕಲನದಲ್ಲಿ ಶತಕ ಬಾರಿಸಿದ ಗಟ್ಟಿ ಕನ್ನಡತಿ.      ಇವರ ನೂರು ಕವನ ವಿಮರ್ಶೆ ನಿಜಕ್ಕೂ ಕಷ್ಟದಾಯಕ, ಕೆಲವು ಕವನಗಳನ್ನು ನಾನಿಲ್ಲಿ ತೆಗೆದುಕೊಂಡಿರುವೆ.       ಅವರ   ಕಾಡುತಿವೆ  ನೆನಪುಗಳು ಎಂಬ ಕವನದಲ್ಲಿ ಹುಟ್ಟಿಕೊಂಡ ಭಾವಗಳಿಗೆ ನೆನಪುಗಳಿಗೆ ಸ್ಪಂದಿಸುವ ಮನಸ್ಸು ಅಭಿವ್ಯಕ್ತಗೊಂಡಿದೆ.ಹೃದಯದ  ಮೂಲೆಯಲ್ಲಿಹುಟ್ಟುತಿವೆ  ನೆನಪುಗಳುಕಾಡುತಿವೆ  ಬಿಡಿಬಿಡಿಯಾಗಿ ಅನುಕ್ಷಣವೂ  ಅನುದಿನವೂ  ಎನ್ನುವಲ್ಲಿ ಕಾಡುವ ನೆನಪುಗಳೊಂದಿಗೆ ತಮ್ಮ ಸಂತಸ ಹಂಚಿಕೊಳ್ಳುವ ಭಾವ ಜೀವಿ ಕವಯಿತ್ರಿ ಇದ್ದು  ಬಿಡು  ಇಲ್ಲದಂತೆ ಎನ್ನುವ ಕವಯಿತ್ರಿ ವಾಸ್ತವಿಕ ಜಗತ್ತಿನ ಟೀಕೆ ವಿಡಂಬನೆ  ವ್ಯಂಗ್ಯ ಮುಂತಾದ ಅನಿಸಿಕೆಗಳಿಗೆ ತಮ್ಮನ್ನೇ ತಾವು ಸಮಾಧಾನಿಸುವ ರೀತಿ ಅಮೋಘವಾದದ್ದು ಇದ್ದು ಬಿಡು ಇಲ್ಲದಂತೆ ಸದ್ದುಗದ್ದಲದೊಳಗೆ ಶಾಂತ ಮೂರ್ತಿಯಾಗಿ    ಅಪೇಕ್ಷೆಯ  ಮೀರಿ  ಮಮತೆಯ ಹಂಚಿ  ಮನದ  ಮೂಲೆಯಲೀದೀಪ  ಬೆಳಗಿಸಿ  ಇದ್ದು  ಬಿಡು ಇಲ್ಲದಂತೆ ಕಾವ್ಯ ಕುಲುಮೆ ಎಂಬ ಕವನದಲ್ಲಿ ಭಾವ ಕವಿಯ ಕುಲುಮೆಯ ಸಾಧನ ಎನ್ನುತ್ತಾ  ಕಾವ್ಯ ಕುಲುಮೆ ಉಸಿರಿನ ಪ್ರತಿ ಕ್ಷಣವೂ ನಿನ್ನಜಪದಲ್ಲಿ ಹೃದಯದ  ಪ್ರತಿ ಬಡಿತವೂನಿನ್ನ  ನೆನಪಲ್ಲಿ ನರ ನಾಡಿಗಳು ಪ್ರತಿ ಮಿಡಿತದಲಿನಿನ್ನ ಸ್ನೇಹ ಪ್ರೀತಿ ಚಿಲುಮೆ ಮನಸಿನ  ಪ್ರತಿ ಕನವರಿಕೆಯೂ ನಿನ್ನ ನಾಮಾವಳಿಯಲ್ಲಿಮಾತಿನ  ಪ್ರತಿ ಶಬ್ದವೂನಿನ್ನ  ಕಾವ್ಯ ಕುಲುಮೆಯಲ್ಲಿ ಕವಯತ್ರಿಯ ಸಂಪೂರ್ಣ ಸಮರಾ​‍್ಣ ಭಾವವು ನರನಾಡಿಗಳಲ್ಲಿ ಪ್ರೀತಿ ಮಾಡುವ ಮನಸಿನಲ್ಲಿ ಇರಬೇಕೆನ್ನುತ್ತಾಳೆ . ಮೌನವು ಮಾತಾದಾಗ  ಎನ್ನುವ  ಕವನದಲ್ಲಿಮೌನವು   ಮಾತಾಯಿತು.  

ಮೌನದ  ಹೊದಿಕೆಯನು ಮನಸಿನ   ಪರದೆಯನು ಬಿಚ್ಚಿ  ಬಿಚ್ಚಿ  ನೀ  ಹರವಲು ಮೌನ   ಮಾತಾಯಿತು  ತನ್ನನ್ನು ಇಷ್ಟ ಪಡುವ ಮನಸಿನ ಪಾರದರ್ಶಕ ಪರದೆ  ಅನಾವರಣಗೊಂಡಾಗ ಖುಷಿ ಸಂತಸದಿಂದ ಮಾತು ಮೌನವಾಯಿತು ಎನ್ನುತ್ತಾರೆ ಕವಯಿತ್ರಿ . ಹೀಗೆ ಇವರ ಕವನದಲ್ಲಿ ಪ್ರಮುಖವಾಗಿ ಪ್ರೇಮ ಕವನ ನೀತಿ ಬೋಧೆ ತತ್ವ ಚಿಂತನೆ  ಮತ್ತು ಸುಮಾರು ಹತ್ತು ವಿವಿಧ ಗಜಲಗಳನ್ನು ರಚಿಸಿದ್ದಾರೆ. ನಾನಿಲ್ಲಿ ಕೆಲ ಪ್ರಾತಿನಿಧಿಕ ಕವನಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಇಲ್ಲಿ ಚರ್ಚಿಸಿದ್ದೇನೆ. ಒಟ್ಟಾರೆ ಇವರ ಕವನ ರಚನಾ ಶೈಲಿ ಭಾಷಾ ಶುದ್ಧತೆ ಪ್ರತಿಮೆಗಳ ಅಳವಡಿಕೆ ಮುಂತಾದ ಕಾವ್ಯ ರಚನೆಯಲ್ಲಿ ಎತ್ತಿದ ಕೈ ಎಂದೇ ಹೇಳಬೇಕಾಗುತ್ತದೆ. ಅದಮ್ಯ ಭಾವ ತೀವ್ರತೆ ಪದಗಳ ಜೋಡಣೆ ಕವನ ರಚನಾ ಕೌಶಲ್ಯ  ಅತ್ಯಂತ ಸುಂದರವಾದದ್ದು. ಕವನಗಳಲ್ಲಿನ ಮಾನವ ಪ್ರೇಮ ಬಾಲ್ಯದ ನೆನಪು ತಮ್ಮ ಪಯಣದಲ್ಲಿ ಕಂಡ ಅನುಭವ ತಮ್ಮ ಬದುಕಿನ ಹೆಜ್ಜೆ ಗುರುತುಗಳನ್ನು ಅರ್ಥಪೂರ್ಣವಾಗಿ ದಾಖಲಿಸುವ ಸುಂದರ ಕವನ ಸಂಕಲನ.    ಇದು ಇವರ ಪ್ರಥಮ ಕವನ ಸಂಕಲನ ಇನ್ನು ಹಲವಾರು ಕವನ ಸಂಕಲನಗಳು ಇವರಿಂದ ರಚಿಸಿಕೊಂಡು ಕನ್ನಡ ಭಾಷೆ ಶ್ರೀಮಂತ ಗೊಳಿಸಲೆಂದು ಆಶಿಸುತ್ತೇನೆ . 


ಸುದ್ದಿ ಓದಿ