ಜಿಹಾದ್ ನಡೆದು ಬಂದ ಹಾದಿ ಆಗುಂಬೆ ನಟರಾಜರ ಕೃತಿ
ಧರ್ಮದ ಮೂಲ ತಳಹದಿಯೇ ಹಿಂಸೆ, ಕ್ರೌರ್ಯವಾದಾಗ ಅದರಿಂದ ಒಳ್ಳೆಯದನ್ನು ನಿರೀಕ್ಷಿಸಲಾಗದು. ಇಸ್ಲಾಂ ಧರ್ಮದ ಸಂಸ್ಥಾಪಕನಾದ ಮೊಹಮ್ಮದನೇ ತನ್ನ ಜೀವಿತ ಕಾಲದಲ್ಲಿ " ಜಿಹಾದ್ ಧರ್ಮಯುದ್ಧಗಳನ್ನು ಪ್ರಾರಂಭಿಸಿದ್ದು ಕುರಾನ್ ಮತ್ತು ಹಾದೀಸ್ ಗಳಲ್ಲಿ ದಾಖಲಾಗಿದೆ. ಅದೇ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಈ ಇಸ್ಲಾಂ ಜಿಹಾದ್ ಇತಿಹಾಸವನ್ನು ಆಗುಂಬೆ ನಟರಾಜರು ಸಮಗ್ರ ಅಧ್ಯಯನದೊಂದಿಗೆ ಆಧಾರ ಸಹಿತವಾಗಿ ಈ ಕೃತಿಯಲ್ಲಿ ನಮೂದಿಸಿದ್ದಾರೆ.
ಆಗುಂಬೆ ನಟರಾಜ ಅವರು ೪೦ ಕ್ಕೂ ಹೆಚ್ಚು ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ. ಯಾವ ವಿಷಯವೇ ಇರಲಿ, ಅದನ್ನು ಆಳವಾಗಿ ಅಭ್ಯಸಿಸಿ, ಸಾಧ್ಯವಾದಲ್ಲೆಲ್ಲ ಸ್ವತಃ ಹೋಗಿ ಪರಿಶೀಲಿಸಿ ಅಗತ್ಯ ಅಂಕಿ ಅಂಶ, ಸಾಕ್ಷ್ಯಾಧಾರಗಳ ಸಹಿತ ಬರೆಯುವವರು. ಯಾವ ಅತಿಶಯೋಕ್ತಿ ಅಥವಾ ಕಪೋಲ ಕಲ್ಪಿತ ವಿಚಾರಗಳಿಲ್ಲದೆ ವಾಸ್ತವವನ್ನು ನಮ್ಮೆದುರಿಗಿಡುವವರು. ಅವರು ಯಾವುದೇ ಲಾಭಕ್ಕಾಗಿ ಪುಸ್ತಕ ಬರೆಯುವವರಲ್ಲ. ಸಾಮಾಜಿಕ ಕಾಳಜಿಯಿಂದ ಸತ್ಯವನ್ನು ನಮ್ಮೆದುರಿಗಿಡುವವರು. ಅವರ ಅನೇಕ ಪುಸ್ತಕಗಳನ್ನು ನಾನು ಓದಿ ಬೆರಗಾಗಿದ್ದೇನೆ. ಅವರ ಇತಿಹಾಸ ಪ್ರಜ್ಞೆ ಅದ್ಭುತವಾದದ್ದು. ಅವರ ವಿಚಾರ ಪೂರ್ವಗ್ರಹಪೀಡಿತವಾದುದಲ್ಲ. ಇಂದು ಧರ್ಮಜಾತಿಗಳ ವಿಚಾರ ಅತ್ಯಂತ ಸೂಕ್ಷ್ಮವಾದುದಾಗಿದೆ. ಅದರ ಕುರಿತು ಮಾತನಾಡುವುದೂ ಅಪಾಯದ ವಿಷಯವೆ. ಅಂತಹ ವಾತಾವರಣದಲ್ಲಿ ಜಿಹಾದ್ ನಂತಹ ವಿಷಯವನ್ನೆತ್ತಿಕೊಂಡು ಬರೆಯಲು ಎಂಟೆದೆ ಬೇಕು.ಅದು ಅಷ್ಟು ಸುಲಭವಲ್ಲ.ಆದರೆ ಆಗುಂಬೆ ನಟರಾಜರಿಗೆ ಯಾವ ವೈಯಕ್ತಿಕ ಹಿತಾಸಕ್ತಿಗಳೂ ಇಲ್ಲವಾದ್ದರಿಂದ ಅವರು ನಿರ್ಭೀತವಾಗಿ ಬರೆಯಬಲ್ಲರು. ಅದು ಮೆಚ್ಚಿಕೊಳ್ಳಬೇಕಾದ ಸಂಗತಿ.
ಜಿಹಾದ್ ನಡೆದು ಬಂದ ಹಾದಿಯನ್ನು ಈ ಕೃತಿಯಲ್ಲಿ ಸಾಕಷ್ಟು ಆಧಾರಗಳೊಂದಿಗೆ ತೆರೆದಿಟ್ಟಿದ್ದಾರೆ. ಅದು ಹಿಂಸಾಮೂಲವಾದ ಒಂದು ದಾರಿ. ಇಸ್ಲಾಂ ಧರ್ಮ ಸಂಸ್ಥಾಪಕನಾದ ಮೊಹಮ್ಮದ್ ಮೂಲತಃ ವ್ಯಾಪಾರಿ ಮತ್ತು ಆಕ್ರಮಣಕಾರಿ ಮನೋಧರ್ಮದವನು. ಓದುಬರೆಹ ಕಲಿತವನಲ್ಲ. ಅವನು ಹೇಗೆ ಒಂದು ಧರ್ಮಪ್ರವರ್ತಕನಾಗಿ ಬದಲಾದನೆಂಬುದನ್ನು ಇಲ್ಲಿ ವಿವರಿಸಲಾಗಿದೆ. ಆತನಿಗೆ ಗೇಬ್ರಿಯಲ್ ನಿಂದ ದೇವರ ಸಂದೇಶ ದೊರಕಿದ ನಂತರ ಮೊಹಮ್ಮದ ಅಲ್ಲಾಹನ ಸಂದೇಶ ಪ್ರಸಾರಕ್ಕೆ ತೊಡಗುತ್ತಾನೆ. ಆದರೆ ಮೆಕ್ಕಾದಲ್ಲಿ ಖುರೈಷಿಗಳಿಂದ ಪ್ರಬಲ ವಿರೋಧ ಎದುರಾದಾಗ ಮದಿನಾಕ್ಕೆ ಪಲಾಯನ ಮಾಡುತ್ತಾನೆ. ಅಲ್ಲಿ ಯಹೂದಿಗಳೊಂದಿಗೆ ಯುದ್ಧ ಪ್ರಾರಂಭಿಸಿ ಅವರನ್ನು ಸೋಲಿಸಿ ಪುರುಷರನ್ನೆಲ್ಲ ಹತ್ಯೆ ಮಾಡಿ ಮಕ್ಕಳು ಮಹಿಳೆಯರನ್ನುಗುಲಾಮಗಿರಿಗೆ ತಳ್ಳುತ್ತಾನೆ.
" ಯುದ್ದ ಮಾಡುವುದು ಶಾಸನಬದ್ಧವಾಗಿದೆ" ಎಂದ ಮೊಹಮ್ಮದ್ ತನ್ನ ಧರ್ಮವನ್ನು ಹರಡಲು ದಂಡಯಾತ್ರೆ ನಡೆಸುತ್ತಾನೆ. ಮೊಹಮ್ಮದನ ನಂತರ ಅವನ ಮಾವ ಅಬುಬಕರ್ ಖಲೀಫಾ ಸ್ಥಾನ ಪಡೆದ. ಮುಂದೆ ಬಂದ ಎಲ್ಲರೂ ಅವನ ಆದೇಶದಂತೆ ನಡೆದುಕೊಂಡರು. " ಜಿಹಾದ್" ಅಂದರೆ ಕಾಫಿರ್ ರನ್ನು ಇಸ್ಲಾಂ ಗೆ ಮತಾಂತರಗೊಳಿಸುವುದು. ಮತಾಂತರಕ್ಕೆ ಒಪ್ಪದಿದ್ದರೆ ಅವರನ್ನು ಹತ್ಯೆ ಮಾಡುವುದು. ಹತ್ಯೆ ಮಾಡಲಾಗದಿದ್ದರೆ ಅವರನ್ನು ಜಿಮ್ಮೀಗಳೆಂದು ಕರೆದು ಅವರಿಂದ ಜಿಜಿಯಾ ತೆರಿಗೆ ವಸೂಲು ಮಾಡುವುದು" ಮೊಹಮ್ಮದನ ಅನುಯಾಯಿಗಳು ಇಂದಿಗೂ ಈ ಸಂದೇಶವನ್ನು ಪಾಲಿಸುತ್ತಿದ್ದಾರೆ. ಆಗುಂಬೆ ನಟರಾಜರು ಕುರಾನ್ ನಲ್ಲಿ ಜಿಹಾದ್ ಬಗ್ಗೆ ಹೇಳಿರುವ ಸುರಾಗಳನ್ನೆಲ್ಲ ಇಲ್ಲಿ ಉದಾಹರಿಸುತ್ತ ಜಗತ್ತಿನಲ್ಲೆಲ್ಲಾ ಇಸ್ಲಾಂ ಧರ್ಮವನ್ನು ಸ್ಥಾಪಿಸಲು ಜಿಹಾದ್ ಅಥವಾ ಧರ್ಮಯುದ್ಧ ಮಾಡಲು ಪ್ರೇರೇಪಿಸುವ ಸುರಾಗಳ ಬಗ್ಗೆ ತಿಳಿಸುತ್ತಾರೆ. ರಕ್ತ ಹರಿಸುವಿಕೆ, ಬಲವಂತದ ಮತಾಂತರ, ಹತ್ಯೆ ಇವೇ ಜಿಹಾದ್ ನ ಮುಖ್ಯ ಅಂಶಗಳು ಮತ್ತು ಆ ದಾರಿಯಲ್ಲೇ ನಡೆಯಬೇಕೆಂದು ಮೊಹ್ಮದ್ ಸಂದೇಶ ನೀಡುತ್ತಾನೆ. ಅದನ್ನೇ ಈಗಲೂ ಪಾಲಿಸುತ್ತ ಬರಲಾಗಿದೆ. ನಟರಾಜರು ತಮ್ಮ ಈ ಪುಸ್ತಕದಲ್ಲಿ ಯಾವ ರೀತಿ ಜಿಹಾದ್ ಜಗತ್ತಿನಾದ್ಯಂತ ಹರಡಿಕೊಂಡಿತೆಂಬುದನ್ನು ಸೋದಾಹರಣವಾಗಿ ವಿವರಿಸುತ್ತ ಹೋಗುತ್ತಾರೆ. ಅದು ಭಾರತಕ್ಕೆ ಬಂದ ಬಗೆ ಮತ್ತು ಇಲ್ಲಿ ಏನೇನು ನಡೆಯಿತೆಂಬ ಇತಿಹಾಸವನ್ನು ಬಿಚ್ಚಿಡುತ್ತಾರೆ. ಏಳರಿಂದ ಹನ್ನೊಂದನೇ ಅಧ್ಯಾಯದವರೆಗೆ ಈ ವಿವರಗಳಿವೆ. ಜಿಹಾದ್ ಕುರಿತು ವಿದ್ವಾಂಸರ, ಇತಿಹಾಸಕಾರರ ಮತ್ತು ಇತರ ಬರೆಹಗಾರರ ಅಭಿಪ್ರಾಯಗಳನ್ನೂ ಸಂಗ್ರಹಿಸಿಕೊಡುತ್ತಾರೆ. ಎಲ್ಲಿಯೂ ಅವರು ಅತಿಶಯೋಕ್ತಿ ಅಥವಾ ಭಾವೋದ್ರೇಕಕ್ಕೆ ಒಳಗಾಗದೆ ತಟಸ್ಥ ಮನೋಭಾವದಿಂದ ಈ ವಿಷಯವನ್ನು ವಿವೇಚಿಸುತ್ತಾರೆ. ಒಬ್ಬ ಜವಾಬ್ದಾರಿಯುತ ಲೇಖಕನಿಗಿರಬೇಕಾದ ಸಂಯಮ ಅವರ ಬರವಣಿಗೆಯಲ್ಲಿ ಕಂಡುಬರುತ್ತದೆ. ಜಿಹಾದ್ ಬಗ್ಗೆ ವಾಸ್ತವ ವಿಚಾರಗಳನ್ನು ಅರಿತುಕೊಳ್ಳಲು ಈ ಪುಸ್ತಕ ಸಹಾಯಕವಾಗುತ್ತದೆ. ಅದಕ್ಕಾಗಿ ಆಗುಂಬೆ ನಟರಾಜರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಪುಸ್ತಕ ಬೇಕಿದ್ದರೆ ಅವರಿಗೆ ಫೋನ್ ಮಾಡಿ. ( mo.9481423004)