ಇಂಡಿ

ಸಸಿ ನೆಟ್ಟು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ

ಸಸಿ ನೆಟ್ಟು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ

ಇಂಡಿ  15: ಇಂಡಿ ತಾಲೂಕು ಹಾಗೂ ಚಡಚಣ ತಾಲೂಕು ಅರಣ್ಯ ಇಲಾಖೆಯ ವತಿಯಿಂದ ಇಂಡಿ ತಾಲ್ಲೂಕಿನ ಜೇವೂರ ಗ್ರಾಮದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸಸಿ ನೆಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅಬೀದ್ ಗದ್ಯಾಳ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ ಜಗತ್ತಿಗೆ ಮಾದರಿಯಾಗಿದೆ.ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆಮಾಡಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ,ಅದರ ಜೊತೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತಿರುವ ನಾಲ್ಕುನೇ ಅಂಗವಾಗಿರುವ ಪತ್ರಿಕಾ ರಂಗ ಅಂದರೆ ತಪ್ಪಾಗಲಾರದು.ಇದನ್ನು ಮನಗೊಂಡು ನಾವು ಈ ಬಾರಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ  

ದಿನಾಚರಣೆಯನ್ನು ಎಲ್ಲಾ ಪತ್ರಿಕಾ ವರದಿಗಾರರನ್ನು ಕರೆಸಿ ಅವರ ಜೊತೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಣೆ ಮಾಡಿದೆವೆ.ನಾಗರೀಕ ಸಮಾಜದಲ್ಲಿ ಎಲ್ಲರಿಗೂ ನಾಯ್ಯ ಸಿಗಬೇಕಾದರೆ ಪತ್ರಿಕೆಯ ವರದಿಗಾರ ಕೆಲಸ ಬಹುಮುಖ್ಯವಾಗಿ.ಆದರಿಂದ ಪತ್ರಿಕೆಯ ವರದಿಗಾರ ಜೊತೆ ಸಸಿ ನೆಟ್ಟು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಣೆ ನನಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.ಈ ಉಪಸ್ಥಿತರಿದ್ದ ಉಪನ್ಯಾಸಕರಾದ ರವಿ ಅರಳಿ ಮಾತನಾಡಿ ವಿಶ್ವದಲ್ಲಿ ಇನ್ನೂ ಕೂಡಾ ಶೇ 52ಅ ರಷ್ಟು ಜನರು ಇನ್ನೂ ಸ್ವಾತಂತ್ರ್ಯ ಇಲ್ಲದ ಜೀವನ ಮಾಡುತ್ತಾರೆ ಉತ್ತರ ಕೊರಿಯಾ ಹಂತಾ ರಾಷ್ಟ್ರೀದಲ್ಲಿ ಅಲ್ಲಿನ ಅಧ್ಯಕ್ಷರು ಹೇಳಿದ ಹಾಗೆ ನಡೆದುಕೊಳ್ಳಬೇಕು, ನಿಲ್ಲು ಅಂದರೆ ನಿಲ್ಲಬೇಕು,ಕೂಡು ಅಂದರೆ ಕೂಡ ಬೇಕು ಅಂತಾ ಪರಿಸ್ಥಿತಿಯಲ್ಲಿ ಜನರು ಜೀವನ ಮಾಡಬೇಕಾಗಿರುವ ಸ್ಥಿತಿ ಇನ್ನೂ ಜಗತ್ತಿನ ಕೆಲ ರಾಷ್ಟ್ರಗಳಲ್ಲಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.ಆದರೆ ಭಾರತದಲ್ಲಿ ನಾವು ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುತ್ತಿದ್ದೆವೆ ಎಂದು ಹೇಳಿದರು. 

ಹಿರಿಯ ವಿಜಯ ಕರ್ನಾಟಕ ಪತ್ರಿಕೆ ವರದಿಗಾರದ ಉಮೇಶ ಕೊಳೆಕರ ಅವರು ಮಾತನಾಡಿ ಭಾರತ ಭವ್ಯವಾದ ಹಾಗೂ ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ ಸಂವಿಧಾನವನ್ನು ಹೊಂದಿರುವ ರಾಷ್ಟ್ರವಾಗಿ ಇಲ್ಲಿ ಅನೇಕ ಧರ್ಮ ಹಾಗೂ ಜಾತಿಗಳ ಜನರು ಸಹಬಾಳ್ವೆಯಿಂದ ನಾವು ಎಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳುತ್ತಿದ್ದೆವೆ.ನಮ್ಮ ದೇಶದಲ್ಲಿ ಬಡವರಿಗೂ ಹಾಗೂ ಶ್ರೀಮಂತರಿಗೂ ಎಲ್ಲರಿಗೂ ಒಂದೇ ಕಾನೂನು ಇದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಇಂಡಿ ತಶೀಲದಾರ ಎಸ್ ಬಿ ಕಡಕಬಾವಿ, ಪತ್ರಕರ್ತರಾದ ಅನೀಲ ಜಮಾದಾರ, ರಾಮಚಂದ್ರ ಕಾಂಬಳೆ,ಸಚೀನ ಇಂಡಿ, ಶರಣು ಹಾವಿನಾಳ ಸೇರಿದಂತೆ ಅನೇಕರು ಮಾತನಾಡಿದರು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತದ್ದೇವಾಡಿ ಮಾಹಾತಂಯ್ಯ ಸ್ವಾಮಿಗಳು ಆಶಿರ್ವಚನ ನೀಡಿದರು ಇದೆ ಸಂದರ್ಭದಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು  ಓದಲಾಯಿತು ನಂತರ ಸುಮಾರು ಎರಡು ಸಾವಿರ ಜನರು ಕೂಡಿ ಮಾನವ ಸರಪಳಿ ನಿರ್ಮಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಘೋಷಣೆ ಕುಡಿದರು. 

 ಸಸಿಗಳನ್ನು ನೆಟ್ಟಲಾಯಿತ್ತು.ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಚಡಚಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಂಡೇಕರ, ಇಂಡಿ ಅರಣ್ಯ ಇಲಾಖೆಯ ಅಧಿಕಾರಿ ಎಸ್ ಜಿ ಸಾಲಕರ, ಹಾಗೂ ಎಸ್ ಬಿ ಬಿರಾದಾರ, ಎಸ್ ಆರ್ ನಡಗಡ್ಡಿ, ಅಶೋಕ ಅಡಕಿ, ರಾಹುಲ್ ಚವ್ಹಾಣ,ಎ ಎಸ್ ಗೋಟ್ಯಾಳ ಸೇರಿದಂತೆ ಸಮಾಜ ಕಲ್ಯಾಣ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಏಕಖಿಅಐ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಅಧಿಕಾರಿ ಗುಂಡು ಮುಜಗೊಂಡ ಅವರು ಅಚ್ಚುಕಟ್ಟಾಗಿ ನಡಿಸಿಕೊಟ್ಟುರು. 


ಸುದ್ದಿ ಓದಿ