ಅಥಣಿ

ಮಠ ಮಂದಿರಗಳು ನಮ್ಮ ಭಾರತೀಯ ಸಂಸ್ಕೃತಿ: ಐಹೊಳೆ

ಮಠ ಮಂದಿರಗಳು ನಮ್ಮ ಭಾರತೀಯ ಸಂಸ್ಕೃತಿ: ಐಹೊಳೆ

ಮಾಂಜರಿ ದಿ20: ಮಠ ಮಂದಿರಗಳು ನಮ್ಮ ಭಾರತೀಯ ಸಂಸ್ಕೃತಿ. ದೇವಸ್ಥಾನಗಳಿಂದ ಮನುಷ್ಯರಿಗೆ ನೆಮ್ಮದಿ ಕೊಡುತ್ತವೆ ಎಂದು ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ಹೇಳಿದರು.

 ಇಂದು ಸಮೀಪದ ಭಾವನ ಸೌದತ್ತಿ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಹಾಂತ ಮಹಾರಾಜರ ಮಠ ಮೂಲಭೂತ ಸೌಕರ್ಯ ಹಾಗೂ ಯಾತ್ರಿ ನಿವಾಸಕ್ಕೆ 1 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಠ ಮಂದಿರಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸದಾ ಕಟಿಬದ್ಧವಾಗಿದ್ದು ಎಲ್ಲಾ ಧರ್ಮಗಳ ದೇವಸ್ಥಾನಗಳ ಅಭಿವೃದ್ಧಿ ಮಾಡೋದೇ ನಮ್ಮ ಗುರಿಯಾಗಿದೆ. ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಹಲವು ಸೌಲಭ್ಯಗಳನ್ನು ಜನರು ಪಡೆದುಕೊಳ್ಳಬೇಕು ಎಂದರು.

ಗ್ರಾಮದ ಓಂಕಾರ್ ಆಶ್ರಮ ಮಠದ ಶಿವಶಂಕರ ಸ್ವಾಮೀಜಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾತ್ಯಾಸಾಹೇಬ ಕಾಟೆ, ಮಹಾವೀರ ಪಾಟೀಲ, ರಾಮಚಂದ್ರ ಕಾಟೆ, ಅನಿಲ್ ಅಂಜಿ, ಅಜಿತ ಖೆಮಲಾಪುರಿ, ಅರ್ಜುನ ಬೋಯಿ, ಧೋಂಡಿರಾಮ ಬುವಾ, ಸದಾಶಿವ ಘೋರ್ಪಡೆ, ದಿನಕರ್ ಕಾಟೆ, ಶ್ರೀಮಂತ ಅರಗೆ, ಬಾಲಕೃಷ್ಣ ಗಿರಿ, ದತ್ತಾ ಬುವಾ, ಲಕ್ಷ್ಮಣ್ ಭೋವಿ, ಎ ಇ ಇ ಬಿ ಆರ್ ಗಾಣಿಗೇರ,ಬೈರು ಚೌಗುಲೆ ಅನೇಕ ಜನರು ಉಪಸಿತರಿದ್ದರು 

ಸುದ್ದಿ ಓದಿ