ಭಾರತವು ಇತರ ದೊಡ್ಡ ದೇಶಗಳಿಗಿಂತ ಹೆಚ್ಚಿನ ಭರವಸೆಯನ್ನು ಹೊಂದಿದೆ: ಮಸ್ಕ್
ನ್ಯೂಯಾರ್ಕ 21: ಭಾರತವು ಇತರ ದೊಡ್ಡ ದೇಶಗಳಿಗಿಂತ ಭವಿಷ್ಯದ ಮಟ್ಟಿಗೆ ನೋಡಿದರೆ ಹೆಚ್ಚಿನ ಭರವಸೆಯನ್ನು ಹೊಂದಿದೆ. ಭಾರತದ ಭವಿಷ್ಯದ ಬಗ್ಗೆ ನೋಡಲು ಹಾಗೂ ತಿಳಿದುಕೊಳ್ಳಲು ತೀವ್ರ ಉತ್ಸುಕನಾಗಿದ್ದೇನೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ.
ನಿನ್ನೆ ಅವರು ನ್ಯೂಯಾಕರ್್ ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, ಟ್ವಿಟ್ಟರ್ ಕಂಪನಿಯ ಮಾಜಿ ಮಾಲೀಕ ಮತ್ತು ಸಿಇಒ ಜಾಕ್ ಡಾಸರ್ೆ ಅವರ ಇತ್ತೀಚಿನ ಭಾರತ ಸಕರ್ಾರದ ವಿರುದ್ಧದ ಆರೋಪದ ಕುರಿತು ಮಾತನಾಡಿ ತಮ್ಮ ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್ಗೆ ಸ್ಥಳೀಯ ಸಕರ್ಾರವನ್ನು ಅನುಸರಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ ಅಥವಾ ಅದನ್ನು ಮುಚ್ಚಬೇಕಾಗುತ್ತದೆ ಎಂದರು.
ನಾವು ಯಾವುದೇ ದೇಶದಲ್ಲಿರಲಿ ಅಲ್ಲಿನ ಕಾನೂನು, ರೀತಿ ನೀತಿಗಳನ್ನು ಅನುಸರಿಸುವುದು ನಾವು ಮಾಡಬಹುದಾದ ಅತ್ಯುತ್ತಮ ಕೆಲಸವಾಗಿದೆ. ಅದಕ್ಕಿಂತ ಹೆಚ್ಚು ನಮಗೆ ಮಾಡಲು ಸಾಧ್ಯವಿಲ್ಲ. ವಿವಿಧ ರೀತಿಯ ಸಕರ್ಾರಗಳಿಗೆ ವಿಭಿನ್ನ ನಿಯಮಗಳು ಮತ್ತು ನಿಬಂಧನೆಗಳು ಇರುತ್ತವೆ. ಕಾನೂನಿನಡಿಯಲ್ಲಿ ಮುಕ್ತವಾಗಿ ವ್ಯವಹರಿಸಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ ಎಂದರು.
ಸದ್ಯದಲ್ಲಿಯೇ ಭಾರತದಲ್ಲಿನ ಯೋಜನೆ ಬಗ್ಗೆ ಘೋಷಿಸುತ್ತೇವೆ, ಅದಕ್ಕೆ ಅಲ್ಲಿನ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ಎಂದರು.