ಅಂತರರಾಷ್ಟ್ರೀಯ

ಭಾರತ-ಆಸ್ಟ್ರಿಯಾ ಸ್ನೇಹವು ಬಲವಾಗಿದೆ: ಪ್ರಧಾನಿ ಮೋದಿ

ಭಾರತ-ಆಸ್ಟ್ರಿಯಾ ಸ್ನೇಹವು ಬಲವಾಗಿದೆ: ಪ್ರಧಾನಿ ಮೋದಿ

ವಿಯೆನ್ನಾ 10: ಭಾರತ-ಆಸ್ಟ್ರಿಯಾ ಸ್ನೇಹವು ಬಲವಾಗಿದೆ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ಗಟ್ಟಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರನ್ನು ಖಾಸಗಿಯಾಗಿ ಭೇಟಿಯಾದಾಗ ಹೇಳಿದ್ದಾರೆ.

ಎರಡು ದಿನಗಳ ಭೇಟಿಗಾಗಿ ನಿನ್ನೆ ಸಂಜೆ ಮಾಸ್ಕೋದಿಂದ ವಿಯೆನ್ನಾಕ್ಕೆ ಮೋದಿ ಆಗಮಿಸಿದ್ದು, 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಆಸ್ಟ್ರಿಯಾ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಮೋದಿ ಅವರನ್ನು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಮೈಕ್ರೋಬ್ಲಾಗಿಂಗ್ ವೇದಿಕೆಗಳಲ್ಲಿ ನೆಹಮ್ಮರ್ ತಮ್ಮ ಮತ್ತು ಮೋದಿಯವರ ಫೋಟೋವನ್ನು ಪೋಸ್ಟ್ ಮಾಡಿ, ವಿಯೆನ್ನಾಕ್ಕೆ ಸುಸ್ವಾಗತ, ಪ್ರಧಾನಿ ಮೋದಿಯವರೇ, ನಿಮ್ಮನ್ನು ಆಸ್ಟ್ರಿಯಾಕ್ಕೆ ಸ್ವಾಗತಿಸಲು ಸಂತೋಷ ಮತ್ತು ಗೌರವವಾಗಿದೆ. ಆಸ್ಟ್ರಿಯಾ ಮತ್ತು ಭಾರತವು ಸ್ನೇಹಿತರು ಮತ್ತು ಪಾಲುದಾರರು. ನಿಮ್ಮ ಭೇಟಿ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಚರ್ಚೆಗೆ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸುದ್ದಿ ಓದಿ