ಇಂಡಿ

ಶ್ರೀಗುರು ರಾಚೋಟೇಶ್ವರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಶ್ರೀಗುರು ರಾಚೋಟೇಶ್ವರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಇಂಡಿ 16: ಇಂಡಿ ತಾಲೂಕಿನ ಎಲ್ಲೆಡೆ 78 ನೇ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ಗುರು ರಾಚೋಟೇಶ್ವರ ವಿಧ್ಯಾ ವಿಕಾಸ ಸಂಸ್ಥೆಯ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯಯ ದಿನಾಚರಣೆ ಸಂಭ್ರಮ ಮನೆ ಮಾಡಿತ್ತು.ಬೆಳೆಗೆ ಎಂಟು ಗಂಟೆಗೆ ಶಾಲೆಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಸೈನಿಕರಾದ ಮೃತ್ಯುಂಜಯ ಹೀರೆಮಠ ಅವರು ಧ್ವಜಾರೋಹಣವನ್ನು ನೆರವೇರಿಸಿದರು.  

ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ದೇಶದ ಎಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದೆವೆ,ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಆಯಿತು.ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಮಾಹಾತ್ಮ ಗಾಂಧಿ, ಸುಭಾಷ್ ಚಂದ್ರ, ಸರ್ದಾರ್ ವಲ್ಲಭಭಾಯ್ ಪಟೇಲ್, ಗುರುದೇವ ರಾನಡೆ,ಜಹವಲಾರ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಅನೇಕರು ಹೋರಾಟಗಾರರು ಹಾಗೂ ಅನೇಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಪ್ರಾಣ ಕೂಡಾ ಕಳೆದುಕೊಂಡಿದ್ದಾರೆ. ಅವರ ಶ್ರಮದಿಂದ ನಾವು ಇಂದು ಸಂತೋಷವಾಗಿ ಸ್ವತಂತ್ರವಾಗಿ ಬದುಕುತ್ತಿದ್ದೇವೆ, ಹಾಗೂ ಭಾರತ ಇಂದು ವಿಶ್ವದಲ್ಲಿ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಹಾಗೂ ಭಾರತ ವಿಶ್ವಕ್ಕೆ ಗುರುವಾಗುವ ಕಾಲವು ಕೂಡಾ ಸನ್ನಿಹಿತವಾಗಿದೆ ಎಂದು ಹೇಳಿದರು.ಸೈನಿಕರಾಗಿ ಭಾರತಾಂಬೆಯ ಸೇವ ಗೈದು ಸೇವಾ ನಿವೃತ್ತ ಹೊಂದಿರುವ ಮಾಜಿ ಸೈನಿಕರಾದ ಮೃತ್ಯುಂಜಯ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಧ್ವಜಾರೋಣ ನೇರವೆರಿಸಿ, ಸನ್ಮಾನ ಸ್ವಿಕರಿಸಿ ಮಾತನಾಡಿದ ಮೃತ್ಯುಂಜಯ ಹೀರೆಮಠ ಅವರು ಮಕ್ಕಳು ನಾಳಿನ ಭವ್ಯ ಭಾರತದ ಪ್ರಜೆಗಳು ನಮ್ಮ ದೇಶದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮಹತ್ವದ್ದು, ವಿಧ್ಯಾರ್ಥಿಗಳು ಬಾಲ್ಯದಲ್ಲಿ ಒಂದು ಗುರಿ ಇಟ್ಟುಕೊಂಡಿರಬೇಕು.ನನ್ನಿಂದ ಈ ದೇಶಕ್ಕೆ ಏನಾದರೂ ಒಂದು ಸಾಹಯ ಆಗಬೇಕು ಎಂಬ ಗುರಿ ಇರಬೇಕು.ಆ ಗುರಿ ಮುಟ್ಟುವರಿಗೆ ವಿದ್ಯಾರ್ಥಿಗಳು ಸದಾ ಪ್ರಯತ್ನ ಮಾಡುತ್ತಾ ಇರಬೇಕು ಎಂದು ಹೇಳಿದರು. 

ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮ ನಡೆಯಿತು.ವಿದ್ಯಾಥಿಗಳಿಂದ ಭಾಷಣ, ದೇಶಭಕ್ತಿ ಗೀತೆಗಳು, ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸದಾನಂದ ಹಿರೇಮಠ, ಅಶೋಕ ಮಿರ್ಜಿ, ಬಸವರಾಜ ಗೊಳ್ಳಗಿ, ಹಣಮಂತ ಮಿರ್ಜಿ, ಶಿಕ್ಷಕರಾದ ಶ್ರೀಶೈಲ ಹೂಗಾರ, ಬಸವರಾಜ ರೂಗಿ, ನಿತ್ಯಾನಂದ ಟಕ್ಕಳಿಕಿ, ಪ್ರಕಾಶ್ ಎಳಮೇಲಿ, ಸೋಮಪ್ಪ ವಡವಡಗಿ ಮಂಜುನಾಥ ಮಕಣಿ ರಾಜಶೇಖರ ಹಡಪದ ಮಹಾಂತೇಶ ಹೀರೆಮಠ, ಪ್ರೇಮಾ ಗಿಣ್ಣಿ  ಅಂಬಿಕಾ ಇಂಡಿ  ಅವಮ್ಮ ಡಂಗಿ ಸುನೀತಾ ಪೂಜಾರಿ, ಪೂಜಾ ಹಚ್ಯಾಳ ಗಂಗಮ್ಮ ನಾಟಿಕಾರ ಸೇರಿದಂತೆ ಹಾಗೂ ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ