ಮಕ್ಕಳಿಗೆ ಸಂಸ್ಕಾರ ನೀಡಿ ಒಳ್ಳೆಯ ಪ್ರಜೆಗಳನ್ನಾಗಿಸಿ: ಪ್ರಭುನೀಲಕಂಠ ಸ್ವಾಮೀಜಿ
ಬೈಲಹೊಂಗಲ: ಪಟ್ಟಣದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲ್ಲೂಕು ಘಟಕದಿಂದ ನವರಾತ್ರಿ ದಸರಾ ಮಹೋತ್ಸವ ಅಂಗವಾಗಿ ಒಂಬತ್ತು ದಿನಗಳಕಾಲ ನಡೆದ ದುಗರ್ಾ ಮಾತಾ ದೌಡ್ ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿತು. ವಿದ್ಯಾ ನಗರ ಈಶ್ವರ ದೇವಸ್ಥಾನದಿಂದ ಆರಂಭವಾದ ಕೊನೆ ದಿನದ ದೌಡ್ ಬೆಳಗಾವಿ ರಸ್ತೆಯ ಚನ್ನಮ್ಮನ ವೃತ್ತ, ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತ, ಬಜಾರ ರಸ್ತೆ ಮಾರ್ಗವಾಗಿ ಗ್ರಾಮದೇವಿ ದೇವಸ್ಥಾನಕ್ಕೆ ಬಂದು ತಲುಪಿತು.ರಸ್ತೆಯುದ್ದಕ್ಕೂ ಮಕ್ಕಳು, ಯುವಕರು, ಹಿರಿಯರು ಪ್ರಭುಶ್ರೀರಾಮ, ಆಂಜನೇಯ, ವಿಶ್ವಗುರು ಬಸವೇಶ್ವರ, ದುಗರ್ಾ ಮಾತೆಗೆ ಜಯ ಘೋಷ ಮೊಳಗಿಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಿಯಾಶೀಲ ಗೆಳೆಯರ ಬಳಗ ಸದಸ್ಯರು ಪಟಾಕಿ, ಸಿಡಿ ಮದ್ದು, ಪುಷ್ಪ ಮಳೆ ಸುರಿಸಿ ದೌಡನ್ನು ಭವ್ಯವಾಗಿ ಸ್ವಾಗತಿಸಿಕೊಂಡರು.ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ದುರ್ಗಾಪರಮೇಶ್ವರಿ ಪೂಜೆ, ಪ್ರಾರ್ಥನೆ, ಆರಾಧನೆಯಿಂದ ಜೀವನ ಸಾರ್ಥಕ ಪಡೆಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಭಾರತೀಯ ಪರಂಪರೆ, ಸಂಸ್ಕಾರ ಕಲಿಸಿಕೊಟ್ಟು ಒಳ್ಳೆಯ ಪ್ರಜೆಯನ್ನಾಗಿಸಬೇಕು ಎಂದರು. ಉತ್ತರ ಕನರ್ಾಟಕ ವಿಶ್ವಹಿಂದು ಪರಿಷತ್ ಪ್ರಾಂತ ಕೋಶಾಧ್ಯಕ್ಷ ಕೃಷ್ಣಾಜಿ ಭಟ್, ಗೌತಮ್ ಪಾಟೀಲ, ವಿಶ್ವಹಿಂದು ಪರಿಷದ್ ಜಿಲ್ಲಾ ಉಪಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲ್ಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ, ಕಾರ್ಯದರ್ಶಿ ಆನಂದ ಕರಲಿಂಗನವರ, ಶಿವಾನಂದ ಬಡ್ಡಿಮನಿ, ಗೌತಮ್ ಇಂಚಲ, ವಿವೇಕಾನಂದ ಪೂಜಾರ, ಅಶೋಕ ಸವದತ್ತಿ, ಮಹಾಂತೇಶ ಹೊಸೂರ, ಸಚಿನ್ ಚೀಲದ, ಮಹಾಂತೇಶ ತುರಮರಿ, ರವೀಂದ್ರ ಜೊಂಜಾಳೇ ವೇದಿಕೆಯಲ್ಲಿ ಇದ್ದರು.ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯೆಮಿ ವಿಜಯ ಮೆಟಗುಡ್ಡ ದೌಡ್ ಸ್ವಾಗತಿಸಿದರು. ಪ್ರತಿದಿನ ದೌಡ್ ಸಂಚರಿಸಿದ ಮಾರ್ಗ ಶುಚಿಗೊಳಿಸಿದ ಪುರಸಭೆ ಪೌರ ಕಾಮರ್ಿಕರನ್ನು, ದೌಡ್ ಯಶಸ್ವಿಗೊಳಿಸಿದ ಯುವಕರ ಪಡೆಯನ್ನು ಅಭಿನಂದಿಸಲಾಯಿತು.