ಬೈಲಹೊಂಗಲ

ಪಟ್ಟಣದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ: ಬೆಳ್ಳಂಬೆಳಿಗ್ಗೆ ಫೀಲ್ಡ್‌ಗಿಳಿದ ಪೊಲೀಸ್‌ರು

ಪಟ್ಟಣದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ: ಬೆಳ್ಳಂಬೆಳಿಗ್ಗೆ ಫೀಲ್ಡ್‌ಗಿಳಿದ ಪೊಲೀಸ್‌ರು

ಬೈಲಹೊಂಗಲ 09: ಸಾರ್ವಜನಿಕರಿಗೆ ವಿಪರೀತ ತೊಂದರೆ ಉಂಟಾಗುತ್ತಿರುವ ಕಾರಣ ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗೆ  ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ನೇತೃತ್ವದಲ್ಲಿ 50 ಹೆಚ್ಚು ಪೊಲೀಸ್ ಸಿಬ್ಬಂದಿಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸ್ ನಿಲ್ದಾಣ ಹಾಗೂ ಮುಖ್ಯ ಬಜಾರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಯನ್ನು ಅತಿಕ್ರಮಿಸಿದ  ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. 

ಬಸ್ ನಿಲ್ದಾಣದಿಂದ ರಾಯಣ್ಣ ವೃತ್ತ ಹಾಗೂ ಮುಖ್ಯ ಬಜಾರದ ಅಕ್ಕ ಪಕ್ಕ ರಸ್ತೆ ಅತಿಕ್ರಮಿಸಿ ಬೀದಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಮಾಡುವದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಕಷ್ಟವಾಗುತ್ತಿತ್ತು, ಕಾರಣ ಸಿಪಿಐ ಅವರು ಬೀದಿ ಬದಿ ವ್ಯಾಪಾರಸ್ಥರಿಗೆ ತಮ್ಮ ಅಂಗಡಿಗಳನ್ನು ರಸ್ತೆ ಬಿಟ್ಟು ಹಿಂದೆ ಇಟ್ಟಕೊಂಡು  ಯಾರಿಗೂ ತೊಂದರೆಯಗದಂತೆ ವ್ಯಾಪಾರ ವಹಿವಾಟು ಮಾಡಿಕೊಳ್ಳಿ ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಪಿಎಸ್‌ಐ ಆರ್‌.ಎಂ.ಸಂಕನಾಳ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ