ರಾಣೆಬೆನ್ನೂರ

ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ರಾಣೇಬೆನ್ನೂರು 08:  ರಾಜ್ಯದಲ್ಲಿರುವ  830 ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ  ವಸತಿ ಶಾಲೆಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ  ಪ್ರಾಯೋಗಿಕವಾಗಿ 100 ಶಾಲೆಗಳನ್ನು ಮೇಲ್ದರ್ಜಗೆ ಏರಿಸಿ ಪಿಯುಸಿ ಹಂತದ ವರೆಗೆ ಶಿಕ್ಷಣ ಒದಗಿಸಲು ಸರ್ಕಾರ ಗಂಭೀರ ಚಿಂತನೆಯಲ್ಲಿದೆ. ಅದರಲ್ಲಿ ತಾಲೂಕಿನ ಮಾಕನೂರ ಮತ್ತು ಹಿರೇಬಿದರಿಯ ವಸತಿ ಶಾಲೆಗಳು ಸೇರಲಿವೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ವ್ಯಕ್ತ ಪಡಿಸಿದರು.       

ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ನೂತನವಾಗಿ ನಿಮರ್ಿಸಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡವನ್ನು  ಉದ್ಘಾಟಿಸಿ ಮಾತನಾಡಿದರು. ನವೋದಯ ಶಾಲೆಗೆ ಸರಿಗಟ್ಟುವ ರೀತಿಯಲ್ಲಿ ಮುರಾರ್ಜಿ  ಮತ್ತು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳು ಕೆಲಸ ನಿರ್ವಹಿಸುತ್ತಿವೆ. ಶಿಕ್ಷಕರಾದವರು ಮಕ್ಕಳಿಗೆ ಮನೆಯ ಅನುಭವ ಸಿಗುವಂತೆ ವಾತಾವರಣ ಸೃಷ್ಠಿಸಬೇಕು . ಜೊತೆಗೆ ಬಡವರಿಗಾಗಿಯೇ ನಿಮರ್ಿತವಾದ ಶಾಲೆಗಳಲ್ಲಿ ಪಾರದರ್ಶಕತೆ ಇರಲಿ ಎಂದು ಸಲಹೆ ನೀಡಿದರು. ಸರ್ಕಾರವು ವಸತಿ ಶಾಲೆಯಲ್ಲಿ ಅಭ್ಯಶಿಸುವ ಮಕ್ಕಳಿಗೆ ಕರಾಟೆ ತರಭೇತಿ ನೀಡಲು ವಾರ್ಷಿಕ 18 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಆದರೆ ಕೆಲವೊಂದು ವಸತಿ ಶಾಲೆಯಲ್ಲಿ ತರಭೇತಿ ನೀಡದಿರುವುದು ಖೇದಕರ ಸಂಗತಿಯಾಗಿದ್ದು ಅಂತಹ ಶಾಲೆಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು. ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು ಐಐಟಿ ಮತ್ತು ಎಂಬಿಬಿಎಸ್ ನಂತಹ ಉನ್ನತ ಮಟ್ಟದ ಶಿಕ್ಷಣ ಪಡೆಯುವಲ್ಲಿಯೂ ಯಶಸ್ವಿಯಾಗಿರುವುದು ಸಂತಸದ ಸಂಗತಿಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೀನ ದುರ್ಬಲರಿಗೆ, ಹಿಂದುಳಿದವರ ಅಭ್ಯುದಯಕ್ಕೆ ಯಾರು ಮಿಡಿಯುತ್ತಾರೋ ಅವರೇ ನಿಜವಾದ ನಾಯಕರು. ಜಾತಿ-ಧರ್ಮಕ್ಕಿಂತ  ದೇಶ ದೊಡ್ಡದು ಎಂಬ ಮನೋಭಾವದಿಂದ ಕೆಲಸ ನಿರ್ವಹಿಸಬೇಕು. ಕಲ್ಪನೆ-ಕನಸು, ಸಿದ್ಧತೆ-ಬದ್ಧತೆ ಇದ್ದಾಗ ಮಾತ್ರ ಸಮರ್ಥ, ಸಮೃದ್ಧ, ಸ್ವಾಭಿಮಾನಿ ಶಕ್ತಿಶಾಲಿ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು.       

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕಳೆದ 75 ವರ್ಷದಲ್ಲಿ ಕಾಣದ ಅಭಿವೃದ್ಧಿಯನ್ನು ಈಗ ಕಾಣುತ್ತಿದ್ದೇವೆ ಅದಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರ ಇಚ್ಛಾಶಕ್ತಿ, ಸಿಎಂ ಬೊಮ್ಮಾಯಿಯವರ ಆಡಳಿತದ ವೈಖರಿಕಾರಣ. ನಾವೇ ಶಂಕುಸ್ಥಾಪನೆ ನೆರವೇರಿಸಿ ನಾವೇ ಉದ್ಘಾಟನೆ ನೆರವೇರಿಸುವುದು ಬಿಜೆಪಿ ಸರಕಾರದ ಅಜೆಂಡಾ. ಈ ಮೊದಲು ಸರಕಾರಿ ಶಾಲೆ ಎಂದರೆ ತಿರಸ್ಕಾರ ಮನೋಭಾವವಿತ್ತು. ಆದರೆ ಈಗ ಮನಸ್ಥಿತಿ ಬದಲಾಗಿದ್ದು ಸಕಲ ಸೌಲಭ್ಯವೂ ವಸತಿ ಶಾಲೆಯಲ್ಲಿ ದೊರೆಯುತ್ತಲಿದೆ. ಮುಂದಿನ3 ತಿಂಗಳಲ್ಲಿ ಹಿರೇಬಿದರಿ ಗ್ರಾಮಕ್ಕೆ 150 ಕೋಟಿ. ರೂ.ನಲ್ಲಿ 24ಥ7 ಕುಡಿಯುವ ನೀರು ಸರಬರಾಜು ಯೋಜನೆ ನೆರವೇರಿಸಲಾಗುವುದು ಎಂದರು.       ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್, ವಿಎಸ್  ಹಿರೇಮಠ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಶಿವಕುಮಾರ ನರಸಗೊಂಡರ, ಪ್ರಕಾಶ ಪೂಜಾರ, ಪವನಕುಮಾರ ಮಲ್ಲಾಡದ, ಅಭಿಯಂತರರಾದ ಡಾ. ವಿ. ನಟರಾಜ, ಆರ್. ನಿತಿನ್, ಎಚ್. ಎ. ವೆಂಕಟೇಶ, ವಸತಿ ಶಾಲೆಯ ಪ್ರಾಚಾರ್ಯ ಚಂದ್ರಶೇಖರ ಸೊರಟೂರ, ಗುತ್ತಿಗೆದಾರ ಕೆ. ಬಸವಾನಂದ, , ಉಪಾಧ್ಯಕ್ಷ ಕೆಂಚಪ್ಪ ಸಂಗಾನವರ, ಚಂದ್ರಪ್ಪ ಓಲೇಕಾರ, ನೀಲಪ್ಪ ಚಂದಾಪುರ, ತಿರಕಪ್ಪ ಕೆಂಪಾಲಪ್ಪನವರ, ಅನುಸೂಯ ಚಿಕ್ಕಬಿದರಿ, ವನಜಾಕ್ಷಿ ಜಾಡರ, ಸಾಕಮ್ಮ ಸಂಗಾನವರ, ಅನ್ನಪೂರ್ಣ ಗೂರಪ್ಪನವರ ಮೇಗಳಮನಿ ಸೇರಿದಂತೆ ಮತ್ತಿತರರು ಇದ್ದರು 

ಸುದ್ದಿ ಓದಿ