ಆಪತ್ತು ಎದುರಾದಾಗ ಅಗತ್ಯ ಇಲಾಖೆಗಳ ಜೊತೆ ಕೈ ಜೋಡಿಸಿ: ಬಂಡಿವಡ್ಡರ
ಬೈಲಹೊಂಗಲ 16: ಸಮಾಜದಲ್ಲಿ ಯಾವದೇ ತರಹದ ಆಪತ್ತು ಎದುರಾದಾಗ ತುರ್ತು ಸಂದರ್ಭಗಳಲ್ಲಿ ಜನರು ಅಗತ್ಯ ಇಲಾಖೆಗಳ ಜೊತೆ ಕೈ ಜೋಡಿಸಿ ಜೀವ ಹಾನಿಗಳನ್ನು ತಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಅಗ್ನಿಶ್ಯಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಪ್ರಭಾರಿ ಠಾಣಾಧಿಕಾರಿ ರಾಮಣ್ಣ ಬಂಡಿವಡ್ಡರ ಹೇಳಿದರು.
ಅವರು ಪಟ್ಟಣದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಠಾಣೆಯಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸದಸ್ಯರಿಗೆ ಜನಜಾಗೃತಿ ಮೂಡಿಸಿದರು.
ತಾಲೂಕಾ ಯೋಜನಾಧಿಕಾರಿ ವಿಜಯಕುಮಾರ ಎಂ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೈಲಾ ಜಕ್ಕನ್ನವರ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಸಿಬ್ಬಂದಿಗಳಾದ ಶಿವಾನಂದ ಸೋಮಣ್ಣವರ, ಮಹಾಂತೇಶ ಸಂಗೊಳ್ಳಿ, ವೀರ್ಪ ಖಾಜಿ, ರಾಜು ಹಿರೇಮಠ, ಬಾಳಪ್ಪ ತಿಳಗುಂಜಿ, ಆನಂದ ಮಾದರ, ಚಿನ್ನಯ್ಯ ಮದಕಟ್ಟಿಮಠ ಮುಂತಾದವರು ಉಪಸ್ಥಿತರಿದ್ದರು. ಸವಿತಾ ದನದ ಸ್ವಾಗತಿಸಿದರು. ಲಕ್ಷ್ಮೀ ಮಾಸ್ತಮರಡಿ ವಂದಿಸಿದರು.