ರಕ್ತದಾನದಿಂದ ಆರೋಗ್ಯ ವೃದ್ಧಿ: ಡಾ.ಕೆ ಎಸ್ ಜಾಧವ
ಇಂಡಿ 02: ಒಬ್ಬ ವ್ಯಕ್ತಿಯು ಅತಿಯಾದ ರಕ್ತವನ್ನು ಕಳೆದುಕೊಂಡಾಗ ಮತ್ತು ಕೆಲವು ಬಾಹ್ಯ ಮೂಲದಿಂದ ರಕ್ತದ ಅಗತ್ಯವಿರುವ ಸಂದರ್ಭಗಳಿವೆ. ಅಂತಹ ಸಂದರ್ಭಗಳಲ್ಲಿ, ರಕ್ತದಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಡವಲಗಾ ಸಮುದಾಯದ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಡಾ.ಕೆ ಎಸ್ ಜಾಧವ ಅವರು ಹೇಳಿದರು.
ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಮರುಳಸಿದ್ದೇಶ್ವರ ಜಾತ್ರೆಯ ನಿಮಿತ್ಯವಾಗಿ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನಾರೋಗ್ಯದ ಜನರಿಗೆ ಸಹಾಯ ಮಾಡಲು ನೀವು ಮಾಡಬಹುದಾದ ಉದಾತ್ತ ಕಾರಣ ಇದು. ರಕ್ತದಾನ ಎಂದರೆ ಒಬ್ಬ ವ್ಯಕ್ತಿಯಿಂದ ರಕ್ತವನ್ನು ಪಡೆದು ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ. ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಅಭಿಯಾನಗಳನ್ನು ನಡೆಸಿದೆ. ಆದರೆ ಇಲ್ಲಿವರೆಗೆ ಜೀವವುಳಿಸುವ ರಕ್ತದಾನಕ್ಕೆ ಜನಸಮೂಹ ಮುಕ್ತವಾಗಿ ಬಂದಿಲ್ಲ.ರಕ್ತದಾನ ಒಬ್ಬರ ಜೀವ ಉಳಿಸುತ್ತದೆ. ಅದಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು.ವಿಜಯಪೂರ ಜಿಲ್ಲಾ ರಕ್ತದಾನ ಮುಖ್ಯಸ್ಥೆ ಡಾ. ಸುಮಾ ಮಮದಾಪೂರ ಅವರು ಮಾತನಾಡಿ ರಕ್ತದಾನ ಮಾಡುವುದರಿಂದ ಕೇವಲ ಒಂದು ದಾನವು, ನಾಲ್ವರ ಜೀವವನ್ನು ಉಳಿಸುತ್ತದೆ. ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚವರಿ ಕಬ್ಬಿಣಾಂಶದಿಂದ ಅಧಿಕ ರಕ್ತದ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ. ಇದು ಲಿವರ್, ಹೃದಯ ಮತ್ತು ಪಿತ್ತಜನಕಾಂಗದಲ್ಲಿ ಶೇಖರಣೆಯಾಗಿ ಹೃದಯಬೇನೆ, ರಕ್ತದೊತ್ತಡ ಉಲ್ಬಣವಾಗುತ್ತದೆ. ನಾವು ರಕ್ತದಾನ ಮಾಡಿದರೆ ಈ ವಿಷಯಗಳು ಇತ್ಯರ್ಥವಾಗುತ್ತದೆ ಎಂದೂ ಹೇಳಿದರು.ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ, ರವಿ ಹೊಸಮನಿ, ರವಿ ಮಸಳಿ ಸೇರಿದಂತೆ ಅನೇಕರು ಮಾತನಾಡಿದರು. ಆರೋಗ್ಯ ಇಲಾಖೆ ವತಿಯಿಂದ ಎಂ ಎಂ ಬಗಲಿ, ರಾಘು ಚವ್ಹಾಣ, ಪೋಲಿಸ್ ಇಲಾಖೆಯ ವತಿಯಿಂದ ಜಿ ಎಂ ಗೋಳಸಂಗಿ, ಸುನೀಲ ಬಸನಾಳ, ವಿಶ್ವನಾಥ ಪಾಟೀಲ, ಸಂತೋಷ ಚಿತ್ತಾಪೂರ, ಅಭಿಷೇಕ್ ಜಾಧವ್, ರಾಮಗೊಂಡು, ರಮೇಶ ಹೊಸಮನಿ, ಚನ್ನು ಜಾಡರ, ಧರೇಪ ತೇಲಿ, ರಾಜು ಧಡೇದ, ಮಳಸಿದ್ದ ನಡಗೇರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.