ಇಂಡಿ

ಅಕ್ರಮ ಮದ್ಯ ಮಾರಾಟ: ಓರ್ವ ವ್ಯಕ್ತಿಯ ಬಂಧನ

ಅಕ್ರಮ ಮದ್ಯ ಮಾರಾಟ: ಓರ್ವ ವ್ಯಕ್ತಿಯ ಬಂಧನ


ಇಂಡಿ: ತಾಲೂಕಿನ ಅರ್ಥಗಾ ಗ್ರಾಮದ ಹತ್ತಿರವಿರುವ ರಾಮತೀರ್ಥ ತಾಂಡಾದಲ್ಲ್ಲಿ ಅಬಕಾರಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ 19.5 ಲೀಟರ ಗೋವಾ ರಾಜ್ಯದ ಬೀರನ್ನು (ಮದ್ಯ) ವಶಪಡಿಸಿಕೊಂಡು ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ. 

ಬಂಧಿತ ವ್ಯಕ್ತಿಯನ್ನು ಸಂಜೀವಕುಮಾರ ತಂ/ ತಾರಾಸಿಂಗ್ ಚವ್ಹಾಣ (30) ಎಂದು ಗುರುತಿಸಲಾಗಿದೆ. ಆರೋಪಿತನ ತೋಟದ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಸಿಹಿಟ್ಟಿದ್ದ 19.5 ಲೀಟರ ಬೀರನ್ನು ಅಂದಾಜು ಮೊತ್ತ 3900/- ಇದ್ದು ಈ ಪ್ರಕರಣ ಅಬಕಾರಿ ಉಪ ನೀರೀಕ್ಷಕರಾದ ಪರೀನಾ ವನಕ್ಯಾಳ ಇಂಡಿ ವಲಯ ಇವರು  ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದೆವರಿಸಿದ್ದಾರೆ ಎಂದು ಇಂಡಿ ವಲಯ ಅಬಕಾರಿ ನೀರೀಕ್ಷರಾದ ಎಂ.ಎಚ್‌. ಪಡಲಸಗಿ ತಿಳಿಸಿದ್ದಾರೆ. 

ದಾಳಿಯಲ್ಲಿ ಶಿವಶಂಕರ ಗೋಟ್ಯಾಳ, ಸಂಜೀವಕುಮಾರ ಹೂವಿನಮರ, ಎಸ್‌.ಟಿ. ದಳವಾಯಿ, ಶಿವಾನಂದ ಕೊಡತೆ ಪಾಲ್ಗೊಂಡಿದರು. 


ಸುದ್ದಿ ಓದಿ