ಜಿಲ್ಲೆ ವಿಭಜನೆ ಮಾಡುವುದಾದರೆ ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲಿ : ನಾಳೆ ಶಾಖಾ ಮೂರುಸಾವಿರಮಠದಿಂದ ಭವ್ಯ ಮೆರವಣಿಗೆ ಮೂಲಕ ಮನವಿ: ಪೂರ್ವಭಾವಿ ಸಭೆಯಲ್ಲಿ ಮುಖಂಡರ ನಿರ್ಧಾರ ಪ್ರಕಟ
ಲೋಕದರ್ಶನ ವರದಿ
ಬೈಲಹೊಂಗಲ 10: ಬೆಳಗಾವಿ ಜಿಲ್ಲೆ ಅಖಂಡವಾಗಿಯೇ ಇರಬೇಕು. ಒಂದು ವೇಳೆ ಸರ್ಕಾರ ಆಡಳಿತ್ಮಾಕ ದೃಷ್ಟಿಯಿಂದ ಜಿಲ್ಲೆ ವಿಭಜನೆ ಮಾಡುವುದಾದರೆ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು ಎಂದು ಒತ್ತಾಯಿಸಿ, ಸರ್ಕಾರದ ಮೇಲೆ ಒತ್ತಡ ತರಲು ಏ.12 ರಂದು ಮುಂಜಾನೆ 10ಕ್ಕೆ ಶಾಖಾ ಮೂರುಸಾವಿರಮಠದಿಂದ ಭವ್ಯ ಮೆರವಣಿಗೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ವಿಭಜನೆ ಹೋರಾಟ ಸಮಿತಿ ಮುಖಂಡರು ಒಮ್ಮತದ ನಿರ್ಧಾರ ಕೈಗೊಂಡರು.
ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಬೆಳಗಾವಿ ಜಿಲ್ಲಾ ವಿಭಜನೆ ಹೋರಾಟ ಸಮಿತಿಯಿಂದ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಈ ನಿರ್ಧಾರವನ್ನು ಪ್ರಕಟಿಸಿದರು.
ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ,
ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಹಿರಿಯ ಪತ್ರಕರ್ತರಾದ ಮಹಾಂತೇಶ ತುರಮರಿ, ಈಶ್ವರ ಹೋಟಿ, ಶಂಕರ ಮಾಡಲಗಿ, ಬಾಬುಸಾಬ ಸುತಗಟ್ಟಿ ಮಾತನಾಡಿ, 'ಬೆಳಗಾವಿ ಜಿಲ್ಲೆ ಅಖಂಡವಾಗಿಯೇ ಇರಬೇಕೆಂಬ ಈ ಹೋರಾಟ ಮೊದಲಿನಿಂದಲೂ ಮಾಡಿಕೊಂಡ ಬರಲಾಗಿದೆ. ಸಚಿವ ಉಮೇಶ ಕತ್ತಿ ಅವರು ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲನ್ನು ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆ ಆಗಬೇಕೆಂಬ ಧ್ವನಿ ಎತ್ತಿರುವುದು ಹರ್ಷದಾಯಕವಾಗಿದೆ. ಬ್ರೀಟಿಷ ಕಾಲದಿಂದಲೂ ಬೈಲಹೊಂಗಲ ಉಪವಿಭಾಗ ಕೇಂದ್ರವಾಗಿದ್ದು ಇಲ್ಲಿ ಜಿಲ್ಲೆಗೆ ಬೇಕಾದ ಎಲ್ಲ ಸರ್ಕಾರಿ ಕಛೇರಿಗಳು ಅನುಕೂಲವಿದ್ದು ಇದನ್ನು ಆಧರಿಸಿ ಬೈಲಹೊಂಗಲ ಜಿಲ್ಲೆ ಮಾಡಬೇಕು. ಈ ಕುರಿತು ನಿಯೋಗ ಕರೆದೊಯ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಉಮೇಶ ಕತ್ತಿ ಅವರನ್ನು ಭೇಟಿ ಮಾಡಿ ಒತ್ತಡ ತರಲಾಗುವುದು ಎಂದರು.
ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯ ವಹಿಸಿ ಮಾತನಾಡಿ, ಸರ್ಕಾರ ಆಡಳಿತ್ಮಾಕ ದೃಷ್ಟಿಯಿಂದ ಜಿಲ್ಲೆ ವಿಭಜನೆ ಮಾಡುವದಾದರೆ ಉಪವಿಭಾಗ ಕೇಂದ್ರವಾದ ಬೈಲಹೊಂಗಲ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಅಖಂಡ ಜಿಲ್ಲೆಯಾಗಿ ಇರಬೇಕು ಎಂದರು.
ಪುರಸಭೆ ಸದಸ್ಯರಾದ ಬಾಬು ಕುಡಸೋಮಣ್ಣವರ, ಬುಡ್ಡೆಸಾಬ ಶಿರಸಂಗಿ, ಉಳವಪ್ಪ ಬಡ್ಡಿಮನಿ, ಜಗದೀಶ ಜಂಬಗಿ, ಬಸವರಾಜ ಶಿಂತ್ರಿ, ಸಾಗರ ಭಾವಿಮನಿ, ಭರಮಪ್ಪ ಸತ್ತೆನ್ನವರ, ಸೋಮೇಶ್ವರ ಕಾರ್ಖಾನೆ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ಹಿರಿಯರಾದ ತಿಪ್ಪಣ್ಣ ಬಿಳ್ಳೂರ, ಪ್ರಮೋದಕುಮಾರ ವಕ್ಕುಂದಮಠ, ಸಂಜೀವಗೌಡ ಪಾಟೀಲ, ಡಾ.ತೌಸೀಪ ಸಂಗೊಳ್ಳಿ, ಜಗದೀಶ ಜಗಜಂಪಿ, ಸೋಮನಾಥ ಸೊಪ್ಪಿಮಠ, ಸುಭಾಸ ತುರಮರಿ, ಶಿವಾನಂದ ಬಡ್ಡಿಮನಿ, ಬಿ.ಎಂ.ಚಿಕ್ಕನಗೌಡರ, ಮಹಾಂತೇಶ ಹೊಸಮನಿ, ವಿಜಯ ಪತ್ತಾರ, ಈರಣ್ಣ ಹುಣಶೀಕಟ್ಟಿ, ಸಂತೋಷ ಭಾಂವಿ, ಸುಭಾನಿ ಬಾಗವಾನ, ನಾಗಪ್ಪ ಗುಂಡ್ಲೂರ, ಸಂಗಮೇಶ ಸವದತ್ತಿಮಠ, ಮುರಗೇಶ ಗುಂಡ್ಲೂರ, ವಿರುಪಾಕ್ಷ ವಾಲಿ, ಮಹಾಂತೇಶ ಮತ್ತಿಕೊಪ್ಪ, ರುದ್ರ್ಪ ಹೊಸಮನಿ, ಬಸನಗೌಡ ಸಂಗನಗೌಡರ, ಪಾಂಡಪ್ಪ ಇಂಚಲ, ಈಶ್ವರ ಕೊಪ್ಪದ, ಡಾ.ಮಂಜುನಾಥ ಮುದಕನಗೌಡರ, ಬಸವರಾಜ ಗುರನ್ನವರ, ಮಹಾಂತೇಶ ಹಿರೇಮಠ, ಶ್ರೀಕಾಂತ ಶಿರಹಟ್ಟಿ, ಗುಂಡಪ್ಪ ಸನದಿ ಅನೇಕರು ಇದ್ದರು.ಮುಖಂಡ ಮಹಾಂತೇಶ ತುರಮರಿ ನಿರೂಪಿಸಿ, ವಂದಿಸಿದರು.