ಬೈಲಹೊಂಗಲ

ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲಿ

ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲಿ

ಬೈಲಹೊಂಗಲ ಮೂರುಸಾವಿರಮಠದಲ್ಲಿ ಹೋರಾಟಗಾರರ ಸಭೆಯಲ್ಲಿ ಎಚ್ಚರಿಕೆ* ಸರ್ಕಾರಕ್ಕೆ ಗಡುವು 

ಬೈಲಹೊಂಗಲ 17: ಬ್ರಿಟೀಷ್ ಕಾಲದಿಂದಲೂ ಕಂದಾಯ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.  

ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಸಭೆ ಸೇರಿದ ಹೋರಾಟಗಾರರು ಅಖಂಡ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದಾದರೆ ಆಡಳಿತಾತ್ಮಕ ದೃಷ್ಠಿಯಿಂದ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ ಜಿಲ್ಲೆಯನ್ನಾಗಿಸಬೇಕು. ಇದು ನಮ್ಮ ಪ್ರಬಲ ಬೇಡಿಕೆ ಆಗಿದೆ ಎಂದರು. 

ಜಿಲ್ಲಾ ಹೋರಾಟ ಸಮಿತಿ ಮುಖಂಡ ಶಿವರಂಜನ ಬೋಳನ್ನವರ ಮಾತನಾಡಿ, ‘ಬೆಳಗಾವಿ ಅಖಂಡವಾಗಿಯೇ ಇರಬೇಕು. ಬೈಲಹೊಂಗಲ ಜಿಲ್ಲೆಯನ್ನಾಗಿಸಲು ಕಳೆದ ಎರಡು ದಶಕಗಳಿಂದ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಕಿತ್ತೂರ ಭಾಗದ ಜನರು ಹೋರಾಟ ಮಾಡಿದ ಪರಿಣಾಮವೇ ಸರಕಾರ ಜಿಲ್ಲಾ ವಿಭಜಣೆ ಮಾಡುವದನ್ನು ಕೈ ಬಿಟ್ಟಿದ್ದು, ಸಚಿವರು ಮನದಟ್ಟು ಮಾಡಿಕೊಳಬೇಕು. 

ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದಾದರೆ ಬೈಲಹೊಂಗಲನ್ನು ಜಿಲ್ಲೆಯಾಗಿ ಘೋಷಣೆ ಮಾಡಬೇಕು. ಎಲ್ಲ ರೀತಿಯಿಂದ ಅರ್ಹತೆ ಹೊಂದಿರುವ ಬೈಲಹೊಂಗಲ ಬ್ರಿಟಿಷ್ ಕಾಲದಿಂದಲೂ ಉಪವಿಭಾಗ ಸ್ಥಾನ ಹೊಂದಿದೆ. ಎಲ್ಲ ಸರ್ಕಾರಿ ಕಚೇರಿಗಳಿವೆ. ರಾಜಕಾರಣಿಗಳು ಅಖಂಡ ಬೆಳಗಾವಿ ಜಿಲ್ಲೆ ವಿಭಜನೆಗೆ ಪದೇ, ಪದೇ ಕೂಗು ಎತ್ತಿ ಕೆಣಕುತ್ತಿದ್ದಾರೆ. ಯಾವುದೇ ಜಿಲ್ಲೆ ಮಾಡಲಿ, ಬಿಡಲಿ, ಬೈಲಹೊಂಗಲ ಜಿಲ್ಲೆ ಆಗಲೇಬೇಕು. ಆಕಸ್ಮಾತವಾಗಿ ಘನನೆಗೆ ತೆಗೆದುಕೊಳ್ಳದೆ ಹೋದರೆ ನಾವು ಸುಮ್ಮನೆ ಇರಲ್ಲ. ಉಗ್ರ ಹೋರಾಟ ಮಾಡುತ್ತೇವೆ. ಮುಂದೆ ಏನೇ ಅನಾಹುತ ಆದರೆ ಹೇಳಿಕೆ ಕೊಟ್ಟವರು ಮತ್ತು ಸರಕಾರ ನೇರ ಜವಾಬ್ದಾರಿ ಆಗುತ್ತಾರೆ. ರಾಜಕಾರಣಿಗಳು ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಿಬೇಕು ಹಾಗೂ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದು ಅಧಿಕಾರ ಬಂದಾಗ ಒಂದು ರೀತಿ, ಅಧಿಕಾರ ಹೋದಾಗ ಒಂದು ರೀತಿಯಲ್ಲಿ ಬುದ್ದಿ ಭ್ರಮನೆಗೆ ಒಳಗಾಗುತ್ತಿದ್ದಾರೆ. ಇದರ ನಡುವೆ ಜನಸಾಮಾನ್ಯರು, ಸಾರ್ವಜನಿಕರು ಪ್ರಜಾಪ್ರಭುತ್ವ ಎನ್ನುವುದನ್ನೇ ಮರೆತು ಬಿಡುತ್ತಿದ್ದಾರೆ. ಯಾರನ್ನು ಕೇಳದೆ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿರುವುದು ಸರಿಯಲ್ಲ’ ಒಂದು ವೇಳೆ ಸರಕಾರ ಪ್ರಭಾವಿ ಮುಖಂಡರ ಮಾತಿಗೆ ಮನ್ನಣೆ ನೀಡಿದರೆ ಉಗ್ರ​‍್ರತಿಭಟಣೆ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು.  


ಹೋರಾಟ ಸಮಿತಿ ಮುಖಂಡ ಮಹಾಂತೇಶ ತುರಮರಿ ಮಾತನಾಡಿ, ‘ಜಿಲ್ಲಾ ಹೋರಾಟ ಕೂಗು ಬಹಳ ದಿನಗಳಿಂದ ಇದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಬೈಲಹೊಂಗಲ ಜಿಲ್ಲೆ ಮಾಡದೆ ಹೋದರೆ ಸವದತ್ತಿ, ಬೈಲಹೊಂಗಲ, ರಾಮದುರ್ಗ, ಕಿತ್ತೂರು ತಾಲ್ಲೂಕಿನ ಜನ ಸೇರಿ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.  

ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ ಈ ಭಾಗದ ಜನತೆ ಹಾಗೂ ಮುಖಂಡರುಗಳು ಕಳೆದ ಮೂರು ದಶಕಗಳಿಂದ ಬೆಳಗಾವಿ ಜಿಲ್ಲೆಯು ಅಖಂಡವಾಗಿರಬೇಕು, ಒಂದು ವೇಳೆ ವಿಭಜಣೆ ಮಾಡುವದಾದರೆ ಉಪವಿಭಾಗ ಕೇಂದ್ರವನ್ನು ಆಧರಿಸಿ ಬೈಲಹೊಂಗಲವನ್ನೇ ಜಿಲ್ಲಾ ಕೇಂದ್ರವಾಗಿ ಮಾಡಬೇಕು ಎಂದರು.  ಹೋರಾಟ ಸಮಿತಿ ಮುಖಂಡರಾದ ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ರುದ್ರ​‍್ಪ ಹೊಸಮನಿ, ಬಿ.ಬಿ.ಗಣಾಚಾರಿ, ಮುರುಗೇಶ ಗುಂಡ್ಲೂರ, ಬಾಬು ಸುತಗಟ್ಟಿ, ಸುರೇಶ ವಾಲಿ, ಚಿದಾನಂದ ಚಿನಿವಾಲರ ಅನೇಕರು ಇದ್ದರು. 

ಯಾವುದೇ ಜಿಲ್ಲೆ ಮಾಡಲಿ, ಬಿಡಲಿ. ಬೈಲಹೊಂಗಲ ಜಿಲ್ಲೆ ಆಗಲೇಬೇಕು. ಆಕಸ್ಮಾತ್ತಾಗಿ ಗನನೆಗೆ ತೆಗೆದುಕೊಳ್ಳದೆ ಹೋದರೆ ನಾವು ಸುಮ್ಮನೆ ಇರಲ್ಲ. ಉಗ್ರ ಹೋರಾಟ ಮಾಡುತ್ತೇವೆ. -    ಶಿವರಂಜನ ಬೋಳನ್ನವರ  ಹೋರಾಟ ಸಮಿತಿ ಮುಖಂಡ 


ಸುದ್ದಿ ಓದಿ