ಹುಲ್ಲತ್ತಿ ಗ್ರಾಮದ ಸ್ಮಶಾನ ರಸ್ತೆ: ಸಮಸ್ಯೆಗೆ ಪರಿಹಾರ ಕಂಡುಕೊಂಡ ತಹಸೀಲ್ದಾರ: ಶಂಕರ.ಜಿ.ಎಸ್.
ರಾಣೇಬೆನ್ನೂರು 31: ತಾಲೂಕಿನ ಹುಲ್ಲತ್ತಿ ಮತ್ತು ಹುಲ್ಲತಿ ತಾಂಡಾ ಗ್ರಾಮಸ್ಥರ ಬಹುಮುಖ್ಯ ಸಮಸ್ಯೆಗಳಲ್ಲಿ ಒಂದಾಗಿದ್ದ, ಸ್ಮಶಾನ ದಾರಿ ಕುರಿತಂತೆ ಹಲವು ವರ್ಷಗಳಿಂದ ರಸ್ತೆ ಸರಿಪಡಿಸಿ ಸಂಚಾರಕ್ಕೆ ಮುಕ್ತಿ ನೀಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಧರಣಿ ಪ್ರತಿಭಟನೆ ಹೋರಾಟ ಪ್ರತಿಭಟನೆ ಮಾಡುತ್ತಲೇ ಸಾಗಿದ್ದರು. ಕಳೆದ 26ರಂದು ಈ ಕುರಿತು ಚರ್ಚೆ ನಡೆಸಿದ ಗ್ರಾಮಸ್ಥರು, ಬಸನಗಾರಿಗಾಗಿ ರಾಣೇಬೆನ್ನೂರು ಬಂದ್ ಗೆ ಕರೆ ನೀಡಿದ್ದರು.
ಗ್ರಾಮಸ್ಥರ ಹೋರಾಟದ ಸ್ವರೂಪವನ್ನು ಅರಿತ, ತಹಶೀಲ್ದಾರ್ ಶಂಕರ್ ಜಿ.ಎಸ್.ಅವರು ಗ್ರಾಮಕ್ಕೆ ಧಾವಿಸಿ ಅಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲಿಸಿ ತಕ್ಷಣವೇ ಸ್ಮಶಾನ ದಾರಿ ಸರಿಪಡಿಸಲು ಕ್ರಮ ಕೈಗೊಂಡು, ದಿಟ್ಟ ನಿರ್ಧಾರ ಮಾಡಿದ ಅವರು ಕ್ಷಣವೇ ಜೆಸಿಬಿ ತರಿಸಿ, ಗಿಡಗಂಟೆ ಕಾಡು ಬೆಳೆದಿದ್ದ, ಸ್ಮಶಾನ ಸಂಚಾರ ದಾರಿಯನ್ನು ತೆರವುಗೊಳಿಸಲು ಮುಂದಾಗಿದ್ದರ ಪರಿಣಾಮ ಗ್ರಾಮಸ್ಥರು ಅವರು ತೆಗೆದುಕೊಂಡ ನಿರ್ಧಾರಕ್ಕೆ ಗ್ರಾಮದ ಜನತೆ ಸ್ಥಳಕ್ಕೆ ಧಾವಿಸಿ ಅಭಿನಂದಿಸಿ ಪ್ರಸಂಸೆ ವ್ಯಕ್ತಪಡಿಸಿದರು.
ಗ್ರಾಮಸ್ಥರ ಬೇಡಿಕೆಯನ್ನು ಮನ್ನಿಸಿದ ತಹಸಿಲ್ದಾರ್ ಅವರು, ಯಾವುದೇ ಧರಣಿ ಪ್ರತಿಭಟನೆ ಚಳವಳಿ ಬೇಡ, ಸಮಸ್ಯೆಗಳ ಅರಿವು ತಮಗಿದ್ದು, ಕೂಡಲೇ ರಸ್ತೆಪಡಿಸುವ ಭರವಸೆ ನೀಡಿದ್ದರು, ಶಂಕರ್ ಅವರು ನೀಡಿದ ಭರವಸೆಯಂತೆ ಮರುದಿನವೇ ಸ್ಮಶಾನ ಭೂಮಿಯ ಸರ್ವೇ ಕಾರ್ಯ ಮಾಡಿಸಿದ ಅವರು, ನಿರ್ದಿಷ್ಟವಾದ ಸ್ಮಶಾನ ಭೂಮಿಗೆ ಕಾಮಗಾರಿ ಆರಂಭಿಸಲು ಮುಂದಾಗಿರುವುದು ಗ್ರಾಮಸ್ಥರ 105 ವರ್ಷಗಳ ಸಮಸ್ಯೆಗೆ ಇಂದು ಮುಕ್ತಿ ದೊರಕಿದಂತಾಗಿದೆ ಎಂದು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಮುಖಂಡ ಜಗದೀಶ್ ಕೆರೋಡಿ ಮತ್ತು ಗ್ರಾಮದ ನಾಗರಿಕರು, ಮಹಿಳೆಯರು ತಮ್ಮ ಹರ್ಷ ವ್ಯಕ್ತಪಡಿಸಿ ತಾಲೂಕ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ದ್ಯಾಮಪ್ಪ ಅಸುಂಡಿ, ಹನುಮಂತಪ್ಪ ಜ್ಯೋತಿ, ಶಿವಪ್ಪ ಕೆರೋಡಿ, ರವಿ ಮಲ್ಲಳ್ಳಿ, ಲೋಕಪ್ಪ ಲಮಾಣಿ, ಜಗದೀಶ್ ಕೆರೋಡಿ, ಹೊಳಿಯಪ್ಪ ಹಳ್ಳಿ, ಮಂಜು ಲಮಾಣಿ, ಗೋವಿಂದಪ್ಪ ಲಮಾಣಿ, ರಾಜು ಓಲೇಕಾರ್, ಹಾಲೇಶ ಬಸಾಪುರ, ಪಿಡಿಒ ನವ್ಯಶ್ರೀ, ಡಿ.ಕೆ. ಐಶ್ವರ್ಯ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಅಶೋಕ್ ಕೆಂಚ್ ರೆಡ್ಡಿ, ರಮೇಶ್ ಬಳ್ಳಾರಿ, ಮಾರುತಿ ದೊಡ್ಡಮನಿ, ಸೇರಿದಂತೆ ಗ್ರಾಮದ ನೂರಾರು ಮುಖಂಡರು, ಯುವಕರು ಪಾಲ್ಗೊಂಡಿದ್ದರ