ಬೃಹತ್ ಲೋಕ ಅದಾಲತ್: ಹಲವಾರು ಪ್ರಕರಣಗಳು ಇತ್ಯರ್ಥ
ಬೈಲಹೊಂಗಲ 14: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ ಅದಾಲತ್ನಲ್ಲಿ ಹಲವಾರು ಪ್ರಕರಣಗಳು ರಾಜಿಗೊಂಡು ಅದರಲ್ಲಿ ವಿಶೇಷ ಒಂದು ವೈವಾಹಿಕ ಹಕ್ಕುಗಳ ಪುನರ್ ಸ್ವಾಧೀನತೆಗಾಗಿ ಸಲ್ಲಿಸಿದ ಪ್ರಕರಣ ಅರ್ಜಿ ರಾಜಿ ಸಂಧಾನದ ಮೂಲಕ ಇತ್ಯರ್ಥ್ಯಗೊಂಡು ಕುಟುಂಬವೊಂದು ಒಂದೂಗೂಡಿದ ಘಟನೆ ಜರುಗಿದೆ.
ಹಿರಿಯ ದಿವಾಣಿ ನ್ಯಾಯಧೀಶೆ ಉಷಾರಾಣಿ ಆರ್. ಇವರ ನೇತೃತ್ವದಲ್ಲಿ ನಡೆದ ಲೋಕ ಆದಾಲತನಲ್ಲಿ ವೈವಾಹಿಕ ಹಕ್ಕುಗಳ ಪುನರ್ ಸ್ವಾಧೀನತೆಗಾಗಿ ಸಲ್ಲಿಸಿದ ಅರ್ಜಿ ಗಂಡ ಹೆಂಡತಿ ಕೂಡಿ ಬಾಳುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಹರ್ಷ ವ್ಯಕ್ತಪಡಿಸಿ ಪರಸ್ಪರ ಅವರಿಗೆ ಹೂ ಮಾಲೆ ಹಾಕಿಸಿ, ಸಿಹಿ ತಿನ್ನಿಸಿ ಒಂದೂಗೂಡಿಸಿದ್ದಾರೆ.
ಅರ್ಜಿದಾರ ಪರ ವಕೀಲ ಆನಂದ ತುರಮರಿ, ಎದುರುಗಾರ ಪರ ಶ್ರೀಧರ ಪಾಟೀಲ ವಕಾಲತ್ತು ವಹಿಸಿದ್ದರು. ಈ ಸಂದರ್ಭದಲ್ಲಿ ನೂರಾರು ಕಕ್ಷಿದಾರರು, ವಕೀಲರು ಇದ್ದರು.