ಇಂಡಿ

ಹೋರ್ತಿ ಶ್ರೀ ರೇವಣಸಿದ್ಧೇಶ್ವರ ರಥೋತ್ಸವ

ಹೋರ್ತಿ ಶ್ರೀ ರೇವಣಸಿದ್ಧೇಶ್ವರ ರಥೋತ್ಸವ

ಇಂಡಿ,19:  ತಾಲ್ಲೂಕಿನ ಸುಕ್ಷೇತ್ರ ಹೋರ್ತಿ ರೇವಣಸಿದ್ಧೇಶ್ವರ ರಥೋತ್ಸವ ಅದ್ದೂರಿಯಾಗಿ ನಡೆಯಿತು.ಈ ಪುಣ್ಯ ಕ್ಷೇತ್ರಕ್ಕೆ ತನ್ನದೇಯಾದ ಇತಿಹಾಸ ಇದೆ.ಈ ಕ್ಷೇತ್ರದಲ್ಲಿ ಪ್ರಾಚೀನ ಶಿವದೇವಾಲಯ ಇದ್ದು.ಅನೇಕ ಸಿದ್ದರು ಹಾಗೂ ಋಷಿ ಮುನಿಗಳು ವಾಸವಾಗಿದ್ದರು.ಸಿದ್ದರು ಲಿಂಗಪೂಜೆ ನಿಷ್ಠರಾಗಿ ಶಿವನನ್ನು ಆರಾಧಿಸುತ್ತಿದ್ದರು. 

ವ್ಯತಿರಿಕ್ತವಾಗಿ ಈ ವನದಲ್ಲಿ ಮಾಯೆ ಎಂಬ ಸ್ತ್ರೀ ರಾಕ್ಷಸಿ ಶಿವ ಆರಾಧಕರಿಗೆ ತೊಂದರೆ ಕೊಡುತ್ತಿದ್ದಳು.ಶಿವನ ಬದಲಾಗಿ ನನ್ನನು ಪೂಜಿಸಬೇಕೆಂದು ಸಿದ್ದರಿಗೆ ಪೀಡಿಸುತ್ತಿದ್ದಳು.ಆಗ ಸಿದ್ದರು ಶಿವನ ಮೊರೆ ಹೊಕ್ಕು ಮಾಯೆ ರಾಕ್ಷಸಿ ಕಾಟದಿಂದ ಮುಕ್ತಗೊಳಿಸಲು ಶಿವನಲ್ಲಿ ಪ್ರಾರ್ಥಿಸಿ ಕೊಂಡರು. ಆಗ ರೇವಣಸಿದ್ಧರು ಭೂ ಲೋಕಕ್ಕೆ ಬಂದು ಮಾಯೆಯ ಪೀಡೆಯಿಂದ ಸಿದ್ದರನ್ನು ಮುಕ್ತಿ ಗೊಳಿಸಿದರು.ಹಾಗೂ ಮಾಯೆಯನ್ನು ಊರ ಗುಡ್ಡದಲ್ಲಿ ಇಟ್ಟು ಶಿಕ್ಷೆ ಕೊಟ್ಟರು.ಆ ಮಾಯೆ ರಾಕ್ಷಸಿ ತಪ್ಪು ಒಪ್ಪಿಕೊಂಡು ರೇವಣಸಿದ್ದರಿಗೆ ಶರಣಾಗಿ, ತಾವು ವರ್ಷದಲ್ಲಿ ಎರಡು ಬಾರಿ ನನ್ನ ಗುಡ್ಡಕ್ಕೆ ಬಂದು ದರ್ಶನ ನೀಡಬೇಕು ಎಂದು ರೇವಣಸಿದ್ಧರಲ್ಲಿ ಬೇಡಿಕೊಂಡಳು.ಅದರಂತೆ ಶ್ರಾವಣ ಮಾಸದ ಮೂರನೇ ಸೋಮವಾರ ಹಾಗೂ ಛಟ್ಟಿ ಅಮಾವಾಸ್ಯೆಯ ಆದ ಒಂಬತ್ತನೇ ದಿನದಂದು ರೇವಣಸಿದ್ಧರು ಗುಡ್ಡದಲ್ಲಿ ಇರುವ ಮಾಯೆ ಮಾಳಮ್ಮ ಗೆ ದರ್ಶನ ನೀಡುತ್ತಾನೆ.ನಂತರ ಪರಮ ಭಕ್ತ ಹಂಚಿನಾಳ ಬಸಪ್ಪನ ಗುಡಿಗೆ ಹೋಗಿ ದರ್ಶನ ನೀಡುತ್ತಾನೆ. 

ನಂತರ ಶ್ರೀ ರೇವಣಸಿದ್ದೇಶ್ವರ ರಥೋತ್ಸವ  ಸೋಮವಾರ ಸಂಜೆ ಅದ್ಧೂರಿಯಾಗಿ ಜರುಗುತ್ತದೆ. ಭಕ್ತರು ತೇರಿಗೆ ಹೂಹಾರಗಳಿಂದ ಸಿಂಗರಿಸಿ ರಥಕ್ಕೆ ಪೂಜೆ ಸಲ್ಲಿಸಿ, ತೆಂಗು ಒಡೆದು, ಕಳಸಾರೋಹಣ ಮಾಡಿ ಪುರವಂತರ ಕುಣಿತ ಮುಗಿಯುತ್ತಿದ್ದಂತೆ ಭಕ್ತರಿಂದ ಜೈ ಘೋಷ ಕೇಳಿಬರುತ್ತದೆ.ಜಾತ್ರೆಗೆ  ಸೇರಿದ್ದ ಅಪಾರ ಭಕ್ತರು ತೇರಿನ ಮೇಲೆ ಖಾರೀಕ್ , ಬಾಳೆಹಣ್ಣು ತೂರುತ್ತಾರೆ.ಇದು ಆದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎನ್ನುತ್ತಾರೆ ಜಾತ್ರಾ ಕಮೀಟಿ ಅಧ್ಯಕ್ಷರಾದ ಅಣ್ಣಪ್ಪಸಾಹುಕಾರ ಖೈನೂರ ಹೇಳಿದ್ದಾರೆ. 

ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಹಾಗೂ ಜಾತ್ರೆ ಸುಸಜ್ಜಿತವಾಗಿ ಹಾಗೂ ಶಾಂತಿಯುತವಾಗಿ ನಡಿಯಲು ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ದೀಪಿಕಾ ಗೋಡೆಕಾರ ಅವರ ನೇತೃತ್ವದಲ್ಲಿ ವ್ಯಾಪಕ ಪೋಲಿಸ್ ಬಂದು ಬಸ್ತ ಕೈಗೊಳ್ಳಲಾಯಿತು. 


ಸುದ್ದಿ ಓದಿ