ರಾಣೆಬೆನ್ನೂರ

ಹೋಳಿ ಹುಣ್ಣಿಮೆ ಭಾರತೀಯರ ಮಹತ್ವದ ಹಬ್ಬ: ಲಕ್ಷ್ಮಿ ಅಡಿಕೆ

ಹೋಳಿ ಹುಣ್ಣಿಮೆ ಭಾರತೀಯರ ಮಹತ್ವದ ಹಬ್ಬ: ಲಕ್ಷ್ಮಿ ಅಡಿಕೆ

ರಾಣೇಬೆನ್ನೂರು 8: ಹೋಳಿ ಹುಣ್ಣಿಮೆ ಭಾರತೀಯರಿಗೆ ಮಹತ್ವವಾದ ಹಬ್ಬವಾಗಿದೆ ಎಂದು ಜೆ.ಸಿ ಐ ಸಂಸ್ಥೆಯ ನೂತನ ಅಧ್ಯಕ್ಷ ಜೆಸಿ ಲಕ್ಷ್ಮಿ ಅಡಕಿ ಹೇಳಿದರು.      

 ಅವರು ಸೋಮವಾರ ರಾತ್ರಿ ಇಲ್ಲಿನ ಕಾಕಿ ಗಲ್ಲಿಯಲ್ಲಿ  ಕಾಮ-ರತಿ ದೇವರ ಉತ್ಸವ ಸಮಿತಿಯು, ಆಯೋಜಿಸಿದ್ದ 35ನೇ ವಾರ್ಷಿಕೋತ್ಸವದ ಹಲಗೆ ಬಾರಿಸುವ ಸ್ಪರ್ಧಾ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

  ಪೌರಾಣಿಕವಾಗಿ ಆಚರಿಸಲ್ಪಡುತ್ತಿರುವ ಹೋಳಿ ಹಬ್ಬಕ್ಕೆ ಐತಿಹಾಸಿಕವಾಗಿ ಬಹುದೊಡ್ಡ ಇತಿಹಾಸವಿದೆ, ಪ್ರೀತಿ, ವಿಶ್ವಾಸ, ಸೌಹಾರ್ದತೆ ಸಹಬಾಳ್ವೆ ಮತ್ತು ಪರಸ್ಪರ ಭಾವೈಕ್ಯತೆ ಹೊಂದಲು ಬಣ್ಣದೋಕಳಿಯ ರಂಗಿನಾಟ ಸದಾ ಶಾಂತಿ ನೆಮ್ಮದಿ ತರುತ್ತಲಿದೆ ಎಂದರು. ಕಾಕಿ ಜನ ಸೇವಾ ಸಂಸ್ಥೆಯ  ಅಧ್ಯಕ್ಷ,ಜೆಸಿ, ಶ್ರೀನಿವಾಸ ಕಾಕಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ  ಜೆಸಿ, ಶಿವಾನಂದ ಬಾಗಾದಿ ಅವರು ಸಮಾಜದಲ್ಲಿ ಶಾಂತಿ ನೆಮ್ಮದಿ ಬಹುಮುಖ್ಯ, ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಯಾವುದೇ ಹಬ್ಬ,ಹರಿ ದಿನಗಳು,ಜಾತ್ರೆ ಉತ್ಸವಗಳು, ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ ಎಂದರು. 

    ಭಾರತೀಯ ಪರಂಪರೆಯಲ್ಲಿ ಬರುವ ಎಲ್ಲಾ ಹಬ್ಬಗಳು  ಮಹಿಳೆಯರಿಗಾಗಿಯೇ ಮೀಸಲಾಗಿವೆ. ಆದರೆ ಹೋಳಿ ಹಬ್ಬ ಮಾತ್ರ ಪುರುಷರಿಗೆ ಮೀಸಲಾಗಿರುವ ಏಕೈಕ ಹಬ್ಬವಾಗಿದೆ. ಈ ಹಬ್ಬದಲ್ಲಿ ಮಾತ್ರ ಪುರುಷರು  ಕುಣಿದು, ಕುಣಿದು, ಕುಪ್ಪಳಿಸಿ ಸಂತೋಷಪಡುವ ಮಹತ್ವದ ಹಬ್ಬ ಇದಾಗಿದೆ ಎಂದರು. ಗಣಿತ ತಜ್ಞ ಬಸವರಾಜ ಉಮ್ರಾಣಿ ಅವರು ಭಾರತೀಯರು ಮತ್ತು ಹಬ್ಬಗಳು ಆಚರಣೆ ಕುರಿತು ಮಾತನಾಡಿದರು. ಜೇಸಿ ಮಾಜಿ ಅಧ್ಯಕ್ಷ ವೆಂಕಟೇಶ ಕಾಕಿ, ಜೇಸಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀಮತಿ ರೂಪಾ ಕಾಕಿ, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ವರ್ತಕರಾದ ಮಲ್ಲೇಶಪ್ಪ ಬಸನಗೌಡ್ರ, ತಿರಕಪ್ಪ ಕಾಕಿ, ಶಿವಣ್ಣ ಬಣಕಾರ್, ಲಕ್ಷ್ಮಣ ಕಣಕಿ,, ಪ್ರಭುಲಿಂಗಪ್ಪ ಹಲಗೇರಿ, ಎಸ್. ಎನ್. ಕುಬಸದ್,ಸ್ನೇಹಾ ಕುಬಸದ, ಕುಬಸದ, ಆರ್ ವಿ ಪಾಟೀಲ್, ಪ್ರಕಾಶ್ ಬನ್ನಿಕೋಡ್, ಸೇರಿದಂತೆ ಮತ್ತಿತರ ಗಣ್ಯರು  ಉಪಸ್ಥಿತರಿದ್ದರು. ಕಲಾವಿದ ಪ್ರಕಾಶ್ ಗಚ್ಚಿನಮಠ  ಪ್ರಾರ್ಥಿ ಸಿದರು. ಕಾಮ-ರತಿ ದೇವರ ಉತ್ಸವ ಸಮಿತಿಯ ಅಧ್ಯಕ್ಷ ಶಂಕರಣ್ಣ ಕಾಕಿ ಸ್ವಾಗತಿಸಿದರು. ಅಭಿರುಚಿ ಜನಪದ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ನಾಗರಾಜ್ ನಿರೂಪಿಸಿ ವಂದಿಸಿದರು. ಇನ್ನೋರ್ವ  ಕಲಾವಿದ ಗುಡ್ಡರಾಜ ಹಲಗೇರಿ ಅವರು ಸ್ಪರ್ದ ನಿರ್ಣಾಯಕರಾಗಿ ಪಾಲ್ಗೊಂಡು ತಮ್ಮ ಸೇವೆ ಸಲ್ಲಿಸಿದರು. ಹಲಗೆ  ಸ್ಪರ್ಧೆಯಲ್ಲಿ ತಾಲೂಕಿನ ಹತ್ತಾರು ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆ ಮೆರೆದು ಬಹುಮಾನ ಪಡೆದರು 

ಸುದ್ದಿ ಓದಿ