ಬೈಲಹೊಂಗಲ

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಛೇರಿಗೆ ಬೀಗ ಜಡಿದು ಪ್ರತಿಭಟನೆ

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಛೇರಿಗೆ ಬೀಗ ಜಡಿದು ಪ್ರತಿಭಟನೆ

ಲೋಕದರ್ಶನ ವರದಿ 

ಬೈಲಹೊಂಗಲ 15: ತಾಲೂಕಿನ ಮಲ್ಲಮ್ಮನ ಬೆಳವಡಿ ವಿದ್ಯುತ್ ಶಾಖೆ ನಿಯಂತ್ರಣ ಕಚೇರಿ ವ್ಯಾಪ್ತಿಗೆ ಬರುವ ದೊಡವಾಡ ಗೋವನಕೊಪ್ಪ ಗುಡಿಕಟ್ಟಿ ನನುಗುಂಡಿಕೊಪ್ಪ ಚಿಕ್ಕಬೆಳ್ಳಿಕಟ್ಟಿ ಗ್ರಾಮಗಳಿಗೆ ಸಮರ​‍್ಕವಾಗಿ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮತ್ತು ಏಕಾಏಕಿ ವಿದ್ಯುತ್ ತರದ ಹೆಚ್ಚಳವನ್ನು ಖಂಡಿಸಿ ಈ ಗ್ರಾಮಗಳ ರೈತರು ಮಲ್ಲಮ್ಮನ ಬೆಳವಡಿಯ ಹೆಸ್ಕಾಂ ಕಚೇರಿಗೆ ಗುರುವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು. 

      ಪ್ರತಿಭಟನಾ ನಿರತ ರೈತರ ಪರವಾಗಿ ಮಾತನಾಡಿದ ಸೋಮೇಶ್ವರ ಶುಗರ್ಸ್‌ ನಿರ್ದೇಶಕ ನಿಂಗಪ್ಪ ಚೌಡನ್ನವರ ಹಾಗೂ ಗದಿಗೆಪ್ಪ ಅರಳಿಮರದ, ಮಹಾಂತೇಶ ಹೊಂಗಲ ಇನ್ನಿತರರು ಬೆಳವಡಿ ವಿಭಾಗದ ಅನೇಕ ಗ್ರಾಮಗಳ ರೈತರ ಪಂಪಸೆಟ್ ಗಳಿಗೆ ಹಗಲು ಹೊತ್ತಿನಲ್ಲೇ 6 ತಾಸು ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ ಆದರೆ ದೊಡವಾಡ, ಗೋವನಕೊಪ್ಪ, ನಂಗೊಂಡಿಕೊಪ್ಪ, ಗುಡಕಟ್ಟಿ, ಚಿಕ್ಕಬೆಳ್ಳಿಕಟ್ಟಿ ಗ್ರಾಮಗಳ ರೈತರ ಪಂಪಸೆಟ್ ಗಳಿಗೆ ರಾತ್ರಿ ಹೊತ್ತು ತ್ರಿಫೇಸ್ ವಿದ್ಯುತ್ ಮಾತ್ರ ಪೂರೈಸುತ್ತಿದ್ದಾರೆ. ರೈತರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಪ್ರತಿ ದಿನವೂ ನೂರೆಂಟು ಬಾರಿ ವಿದ್ಯುತ್ ಪೂರೈಕೆ ನಿಲ್ಲಿಸುತ್ತಾರೆ. ಹೀಗಾದರೆ ರೈತರು ಬೆಳೆ ಬೆಳೆಯುವದಾದರೂ ಹೇಗೆ? ಈಗಾಗಲೇ ಈ ವ್ಯವಸ್ಥೆಯನ್ನು ಪ್ರತಿಭಟಿಸಿ ಕಳೆದ ವರ್ಷ ಡಿಸೆಂಬರ್ ನಲ್ಲಿ ನೂರಾರು ರೈತರು ಸೇರಿ ಉಗ್ರ ಹೋರಾಟ ಮಾಡಿದ್ದೆವು ಆ ಸಂದರ್ಭದಲ್ಲಿ ಬೆಳವಡಿಯ ಶಾಖಾಧಿಕಾರಿಗಳು ಲಿಖಿತ ಪತ್ರವನ್ನು ಕೊಟ್ಟು ಹಗಲು ಹೊತ್ತಿನಲ್ಲಿ ಏಳು ತಾಸು ತಿಫೇಸ್ ವಿದ್ಯುತ್ ಪೂರೈಕೆಗೆ ಕ್ರಮವಹಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಈಗ ಆರು ತಿಂಗಳು ಕಳೆದರೂ ಆ ಮಾತಿನಂತೆ ನಡೆದುಕೊಳ್ಳದೆ ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ. ಅಲ್ಲದೆ ವಿದ್ಯುತ್ ದರಗಳನ್ನು ಏಕಾಏಕಿ ಹೆಚ್ಚಿಸಿದ್ದರಿಂದ ಕಳೆದ ತಿಂಗಳಿಗಿಂತ ದುಪ್ಪಟ್ಟು ವಿದ್ಯುತ್ ಬಿಲ್ ಬಂದಿದ್ದು ಜನತೆ ಕಂಗಲಾಗಿದ್ದಾರೆ. 

    ಆದ್ದರಿಂದ ಇನ್ನೊಂದು ವಾರದಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸದೆ ಹೋದರೆ ತಾಲೂಕು ವಿದ್ಯುತ್ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಅತ್ಯುಗ್ರ ಪ್ರತಿಭಟನೆ ನಡೆಸಲಾಗುವುದೆಂದು ಇದೆ ವೇಳೆ ಅವರು ಅಧಿಕಾರಿಗಳನ್ನು ಎಚ್ಚರಿಸಿದರು. ವಿವಿಧ ಗ್ರಾಮಗಳ ರೈತರಾದ ಶ್ರೀಶೈಲ ಅನಿಕಿವಿ, ಈರ​‍್ಪ ನರೇಂದ್ರ, ಅಡಿವೆಪ್ಪ ಗುಂಡ್ಲೂರ, ಈರ​‍್ಪ ಕಿಂದರಿ, ಪಾಲಾಕ್ಷ ಆನಿಕಿವಿ, ನಿಂಗಪ್ಪ ಚಬ್ಬಿ, ಪತ್ರ​‍್ಪ ಮುದೇನೂರು, ಮಾಂತೇಶ್ ಚೌಡನ್ನವರ, ದ್ಯಾಮಣ್ಣ ಸಂಗೊಳ್ಳಿ, ಈರಣ್ಣ ಚಂದರಗಿ, ಶಂಕರ್ ಚೌಡನ್ನವರ ಹಾಗೂ ಅನೇಕ ರೈತರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ