ಯರಗಟ್ಟಿ

ವಿದ್ಯುತ್ ಲೈನ್ ಕೈಗೆಟಕುವಂತಿದ್ದರೂ ಕಣ್ಮುಚ್ಚಿ ಕುಳಿತ ಹೆಸ್ಕಾಂ ಅಧಿಕಾರಿಗಳು: ರೈತರ ಆಕ್ರೋಶ

ವಿದ್ಯುತ್ ಲೈನ್ ಕೈಗೆಟಕುವಂತಿದ್ದರೂ ಕಣ್ಮುಚ್ಚಿ ಕುಳಿತ ಹೆಸ್ಕಾಂ ಅಧಿಕಾರಿಗಳು: ರೈತರ ಆಕ್ರೋಶ

ಲೋಕದರ್ಶನ ವರದಿ 


ಯರಗಟ್ಟಿ 28: ಸಮೀದ ಕೋಟೂರ-ಶಿವಾಪೂರ ಗ್ರಾಮದ ಸುತ್ತಮುತ್ತ ರೈತರ ಜಮೀನುಗಳಲ್ಲಿ ಸಾಕಷ್ಟು ವಿದ್ಯುತ್ ತಂತಿಗಳು ಕೈಗೆಟುಕುವಷ್ಟು ಎತ್ತರವಿದ್ದರೂ ಕಣ್ಮುಚ್ಚಿ ಕುಳಿತ ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. 

  ನಿರಂತರವಾಗಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅಪಘಾತಗಳು ಸಂಭವಿಸಿ ಕಷ್ಟಪಟ್ಟ ಬೆಳೆದ ರೈತರ ಬೆಳೆಗಳು ಬೆಂಕಿಗೆ ಆಹುತಿ ಆಗುತ್ತಿವೆ. ಇತ್ತೀಚೆಗೆ ರೈತರ ಜಮೀನಗಳಲ್ಲಿ ಕುರಿಗಾಯಿಗಳು, ರೈತರು, ಜಾನುವಾರುಗಳು ಹೀಗೆ ವಿವಿಧ ಪ್ರಾಣಿಗಳು ವಿದ್ಯುತ್ ತಗುಲಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ  ಅಧಿಕಾರಿಗಳು ಮಾತ್ರ ಮೂಕ ಪ್ರೆಕ್ಷಕರಾಗಿರುವುದು ವಿಪರ್ಯಾಸವಾಗಿದೆ. 

ಈ ಸಂಧರ್ಭದಲ್ಲಿ ಸೂಪರ್ ಸ್ಟಾರ್ ರೈತ ಮಹಾಂತೇಶ ತೋಟಗಿ ಮಾತನಾಡಿ ಈ ಭಾಗದ ಅಪಾಯಕಾರಿ ವಿದ್ಯುತ್ ಲೈನ್ ಸರಿಪಡಿಸಲು ಸಾಕಷ್ಟು ಬಾರಿ ಸಂಭಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ರೈತರೆಲ್ಲರೂ ದೂರು ನೀಡಿದರೂ ಏನು ಪ್ರಯೋಜನವಾಗಿಲ್ಲ ಸ್ವತಃ ನಮ್ಮ ಜಮೀನಲ್ಲಿ ಕೈಗೆಟುಕುವ ಹಾಗೆ ವಿದ್ಯುತ್ ಲೈನ್ ಇದ್ದು ಕಬ್ಬಿನ ಬೆಳೆಯೊಳಗೆ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಅಪಾಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು. 


ಸುದ್ದಿ ಓದಿ