ಧಾರವಾಡ - ಹುಬ್ಬಳ್ಳಿ

ಜೀವನದಲ್ಲಿ ಯಶಸ್ಸನ್ನು ಗಳಿಸಲು ಕಠಿಣ ಪರಿಶ್ರಮ ಅವಶ್ಯಕ

ಜೀವನದಲ್ಲಿ ಯಶಸ್ಸನ್ನು ಗಳಿಸಲು ಕಠಿಣ ಪರಿಶ್ರಮ ಅವಶ್ಯಕ

ಅಂತರ್ ಮಹಾವಿದ್ಯಾಲಯ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕ್ರಿಕೆಟರ್ ದೊಡ್ಡ ಗಣೇಶ್ ಅಭಿಮತ 

ಹುಬ್ಬಳ್ಳಿ 26: ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟು ಶಿಸ್ತು, ಸಮರೆ​‍್ಣ, ಧೈರ್ಯ, ಸ್ಫೂರ್ತಿ ಉತ್ಸಾಹಗಳೆಂಬ ನಿಯಮಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ಜೀವನದಲ್ಲಿ ಯಶಸ್ಸನ್ನು ಗಳಿಸಲು ಕಠಿಣ ಪರಿಶ್ರಮದ ಅವಶ್ಯಕತೆಯಿದೆ. ಯಾರು ಕೂಡ ಕಡಿಮೆ ಸಮಯ, ನಿರಾಯಾಸ ಮತ್ತು ಅಡ್ಡದಾರಿಗಳಿಂದ ಯಶಸ್ಸನ್ನು ಪಡೆಯಲಿಕ್ಕೆ ಸಾಧ್ಯವಿಲ್ಲವೆಂದು ಅಂತರ್ ರಾಷ್ಟ್ರೀಯ ಕ್ರಿಕೆಟರ್ ದೊಡ್ಡ ಗಣೇಶ್ ಅವರು ಅಭಿಪ್ರಾಯಪಟ್ಟರು. 

ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ದಿ.25ರಂದು ಧಾರವಾಡ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 8ನೇ ಅಂತರ್ ಮಹಾವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು. 

ಪ್ರತಿಯೊಬ್ಬ ಕ್ರೀಡಾಪಟು ಕ್ರೀಡೆಯಲ್ಲಿ ಶಿಸ್ತಿನಿಂದ ಭಾಗವಹಿಸಿ ಯಶಸ್ಸಿನಲ್ಲಿ ಭಾಗಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳುತ್ತಾ, ಕಠಿಣ ಪರಿಶ್ರಮದಿಂದ ಕ್ರೀಡೆಯಲ್ಲಿ ಭಾಗವಹಿಸಿರುವುದರ ಫಲವಾಗಿ ಇಂದು ತಮಗೆ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತೆಂದು ಹೇಳಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. 

ಡಾ. ಖಾಲಿದ್ ಖಾನ್ ನಿರ್ದೇಶಕರು, ದೈಹಿಕ ಶಿಕ್ಷಣ ಮತ್ತು ಸಂಘಟನಾ ಕಾರ್ಯದರ್ಶಿಗಳು ಇವರು ಕ್ರೀಡಾ ಚಟುವಟಿಕೆಗಳ ವರದಿಯನ್ನು ವಾಚಿಸಿದರು.  

ಅಧಕ್ಷತೆಯನ್ನು ವಹಿಸಿದ್ದ ಹುಬ್ಬಳ್ಳಿ ಕ.ರಾ.ಕಾ.ವಿ. ಕುಲಪತಿ ಪ್ರೋ. ಡಾ. ಸಿ. ಬಸವರಾಜು ಅವರು 8ನೇ ಅಂತರ ಮಹಾವಿದ್ಯಾಲಯ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಎಲ್ಲಾ ಕ್ರೀಡಾಪಟುಗಳಿಗೆ ಯಶಸ್ಸನ್ನು ಸಾಧಿಸಲು ಸನ್ಮಾರ್ಗ ಮತ್ತು ಧೈರ್ಯದಿಂದ ಮುನ್ನುಗ್ಗಲು ಸೂಚಿಸಿ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ದೊಡ್ಡಗಣೇಶರವರು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೀರ್ತಿಯನ್ನು ತಂದು ಕೊಟ್ಟಿರುವಂತಹದ್ದು ಪ್ರಶಂಸನೀಯ ವಿಷಯ. ಅವರು ನಮ್ಮೆಲ್ಲರಿಗೆ ಸ್ಫೂರ್ತಿ, ಒಬ್ಬ ವ್ಯಕ್ತಿ ಕಷ್ಟದಲ್ಲಿಯೂ ಸಹ ಸಹನೆ, ನಮ್ರತೆ, ಶಿಸ್ತು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯಪ್ರವೃತ್ತನಾದರೆ ಎಂತಹ ಸವಾಲನ್ನು ಕೂಡ ಜೀವನದಲ್ಲಿ ಎದುರಿಸಿ ಯಶಸ್ಸನ್ನು ಪಡೆದುಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.  

ಇಂತಹ ಮಳೆಯ ಮಧ್ಯದಲ್ಲಿಯು ಎದೆಗುಂದದೆ ಅದೇ ಕ್ರೀಡಾಸೂರ್ತಿಯಿಂದ ಭಾಗವಹಿಸಿದ ಎಲ್ಲ ಕಾನೂನು ಮಹಾವಿದ್ಯಾಲಯಗಳ ಕ್ರೀಡಾರ್ಥಿಗಳಿಗೆ ಶುಭ ಹಾರೈಸಿದರು. ಅಭಾರ ಮನ್ನಣೆಯನ್ನು ಪ್ರೋ. ಡಾ. ರತ್ನಾ ಆರ್‌. ಭರಮಗೌಡರ, ಡೀನರು, ಕುಲಸಚಿವರು ಮೌಲ್ಯಮಾಪನ, ಹಣಕಾಸು ಅಧಿಕಾರಿಗಳು ಕ.ರಾ.ಕಾ.ವಿ., ಮತ್ತು ನಿರ್ದೇಶಕರು, ಕ.ರಾ.ಕಾ.ವಿ. ಕಾನೂನು ಶಾಲೆ ಹುಬ್ಬಳ್ಳಿ ಇವರು ನೆರವೇರಿಸಿಕೊಟ್ಟರು.  

ಐಶ್ವರ್ಯ ಭಟ್ ಕಾನೂನು ಶಾಲೆ ವಿದ್ಯಾರ್ಥಿನಿ ಇವರು ಅತ್ಯಂತ ಶುಶ್ರಾವ್ಯವಾಗಿ ಪ್ರಾರ್ಥನ ಗೀತೆಯನ್ನು ಹಾಡಿದರು. ನೀಲಾಂಬಿಕಾ ದೇಶಮುಖ ಕಾನೂನು ಶಾಲೆ ವಿದ್ಯಾರ್ಥಿನಿ ಇವರು ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು, ಶ್ರವಣಾ ಮತ್ತು ಸಮೀರ್ ಕಾನೂನು ಶಾಲೆ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸೈಫ್ ಅಲಿ, ಕಾನೂನು ಶಾಲೆ ವಿದ್ಯಾರ್ಥಿ ಇವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಓದಿದರು. ಅತಿಥಿಗಳಾಗಿ ವಸಂತ ಲದ್ವಾ ಸಿಂಡಿಕೇಟ್ ಸದಸ್ಯರು, ಅನುರಾಧಾ ವಸ್ತ್ರದ ಕೆ.ಎ.ಎಸ್‌., ಕುಲಸಚಿವರು, ಕ.ರಾ.ಕಾ.ವಿ., ಹುಬ್ಬಳ್ಳಿ, ಪ್ರೋ. ಡಾ. ರತ್ನಾ ಆರ್‌. ಭರಮಗೌಡರ, ಡೀನರು, ಕುಲಸಚಿವರು ಮೌಲ್ಯಮಾಪನ, ಹಣಕಾಸು ಅಧಿಕಾರಿಗಳು ಕ.ರಾ.ಕಾ.ವಿ., ಮತ್ತು ನಿರ್ದೇಶಕರು, ಕ.ರಾ.ಕಾ.ವಿ. ಕಾನೂನು ಶಾಲೆ ಹುಬ್ಬಳ್ಳಿ ಮತ್ತು ಡಾ. ಖಾಲಿದ್ ಖಾನ್ ನಿರ್ದೇಶಕರು, ದೈಹಿಕ ಶಿಕ್ಷಣ ಮತ್ತು ಸಂಘಟನಾ ಕಾರ್ಯದರ್ಶಿಗಳು ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.  

ಅತಿಥಿಗಳು, ಆಹ್ವಾನಿತರು, ಕ್ರೀಡಾಪಟುಗಳು, ವಿವಿಧ ಕಾನೂನು ಮಹಾವಿದ್ಯಾಲಯಗಳ ದೈಹಿಕ ಶಿಕ್ಷಕರು ಹಾಗೂ ಕರಾಕಾವಿಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ