ನೇಕಾರ ಅಭಿವೃದ್ಧಿ ನಿಗಮಗಳಿಗೆ ನೇಮಕಾತಿಗೊಳಿಸಲು ಹನುಮಂತಪ್ಪ ಮುಕ್ತೇನಹಳ್ಳಿ ಆಗ್ರಹ
ರಾಣೇಬೆನ್ನೂರು24: ನೇಕಾರ ಸಮುದಾಯದ ವಿವಿಧ ನಿಗಮ ಹಾಗೂ ನಿಗಮ ಮಂಡಳಿಗಳಿಗೆ ಸಂಬಂಧಿಸಿದಂತೆ ಆ ಸಮುದಾಯದ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಅಧ್ಯಕ್ಷರನ್ನಾಗಿಸಿ ನೇಮಕಾತಿಗೊಳಿಸುವುದರ ಮೂಲಕ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಹಾವೇರಿ ಜಿಲ್ಲಾ ಪದ್ಮಶಾಲಿ ನೇಕಾರ ಸಮಾಜದ ಹಾಗೂ ಉತ್ತರ ಕನರ್ಾಟಕ ಪ್ರಾಂತೀಯ ಪದ್ಮಶಾಲಿ ಸಂಘದ ಅಧ್ಯಕ್ಷ ಹನುಮಂತಪ್ಪ ಟಿ.ಮುಕ್ತೆನಹಳ್ಳಿ ಅವರು ಸಕರ್ಾರಕ್ಕೆ ಆಗ್ರಹಿಸಿದ್ದಾರೆ.
ಮಂಗಳವಾರ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ನಮ್ಮ ಸಮಾಜದ ಮುಖಂಡರಾಗಿರುವ ಗಂಗಾವತಿಯ ಕೊಂಕತಿ ಕಾಳಪ್ಪನವರ, ( ಕೈಮಗ್ಗ ಅಭಿವೃದ್ಧಿ ನಿಗಮ )ಇಳಕಲ್ ಸಾಕ ವೆಂಕಟೇಶ, ( ನೇಕಾರ ಅಭಿವೃದ್ಧಿ ನಿಗಮ )ಬಾಗಲಕೋಟೆಯ ಶ್ರೀನಿವಾಸ ಬಳ್ಳಾರಿ, ( ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮ- ಮತ್ತು ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಅಧ್ಯಕ್ಷರನ್ನಾಗಿ ನೇಮಕಾತಿಗೋಳಿಸಲು ಮುಖ್ಯಮಂತ್ರಿಗಳು ಗಮನಹರಿಸಬೇಕೆಂದು ಮಾಧ್ಯಮಕ್ಕೆ ನೀಡಿರುವ ಪ್ರಕಟಣೆಯಲ್ಲಿ ಕೋರಿದ್ದಾರೆ. ನೇಕಾರ ಸಮುದಾಯಗಳ ಒಳಪಂಗಡಗಳಲ್ಲಿರುವ ಹಲವು ಸಮುದಾಯಗಳು ನೇಕಾರರ ನಿಗಮಗಳಿಗೆ ಈ ಹಿಂದೆ ಅಧ್ಯಕ್ಷರನ್ನಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.ಅವಕಾಶ ವಂಚಿತ ಪದ್ಮಶಾಲಿ ನೇಕಾರ ಸಮುದಾಯಕ್ಕೆ ಈ ಬಾರಿ ಮುಖ್ಯಮಂತ್ರಿಗಳು ಪ್ರಥಮ ಮಾನ್ಯತೆ ನೀಡಬೇಕೆಂದು ಹನುಮಂತಪ್ಪ ಅವರು ವಿನಮ್ರ ಮನವಿ ಮಾಡಿದ್ದಾರ.