ಬೈಲಹೊಂಗಲ

ಹನುಮ ಮಾಲಾಧಾರಿಗಳಿಂದ ವೃತಾಚರಣೆ, ಆಂಜನಾದ್ರಿ ಬೆಟ್ಟಕ್ಕೆ ಪ್ರಯಾಣ

ಹನುಮ ಮಾಲಾಧಾರಿಗಳಿಂದ ವೃತಾಚರಣೆ, ಆಂಜನಾದ್ರಿ ಬೆಟ್ಟಕ್ಕೆ ಪ್ರಯಾಣ

ಬೈಲಹೊಂಗಲ 18: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹನುಮ ಮಾಲೆ ಧರಿಸಿರುವ ಮಾಲಾಧಾರಿಗಳು ವೃತಾಚರಣೆ ಕೈಕೊಂಡು ಹನುಮನ ಜನ್ಮಸ್ಥಳ ಕಿಷ್ಕಂದೆಯ ಆಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದರು.  

ಮರಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸನ್ನಿಧಿ ಮಾಡಿ ಶ್ರದ್ಧೆ, ಭಕ್ತಿಯಿಂದ   ವೃತಾಚರಣೆ ನಡೆಸಿದ ಮಾಲಾಧಾರಿಗಳು ಹನುಮಂತನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಎಲ್ಲಿ ಹನುಮನು, ಅಲ್ಲಿ ರಾಮನು, ರಾಮನ ಉಸಿರೇ, ಹನುಮ, ಹನುಮನ ಪ್ರಾಣ ರಾಮ ಎಂಬ ಭಕ್ತಿಯಿಂದ ಹನುಮ, ರಾಮನ ನಾಮ ಸ್ಮರಣೆ ಮಾಡಿದರು. ಹಿರಿಯ ಮಾಲಾಧಾರಿ ಕುಮಾರ ಹೂಗಾರ ಪೂಜೆ ಸಲ್ಲಿಸಿ ಮಾತನಾಡಿ, ’ವರ್ಷ ಪದ್ಧತಿಯಂತೆ ಈ ವರ್ಷವು ಯುವಕರ ತಂಡ ಹನುಮನ ಜನ್ಮಸ್ಥಳ ಕಿಷ್ಕಂದೆಯ ಆಂಜನಾದ್ರಿ ಬೆಟ್ಟಕ್ಕೆ ತೆರಳಿ ವೃತಾಚರಣೆ ಪೂರ್ಣಗೊಳಿಸಿ ಪೂಜೆ, ಪ್ರಾರ್ಥನೆ ಸಲ್ಲಿಸಲ್ಲಿದ್ದಾರೆ. ಯುವಕರು ದುಶ್ಚಟಗಳಿಗೆ ಮಾರು ಹೋಗದೆ ಸಂಸ್ಕೃತಿ, ಸಂಸ್ಕಾರ ಪಡೆದು ಭಾರತೀಯ ಸಂಪ್ರದಾಯದ ವೃತಾಚರಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಂಸ್ಕೃತರಾಗಿ ಬದುಕಿ, ಬಾಳುವ ಅವಶ್ಯಕತೆ ಇದೆ. ಈ ಒಂದು ದೃಷ್ಠಿಯಿಂದ ಯುವಕರಿಗೆ ಸನ್ಮಾರ್ಗ ತೋರಿ ಧರ್ಮದ ಹಾದಿಯಲ್ಲಿ ಮುನ್ನಡೆಸುವ ಅವಶ್ಯಕತೆ ಇದೆ’ ಎಂದರು. ವ 

ಾಲಾಧಾರಿಗಳಾದ ಶ್ರೀನೀತ ಇಂಗಳಗಿ, ಬಸವರಾಜ ತೋಟಗಿ, ಸಚಿನ ದೊಡವಾಡ, ಈಶ್ವರ ಗಾಳಿ, ಈರಣ್ಣಾ ವಕ್ಕುಂದ, ಸುರೇಶ ಹೊನ್ನಿನಾಯ್ಕರ, ಮಲ್ಲಿಕಾರ್ಜುನ ಆನಿಗೋಳ, ಈಶ್ವರ ಆನಿಗೋಳ, ಅಜ್ಜಪ್ಪ ಕುಡಸೋಮಣ್ಣವರ ಇದ್ದರು. 


ಸುದ್ದಿ ಓದಿ