ಬೈಲಹೊಂಗಲ

ಹನುಮ ಮಾಲಾಧಾರಿಗಳಿಂದ ಹನುಮನ ಪೂಜೆ

ಹನುಮ ಮಾಲಾಧಾರಿಗಳಿಂದ ಹನುಮನ ಪೂಜೆ

ಬೈಲಹೊಂಗಲ 20:  ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ಹನುಮ ಮಾಲಾಧಾರಿಗಳು   ಹನುಮನಿಗೆ ಮಹಾಪೂಜೆ  ನೆರವೇರಿಸಿದರು. 

ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ವೃತದಾರಿಗಳು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹನುಮಾನ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಮೆರವಣಿಗೆ  ನೆರವೇರಿಸಿದರು.   ಶ್ರೀ ರಾಮ, ಜೈ ಶ್ರೀರಾಮ, ಎಂದು ಘೋಷಣೆ ಕೂಗುತ್ತಾ ಭಕ್ತಿಭಾದಿಂದ ಮೆರವಣಿಗೆಯಲ್ಲಿ ನೂರಾರು ಹನುಮ ಮಾಲಾಧಾರಿಗಳು  ಪಾಲ್ಗೊಂಡಿದ್ದರು. 

ಶ್ರೀ ಆಂಜನೇಯನಿಗೆ ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿತ್ತು.  ಹನುಮಾನ್ ಚಾಲೀಸ ಪಾರಾಯಣ, ಕರ​‍್ೂರದ ಆರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ,   ನಿರಂತರ ಭಜನೆ, ಪವನಾಮ ಹೋಮ, ಮೂರ್ತಿಗೆ ವಿಶೇಷ ಅಲಂಕಾರ ಮತ್ತು ಅನ್ನಸಂತರೆ​‍್ಣ ಕಾರ್ಯಕ್ರಮ ಜರುಗಿದವು. 

ಗುರು  ಸ್ವಾಮೀಜಿ ಮಲ್ಲಯ್ಯ ಬೆಂಡಿಗೇರಿ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಿದವು. ರೂ.20 ಸಾವಿರ ದೇಣಿಗೆ ನೀಡಿದ ಸಮಾಜ ಸೇವಕ ನಾಗಪ್ಪ ಮೇಟಿ ಅವರನ್ನು ಸತ್ಕರಿಸಲಾಯಿತು. ನೂರಾರು ಹನುಮ ಮಾಲಾಧಾರಿಗಳು ಇದ್ದರು. 


ಸುದ್ದಿ ಓದಿ