ಹನುಮ ಜಯಂತಿ: ಆಂಜನೇಯ ಮೂರ್ತಿಗೆ ವಿಶೇಷ ಎಲೆ ಪೂಜೆ, ಅಭಿಷೇಕ
ಲೋಕದರ್ಶನ ವರದಿ
ಸವದತ್ತಿ 17: ತಾಲೂಕಿನ ಶಿರಸಂಗಿ ಗ್ರಾಮದ ಹಾಳೂರು ಹಣಮಂತ ದೇವಸ್ಥಾನದಲ್ಲಿ ಶನಿವಾರ ಹನುಮ ಜಯಂತಿ ಅಂಗವಾಗಿ ದೇವಸ್ಥಾನದ ಜಿರ್ಣೋದಾರ ಕಮೀಟಿ ವತಿಯಿಂದ ಆಂಜನೇಯ ಮೂರ್ತಿಗೆ ವಿಶೇಷ ಎಲೆ ಪೂಜೆ, ಅಭಿಷೇಕ ನೆರವೇರಿಸಿದರು. ನಂತರ ಭಕ್ತರಿಗೆ ಅನ್ನ ಪ್ರಸಾದ ಆಯೋಜಿಸಲಾಗಿತ್ತು. ಶಿವಯೋಗಿ ಹಿರೇಮಠ ಸಾನಿಧ್ಯ ವಹಿಸಿದ್ದರು. ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಗೋರವನಕೋಳ್ಳ ಅನ್ನಪ್ರಸಾದಕ್ಕೆ ಚಾಲನೆ ನೀಡಿದರು. ಹಿರಿಯ ಮುಖಂಡ ಗದಿಗೆಪ್ಪ ಶಿರಸಂಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಹಾಲುಮತ ಯುವ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು ಮುದ್ನೂರ, ಗ್ರಾಪಂ ಸದಸ್ಯ ಮಲ್ಲಪ್ಪ ಕಪಲನ್ನವರ, ಪಿಕೆಪಿಎಸ್ ಮಾಜಿ ನಿರ್ದೇಶಕ ಕಲ್ಲಪ್ಪ ನಾಗನೂರ, ಗ್ರಾಮದ ಹಿರಿಯರಾದ ಕಲ್ಲಪ್ಪ ಚಿಕ್ಕುಂಬಿ, ಮಲ್ಲಪ್ಪ ಚಿಕ್ಕುಂಬಿ, ಉಮೇಶ ಬಟಕುರ್ಕಿ, ಕುಮಾರ ಅಂಗಡಿ, ಮಹಾಂತೇಶ ಪೋತರಾಜ, ಗಂಗಪ್ಪ ನಾಯ್ಕರ, ಸೋಮಯ್ಯ ಹಿರೇಮಠ, ಸಂಜು ಬೂದಿಹಾಳ, ಹಣಮಂತ ಮೂರ್ತೆನ್ನವರ ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.