ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ
ಧಾರವಾಡ 20: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಪಾಲಕರಿಗಾಗಿ ಪಾದ ಪೂಜಾ ಕಾರ್ಯಕ್ರಮವನ್ನು ಗುರು ಪೂರ್ಣಿಮೆಯ ನಿಮಿತ್ತ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎರಡು ನೂರಕ್ಕೂ ಹೆಚ್ಚು ಪಾಲಕರು ಆಗಮಿಸಿ ಪಾದಪೂಜೆಯನ್ನು ತಮ್ಮ ಮಕ್ಕಳಿಂದ ನೆರವೇರಿಸಿಕೊಂಡು ಆನಂದ ಭರಿತರಾದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾಽಽ ಅಜಿತ ಪ್ರಸಾದ ಅವರು ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸಿ ಸಂತಸಗೊಂಡು ಎಲ್ಲರಿಗೂ ಶುಭ ಹಾರೈಸಿ ನೈತಿಕತೆಯನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯ ಈ ಸಂಸ್ಥೆಯಿಂದ ನೆರವೇರುತ್ತಿದೆ ಇದು ಶ್ಲಾಘನೀಯ ಎಂದರು.
ಪ್ರಾಚಾರ್ಯೆ ಸಾಧನಾ ಎಸ್ ಎಲ್ಲರನ್ನು ಸ್ವಾಗತಿಸಿ ಪಾಲಕರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು. ಡಾ. ಶ್ರೀಶಾಚಾರ್ಯ ಮಾತನಾಡಿ ತಂದೆ ತಾಯಿ ಹಾಗೂ ಮಕ್ಕಳ ಸಂಬಂಧ ಮತ್ತು ಮಕ್ಕಳು ನಡೆದುಕೊಳ್ಳುವ ರೀತಿ ಹಾಗೂ ಮಕ್ಕಳನ್ನು ಬೆಳೆಸುವ ರೀತಿಯ ಕುರಿತು ಉದಾಹರಣೆಗಳೊಂದಿಗೆ ಎಲ್ಲರ ಮನಕಲಕುವಂತೆ ಮಾತನಾಡಿದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪಾಲಕರ ಪಾದ ಪೂಜೆಯನ್ನ ನೆರವೇರಿಸಿ, ಧನ್ಯವಾದವನ್ನು ತುಂಬಿಕೊಂಡರು. ಸನ್ನಿಧಿ ಕಲಾಕ್ಷೇತ್ರದದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಹಲವಾರು ಮಕ್ಕಳು ಅನೇಕ ಗುರುಗಳ ವೇಷಧಾರಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಜೆ.ಎಸ್.ಎಸ್ ಕಾಲೇಜಿನ ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತರಿದ್ದರು. ಸುಕನ್ಯಾ. ಎಸ್ ಎಲ್ಲರಿಗೂ ವಂದಿಸಿದರು.