ರಾಣೇಬೆನ್ನೂರಲ್ಲಿ ಗುರುಪೂರ್ಣಿಮೆ ಉತ್ಸವ ಆಚರಣೆ: ದತ್ತಾತ್ರೆಯ ಹೋಮ
ರಾಣೆಬೆನ್ನೂರು 06: ಸಾಯಿಬಾಬಾ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗುರುಪೂರ್ಣಿಮೆ ಬಹಳ ವೈಭವಯುತವಾಗಿ ಜರುಗಿತು.ಸಾಯಿ ಬಾಬಾರ ಮೂರ್ತಿಗೆ ಹಾಲಿನ ಅಭಿಷೇಕ ವಿವಿದ ರೀತಿಯ ಪೂಜೆ, ನೈವೈದ್ಯೆ, ಲೋಕಕಲ್ಯಾಣಾರ್ಥವಾಗಿ ಶ್ರೀ ಸಾಯಿ ದತ್ತಾತ್ರೇಯ ಹೋಮ ಮತ್ತು ಕಾಕಡಾರತಿ, ಮಹಾ ಮಂಗಳಾರತಿ, ಪಂಚಾಮೃತ ಅಭಿಷೇಕ, ಮಂಗಳ ಸ್ನಾನ, ಪಾಲಕಿ ಉತ್ಸವ ಕಾರ್ಯಕ್ರಮಗಳು ಜರುಗಿದವು, ಇದಕ್ಕೂ ಮುನ್ನ ನಿನ್ನೆಯ ದಿನ ಬೆಳಿಗ್ಗೆ ಸಾಯಿ ಬಾಬಾರ ಮೂರ್ತಿಯು ಸಚ್ಚರಿತ ಪದ್ಯ ಕೋಶ ಗ್ರಂಥದೊಂದಿಗೆ ಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ದೇವಸ್ಥಾನ ತಲುಪಿತು, ಗುರುಪೂರ್ಣಿಮೆಯ ಪ್ರಯುಕ್ತ ಭಕ್ತರಿಗೆ ವಿಶೇಷ ದರ್ಶನ ಪ್ರವಚನ ಕಾರ್ಯಕ್ರಮ ಮತ್ತು ಬೆಳಿಗ್ಗೆ ಯಿಂದ ಸಂಜೆ ವರೆಗೂ ಅನ್ನಸಂತರೆ್ಣ ನಡೆಯಿತು, ಸಾವಿರಾರು ಭಕ್ತರು ಸಾಯಿಬಾಬಾರ ದಿವ್ಯದರ್ಶನ ಪಡೆದು ಗುರು ಪೂರ್ಣಿಮೆ ಉತ್ಸವದಲ್ಲಿ ಭಾಗಿಯಾದರು. ದೇವಸ್ಥಾನದ ಪ್ರಧಾನ ಅರ್ಚಕ ರಾಹುಲ್ ಜಿ ಮಾತನಾಡಿ ಸಾಯಿಬಾಬಾರವರು ನಂಬಿದ ಭಕ್ತರಿಗೆ ಸನ್ಮಂಗಳವನ್ನು ಉಂಟು ಮಾಡಲಿ, ಸಕಾಲದಲ್ಲಿ ಮಳೆ ಬೆಳೆ ಉತ್ಕೃಷ್ಟವಾಗಿ ಬೆಳೆಯಲಿ, ಮುಂಗಾರು ಮಳೆ ವಿಳಂಬದಿಂದ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಸಕಾಲದಲ್ಲಿ ಮಳೆಯಾಗಲಿ ಎಂದು ವಿಶೇಷ ಹೋಮ ಹವನ ಪೂಜೆ ಸಲ್ಲಿಸಲಾಗಿದೆ ಎಂದರು.