ರಾಣೆಬೆನ್ನೂರ

ಕಲಾವಿದ ರಂಗಭೂಮಿ ನಿರ್ದೇಶಕ ಕೃಷ್ಣಮೂರ್ತಿ ಗುಂಗೇರ ಇನ್ನಿಲ್ಲ

ಕಲಾವಿದ ರಂಗಭೂಮಿ ನಿರ್ದೇಶಕ ಕೃಷ್ಣಮೂರ್ತಿ ಗುಂಗೇರ ಇನ್ನಿಲ್ಲ

ರಾಣೇಬೆನ್ನೂರು 27 : ಕಿರುತೆರೆ ನಟ, ರಂಗಭೂಮಿ ನಾಟಕಗಳ ನಿರ್ದೇಶಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಿರ್ಣಾಯಕರಾಗಿ ತನ್ನ ಛಾಪನ್ನು ಮೂಡಿಸಿದ್ದ, ತಾಲೂಕಿನ ಆರೇಮಲ್ಲಾಪುರ ಗ್ರಾಮದ ಕೃಷ್ಣಮೂರ್ತಿ ಹ. ಗುಂಗೇರ(62) ಅವರು ಗ್ರಾಮದ ತಮ್ಮ ಸ್ವಗ್ರಹದಲ್ಲಿ  ರವಿವಾರ ಸಂಜೆ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು  ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. ಬಾಲ್ಯದಲ್ಲಿಯೇ ಕಲೆ, ಸಾಹಿತ್ಯ,ಸಂಗೀತ, ಮತ್ತು ನಾಟಕ ಅಭಿರುಚಿ ಹೊಂದಿದ್ದ ಕೃಷ್ಣಮೂರ್ತಿ ಅವರು, ಅನೇಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಾಮಾಜಿಕ ನಾಟಕಗಳ  ಕುರಿತು ತರಬೇತಿ ನೀಡುವುದರ ಮೂಲಕ ಅಪ್ರತಿಮ ಸಾಧನೆಯ ಹಾದಿಯಲ್ಲಿ ಸಾಗಿದ್ದರು. 

ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದ, ಕೃಷ್ಣಮೂರ್ತಿ, ನಾಟಕದ ಕೃಷ್ಣಮೂರ್ತಿ  ಎಂದೆ ಗುರುತಿಸಿಕೊಂಡಿದ್ದರು ಅಲ್ಲದೆ, ಯುವಜನ ಮೇಳಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದ ನಿಣರ್ಾಯಕರಾಗಿ  ಸಾಂಸ್ಕೃತಿಕ ವಲಯದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದರು. 1979 ರಿಂದ ಯುವಜನ ಮೇಳ ಪ್ರಶಸ್ತಿ, ಯುವ ಜನ ಸೇವಾ ಪ್ರಶಸ್ತಿ, ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಯುವಜನ ಸೇವಾ ಇಲಾಖೆಯಿಂದ ಯುವ ಪ್ರಶಸ್ತಿ ಸೇರಿದಂತೆ ಇಲಾಖೆ ಕೊಡು ಮಾಡುವ  ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿದ್ದವು. ತಂದೆಯ ಕನಸನ್ನು ಸಾಕ್ಷಾತ್ಕಾರಗೊಳಿಸುವಲ್ಲಿ ಮುಂದಾಗಿರುವ ಚಲನಚಿತ್ರ ನಟ, ಕಿರುತೆರೆ ಕಲಾವಿದ  ನೀನಾಸಂ ಹರೀಶ್  ಅವರು ಕಳೆದ ಎರಡು ದಶಕಗಳಿಂದ,  ಕಿರುತೆರೆ ಧಾರಾವಾಹಿಗಳಲ್ಲಿ ಪ್ರಬುದ್ಧ ನಟನಾಗಿ ಸಾಧನೆ ಮೇರೆಯುತ್ತಿ ರುವುದು, ಉತ್ತರ ಕನರ್ಾಟಕದ ಹೆಮ್ಮೆ. .ಹರೀಶ್ ಗುಂಗೇರ ಅವರು ಮೃತ  ಕೃಷ್ಣಮೂತರ್ಿ ಗುಂಗೇರ್ ಅವರ ಪುತ್ರರಲ್ಲೂಬ್ಬರಾಗಿದ್ದಾರೆ.  

ಸಂತಾಪ : ಇಂದು ಸಂಜೆ ಆಕಸ್ಮಿಕ ನಿಧನ ಹೊಂದಿದ ಕೃಷ್ಣಮೂತರ್ಿ ಗುಂಗೇರ ಅವರಿಗೆ, ಸಂಗೀತ ಸೌರಭ ಜಾನಪದ ಕಲಾ ವೇದಿಕೆ, ಪ್ರಾಂಶುಪಾಲ ಡಾ :ಕೆ. ಸಿ. ನಾಗರಜ್ಜಿ, ಅಭಿರುಚಿ  ಜಾನಪದ ತರಬೇತಿ ಕಲಾ ಸಂಸ್ಥೆಯ ಕಾರ್ಯದಶರ್ಿ ಕೆ.ಎಸ್. ನಾಗರಾಜ್,ಬಿ. ಎ. ಜೆ. ಎಸ್. ಎಸ್ ಕಾಲೇಜು ಆಡಳಿತಾಧಿಕಾರಿ, ಡಾ: ಆರ್.ಎಂ.ಕುಬೇರಪ್ಪ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಯುವಜನ ಸೇವಾ ಕ್ರೀಡಾ  ಇಲಾಖೆಯ ಕೆ. ಎಸ್. ಜೋಗತೀನ್ಕರ್ . ಜಿಲ್ಲಾ ಕ್ರೀಡಾ  ನಿರ್ದೇಶಕ ಎಂ.ಎಸ್ ಜುಮಾ ಅಹಮ್ಮದ್ ಸ್ವಾಕರೆವೇ ಅಧ್ಯಕ್ಷ , ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮೆ, ಸೇರಿದಂತೆ ಸಾಂಸ್ಕೃತಿಕ ಸಂಘಟನೆಗಳ ಮುಖಂಡರು, ಗಣ್ಯರು, ಜಾನಪದ ಕಲಾವಿದರು ತಮ್ಮ ತೀರ್ವ ಸಂತಾಪ ಸೂಚಿಸಿದ್ದಾರೆ 

ಸುದ್ದಿ ಓದಿ