ಶೈಕ್ಷಣಿಕ ವರ್ಷದ ಸಮೂಹ ಬೋಧನಾ ಶಿಬಿರ
ಲೋಕದರ್ಶನ ವರದಿ
ಬೈಲಹೊಂಗಲ 01: ತಾಲೂಕಿನ ಆನಿಗೋಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮಾ ಶಿಕ್ಷಣ (ಕೆ.ಆರ್.ಸಿ.ಇ.ಎಸ್) ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ 2021-22ನೇ ಶೈಕ್ಷಣಿಕ ವರ್ಷದ ಸಮೂಹ ಬೋಧನಾ ಶಿಬಿರ ನಡೆಯಿತು.
ಉಪನ್ಯಾಸಕ ರಮೇಶ ಯರಗಟ್ಟಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ಟೇಜ್ ಕರೇಜ್ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ, ಪರಿಶ್ರಮದಿಂದ ಓದಬೇಕು. ಅಂದಾಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.
ಸಹಾಯಕ ಪ್ರಾಧ್ಯಾಪಕ ಎನ್.ಡಿ.ಚಿನ್ನಪ್ಪಗೌಡರ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಕರು ಶ್ರದ್ಧಾ, ಭಕ್ತಿಯಿಂದ ಮಕ್ಕಳಿಗೆ ಪಾಠ ಬೋಧನೆ ಮಾಡಬೇಕೆಂದು ಕರೆ ನೀಡಿದರು. ಇದೇ ವೇಳೆ ಸಾಧಕ ಗಣ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳಾದ ಸುನಂದಾ ಯಡಳ್ಳಿ, ಶಿವಲಿಂಗಯ್ಯ ಉಪ್ಪಿನ ಅನಿಸಿಕೆ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಪತ್ರಕರ್ತ ಪ್ರಕಾಶ ಬೆಳಗಾವಿ ಆಗಮಿಸಿದ್ದರು. ಎಸ್.ವ್ಹಿ.ಗಾಡದ ಅಧ್ಯಕ್ಷತೆ ವಹಿಸಿದ್ದರು. ಫಕ್ಕೀರಸ್ವಾಮಿಮಠ, ಎಸ್.ಎಸ್.ಹುಬ್ಬಳ್ಳಿ, ವಿದ್ಯಾ ಅಂಗಡಿ, ಸವಿತಾ ನಾನಣ್ಣವರ, ಸುನೀತಾ ಪಟಾತ, ಸಂತೋಷ ಸಾಳುಂಕೆ, ಸುಬ್ಹಾನ ತಡಕೋಡ ಹಾಗೂ ಶಿಕ್ಷಕರು, ಗಣ್ಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಅನ್ನಪೂರ್ಣಾ ಶಿರವಂತಿ ಸ್ವಾಗತಿಸಿದರು. ಶಿವಲೀಲಾ ಪೂಜೇರ ನಿರೂಪಿಸಿದರು. ಅಕ್ಷತಾ ಗುಗ್ಗರಿ ವರದಿ ವಾಚಿಸಿದರು. ಶೃತಿ ಜೋಗೋಜಿ ವಂದಿಸಿದರು.