ರಾಣೆಬೆನ್ನೂರ

ಮಹಾ ಮಾನವತಾವಾದಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್

ಮಹಾ ಮಾನವತಾವಾದಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್

ರಾಣೇಬೆನ್ನೂರು:ಎ 16 ಭಾರತ ದೇಶ ಕಂಡ ಅಪ್ರತಿಮ ನಾಯಕ, ಸಂವಿಧಾನ ಶಿಲ್ಪಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಕಾನೂನು ರಚನೆ ಮೂಲಕ ವಿಶ್ವದ ಎಲ್ಲ ರಾಷ್ಟ್ರಗಳು ಭಾರತದತ್ತ ಮುಖ ಮಾಡುವಂತೆ ಮಾಡಿದ ಮಹಾನ್ ಸಾಧಕರು ಎಂದು ಎಸ್‌ಎಫ್ ಐ ತಾಲೂಕ ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ ಹೇಳಿದರು.   

 ಅವರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಎಸ್‌.ಎಫ್ ಐ ಗ್ರಾಮ ಘಟಕವು ಆಯೋಜಿಸಿದ್ದ ಡಾ: ಬಿ. ಆರ್‌. ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  

ಬಾಬಾ ಸಾಹೇಬ್ ಅವರ, ಶಿಕ್ಷಣ, ಬಾಲ್ಯ, ಮತ್ತು ಮೇಲ್ವರ್ಗದವರ ಜಾತಿ ವ್ಯವಸ್ಥೆಯಲ್ಲಿ ಬೆಂದು ಬಳಲಿದವರು. ಅವರ ಅಂದಿನ ತ್ಯಾಗ, ಅನುಭವಿಸಿದ ಹಿಂಸೆ ಎಲ್ಲವೂ ಸಹ ಸೂಕ್ಷ್ಮತೆಯಿಂದ ಅವಲೋಕಿಸಿ, ಇದಕ್ಕೆಲ್ಲಾ ಪರಿಹಾರ ಶಿಕ್ಷಣ ಒಂದೇ   ತಾರಕ ಮಂತ್ರವೆನ್ನುವುದನ್ನು ಅರಿತ ಅವರು, ಶಿಕ್ಷಣದಲ್ಲಿ ಸಾಧನೆ ಮಾಡಿ, ಸಂವಿಧಾನವನ್ನು ರಚಿಸಿ, ಸರ್ವರಿಗೂ ಸಮಾನತೆಯ ಬದುಕನ್ನು ಕಟ್ಟಿಕೊಟ್ಟ ದೈವಿ ಪುರುಷರಾಗಿದ್ದಾರೆ. ಅಂತಹ ಮಹಾತ್ಮರ ತ್ಯಾಗ, ಮತ್ತು ಅನುಸರಿಸಿದ ಕ್ರಮ ಇಂದು ಪ್ರತಿಯೊಬ್ಬರು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ, ಮತ್ತೋರ್ವ ಅಂಬೇಡ್ಕರ್ ಹುಟ್ಟಿ ಬಂದಂತಾಗುತ್ತದೆ ಎಂದರು.  ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ, ಕಾರ್ಯಕರ್ತರಾದ  ಮಹಮದ್ ರಫೀಕ್,ಪ್ರದೀಪ್ ಕೊಟಿಮಠ, ರವಿರಾಜ್ ಅಂಬಿಗೇರ,ಮಾಲತೇಶ ಬಡಿಗೇರ್,ಪ್ರಜ್ವಲ್ ತಳವಾರ,ನವೀನ್ ಅಂಬಿಗೇರ ಸೇರಿದಂತೆ ಎಸ್ ಎಫ್ ಐ ಪದಾಧಿಕಾರಿಗಳು, ಗ್ರಾಮದ ನಾಗರಿಕರನೆಕರು ಉಪಸ್ಥಿತರಿದ್ದರು. 


ಸುದ್ದಿ ಓದಿ