ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿದ್ದಾರೆ: ಆನಂದ ನ್ಯಾಮಗೌಡ
ಜಮಖಂಡಿ 26: ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿದ್ದಾರೆ, ಇವರು ಮುಖ್ಯಮಂತ್ರಿಗಳ ಜನಪ್ರೀಯತೆಯನ್ನು ಕಡಿಮೆ ಮಾಡುವ ಕನಸು ಕಾಣುತ್ತಿದ್ದಾರೆ, ಅದು ಎಂದಿಗೂ ಸಾಧ್ಯವಿಲ್ಲ, ನೀವೇನಾದರೂ ಉತ್ತಮ ಆಡಳತ ನೀಡಲು ಬಯಸಿದರೆ ಮೊದಲು ಜನಹಿತ ಕಾರ್ಯ ಮಾಡಿ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಟೀಕಿಸಿದರು.
ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ರಾಜ್ಯಪಾಲರ ನಡೆ ಖಂಡಿಸಿ ಜಮಖಂಡಿ, ಮತ್ತು ಸಾವಳಗಿ ಬ್ಲಾಕ ಕಾಂಗ್ರೇಸ್ ಹಮ್ಮಿಕೊಂಡಿದ ಬೃಹತ್ ಪ್ರತಿಭಟನೆಯು ಹಳೆ ತಹಶಶೀಲ್ದಾರ ಕಚೇರಿಯಿಂದ ಪ್ರಾರಂಭಗೊಂಡು ಪಾದಯಾತ್ರೆಯ ಮೂಲಕ ಎ,ಜಿ,ದೇಸಾಯಿ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಸಂವಿಧಾನದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಆಡಳಿತ ನೀಡಿದವರ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇಲ್ಲದ ಗೂಬೆ ಕೂರಿಸುವದು ಖಂಡನೀಯವಾಗಿದೆ. ಇದು ಇಂದು ಪ್ರಾರಂಭವಾಗಿದೆ ಅಷ್ಟೆ ಇನ್ನೂ ಇದೇ ರೀತಿಯಾಗಿ ಮುಂದುವರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ರಾಜ್ಯದ ಮುಖಮಂತ್ರಿಗಳ ವಿರುದ್ದ ಶಡ್ಯಂತ್ರವನ್ನು ಬಿಜೆಪಿ ಜೆಡಿಎಸ್ ರೂಪಿಸಿವೆ. ಅವರ 40 ವರ್ಷದ ರಾಜಕೀಯದಲ್ಲಿ ಕಳಂಕರಹಿತ ರಾಜಕಾರಣ ಮಾಡಿದವರ ಮೇಲೆ ರಾಜ್ಯಪಾಲರನ್ನು ಮುಂದಿಟ್ಡು ಮೂಡಾ ಹಗರಣ ಎಬ್ಬಿಸಿ ಪ್ರಾಶುಕ್ಯೂಶನ ನೀಡಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಆಪಾದನೆ ಮಾಡುವ ಮೊದಲು ನಿಮ್ಮ ಸ್ಥಿತಿ ಅರಿತುಕೊಳ್ಳಿ, ನಿಮ್ಮ ಹಿಂದಿನ ಮುಖ್ಯಮಂತ್ರಿಗಳು ಈಗಾಗಲೇ ಜೈಲು ಕಂಡಿದ್ದಾರೆ. ಬಿಜೆಪಿಯ ಒಬ್ಬ ಮುಖ್ಯಮಂತ್ರಿ ಕರ್ಮಕಾಂಡದ ಸಿಡಿ ಹೊರಬಹುದಾಗಿದೆ ಎಂದು ಕೇಳಿ ಬಂದಿದೆ ಎಂದರು.
ಕಾಂಗ್ರೇಸ್ ನಾಯಕಿ ಸಂಯುಕ್ತಾ ಪಾಟೀಲ ಮಾತನಾಡಿ, ದೇಶದ ಏಳು ರಾಜ್ಯದ ಮುಖ್ಯಮಂತ್ರಿಗಳು ಆಪಾದನೆಯಿಂದ ರಾಜಿನಾಮೆ ನೀಡಿದ್ದಾರೆ, ಆದರೆ ಇಂದು ನಾವು ಇತಿಹಾಸ ನಿರ್ಮಿಸಲು ಹೊರಟಿದ್ದೇವೆ, ನಮ್ಮ ಮುಖ್ಯಮಂತ್ರಿಗಳಿಗೆ ಬೆನ್ನೆಲುಬಾಗಿ ನಿಂತಿದ್ದೇವೆ. ಸಿದ್ದರಾಮಯ್ಯ ಒಬ್ಬರೇ ಅಲ್ಲ ನಾವೆಲ್ಲ ಸಿದ್ದರಾಮಯ್ಯರಾಗಬೇಕು. ರಾಜ್ಯಪಾಲರ ಈ ನಡೆಯನ್ನು ಖಂಡಿಸಬೇಕು ಎಂದರು.
ಬಿ.ಎಸ್.ಸಿಂಧೂರ, ಶ್ರೀಶೈಲ ದಳವಾಯಿ, ನಗರಸಭೆ ಸದಸ್ಯ ಸಿದ್ದು ಮೀಸಿ,.ರಾಜು ಮೇಲಿನಕೇರಿ, ಕಾಡು ಮಾಳಿ ಮಾತನಾಡಿದರು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ವರ್ಧಮಾನ ನ್ಯಾಮಗೌಡ, ಕಲ್ಲಪ್ಪಾ ಗಿರಡ್ಡಿ, ಪ್ರಕಾಶ ಕಣಬೂರ, ಇಲಾಹಿ ಕಂಗನೊಳ್ಳಿ ಸಮೀರ ಕಂಗನೊಳ್ಳಿ, ರಫೀಕ ಬಾರಿಗಡ್ಡಿ, ಮಹೇಶ ಕೋಳಿ, ತೌಫಿಕ ಪಾರ್ತನಳ್ಳಿ, ಅರ್ಜುನ ದಳವಾಯಿ, ಸುಮಿತ್ರಾ ಗುಳಬಾಳ, ಕುಮಾರ ಆಲಗೂರ, ರೋಹಿತ ಸೂರ್ಯವಂಶಿ, ಮಲ್ಲು ಶಿರಹಟ್ಟಿ, ಅಬುಬಕರ ಕುಡಚಿ, ಮೀರಾ ಒಚಿಟಮೋರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದರು.
ಮಾಜಿ ಸಿಎಂ,ಸಿಡಿ ಹೊರಬಹುದಾಗಿದೆ,
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಆಪಾದನೆ ಮಾಡುವ ಮೊದಲು ನಿಮ್ಮ ಸ್ಥಿತಿ ಅರಿತುಕೊಳ್ಳಿ, ನಿಮ್ಮ ಹಿಂದಿನ ಮುಖ್ಯಮಂತ್ರಿಗಳು ಈಗಾಗಲೇ ಜೈಲು ಕಂಡಿದ್ದಾರೆ. ಬಿಜೆಪಿಯ ಒಬ್ಬ ಮುಖ್ಯಮಂತ್ರಿ ಕರ್ಮಕಾಂಡದ ಸಿಡಿ ಹೊರಬಹುದಾಗಿದೆ ಎಂದು ಕೇಳಿ ಬಂದಿದೆ ಎಂದರು.