ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಸಚಿನ ಗಡದವರಗೆ ಸನ್ಮಾನ
ಬೈಲಹೊಂಗಲ 23: ತಾಲೂಕಿನ ದೇಶನೂರಿನ ಸ್ನಾನಿಕ ಅರುಳಪ್ಪ ವಿರಕ್ತಮಠದಲ್ಲಿ ಮಂಗಳವಾರ ದಿ. 20ರಂದು ಆಶ್ರಮ ಶಾಲೆಯ ಹಳೆಯ ವಿದ್ಯಾರ್ಥಿ ಸಚಿನ ಬಸವರಾಜ ಗಡದವರ ಇವರು ಇತ್ತೀಚೆಗೆ ನಡೆದ ನೀಟ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 561 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿ ಉನ್ನತ ವ್ಯಾಸಂಗಕ್ಕೆ ಎಮ್.ಬಿ.ಬಿ.ಎಸ್ ಪ್ರವೇಶಾತಿ ಪಡೆದಿರುತ್ತಾನೆ. ಸಚಿನ ಬಸವರಾಜ ಗಡದವರವರನ್ನು ಅರುಳಪ್ಪ ವಿರಕ್ತಮಠದ ಮಠಾಧೀಶ ಡಾ. ಫಾದರ ಮೆನಿನೊ ಸ್ವಾಮಿಗಳು ಸತ್ಕರಿಸಿ ಆಶೀರ್ವದಿಸಿದರು.
ಶಿಕ್ಷಕರಾದ ಎಸ್.ಪಿ. ಪತ್ತಾರ, ಎ.ಎಸ್. ಗಡದವರ, ಹೆಚ್.ಓ. ಇಟ್ಟಂಗಿಹಾಳ, ಎಂ.ಪಿ. ತೋರಗಲ್, ಪಿ.ಎಮ್. ಸಂಡೇರ, ಡಿ.ಕೆ. ಪೋಳ, ಗೀತಾಲ ಅಲಗಿ, ಭಾರತಿ ಬಡಿಗೇರ, ಮತ್ತು ಬಿ.ಎಸ್. ಗಡದವರ ಹಾಗೂ ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಯ ಪಾಲಕರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.