ಬರಡು ಭೂಮಿಗೆ ನೀರು ನೀಡಿ ಹಸಿರು ಕ್ರಾಂತಿಗೆ ಬದ್ಧ: ಶಾಸಕ ರಾಜು ಕಾಗೆ
ಲೋಕದರ್ಶನ ವರದಿ
ಸಂಬರಗಿ 28: ಖೀಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಹಿಂದಿನ ಸರಕಾರ ವಿಳಂಬ ನೀತಿಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ ರೈತರಿಗೆ ಸುಳ್ಳು ಹೇಳಿ ದಾರಿ ತಪ್ಪಸುವ ವ್ಯಕ್ತಿ ನಾನಲ್ಲಾ. ಬರಡು ಭೂಮಿಗೆ ನೀರು ನೀಡಿ ಹಸಿರು ಕ್ರಾಂತಿ ಮಾಡೆ ತೀರುತ್ತೇನೆ. ಗಡಿ ಭಾಗದ ಗ್ರಾಮದ ಕೆರೆತುಂಬುವ ಯೋಜನೆ, ಇನ್ನಿತರ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗವದು ಎಂದು ಶಾಸಕ ರಾಜು ಕಾಗೆ ಹೇಳಿದರು.
ಬಾಳಿಗೆರಿ ಗ್ರಾಮದಲ್ಲಿ ಅಭಿನಂದನಾ ಸತ್ಕಾರ ಸಭೆಯಲ್ಲಿ ಮಾತನಾಡಿದ ಅವರು ಈ ಭಾಗದ ನೀರಾವರಿ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ನಾನು ಕ್ಷೇತ್ರಗಳಲ್ಲಿ ಸಂಚರಿಸಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರತಿ ಗ್ರಾಮಗಳಲ್ಲಿ ಸಮಸ್ಯೆಗಳ ಪಟ್ಟಿ ಮಾಡಿ ಪರಿಹರಿಸುವ ಗುರಿ ಹೊಂದಿದ್ದೇನೆ. ಬಾಳಿಗೆರಿ ಸುತ್ತಮುತ್ತ ಗ್ರಾಮಗಳು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ವಂಚಿತಗೊಂಡಿರುವ ಗ್ರಾಮಗಳಿಗೆ, ವಿಶೇಷ ಅನುದಾನ ತಂದು ನೀರಿನ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹಸಿರು ಕ್ರಾಂತಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ನನ್ನೊಂದಿಗೆ ಗಟ್ಟಿಯಾಗಿ ನಿಂತ ಮತದಾರರ, ನನ್ನ ಗೆಲುವಿಗೆ ಕಾರಣೀಭೂತರಾದ ಕಾರ್ಯಕರ್ತರ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕೆಪಿಸಿಸಿ ಸದಸ್ಯರಾದ ಚಂದ್ರಕಾಂತ ಇಮಡಿ ಮಾತನಾಡಿ ಅವರು ಗ್ರಾಮದಲ್ಲಿ ಪ್ರಾಥಮಿಕ ಶಾಲೆಗೆ ಶಿಕ್ಷಕ ಹಾಗೂ ಶಾಲಾ ಕಟ್ಟಡದ ಕೊರತೆೆ, ಗ್ರಾಮದ ಸಂಪರ್ಕ ರಸ್ತೆ ಡಾಂಬರಿಕರಣ, ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು, ಸರಕಾರಿ ಪದವಿ ಪೂರ್ವ ಕಾಲೇಜ ಆರಂಭಿಸಬೇಕು ಎಂಬ ಹಲವಾರು ಸಮಸ್ಯೆ ಕುರಿತು ಶಾಸಕರಿಗೆ ಮನವಿ ನೀಡಿದರು.
ಓಂಪ್ರಕಾಶ ಪಾಟೀಲ, ಮಹಾದೇವ ಗುಂಜಗಾಂವಿ, ಅಪ್ಪಾಸಾಬ ಮುಡಸಿ, ಮುಕುಂದ ವಿಜಾಪುರೆ, ಸಿದ್ರಾಯ ತೇಲಿ ಶಿವಾಜಿ ಯಮಗರ, ಗುಲ್ಲಪ್ಪ ಜತ್ತಿ, ಶಿವಾನಂದ ಗೊಲಭಾವಿ, ಬಸವರಾಜ ಅಂಗಡಿ ಪಕ್ರುದ್ದಿನ ಬಾಲದಾರ, ಬಾಬು ಹುಚ್ಚಗೌಡರ, ಅಶೋಕ ಕವಲಗುಡ್ಡ, ಗುರಬಸು ಮಡಿವಾಳ, ಗುರಲಿಂಗ ಅಥಣಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು