ಇಂಡಿ

ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಿ: ಕಪಾಲಿ ಆಗ್ರಹ

ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಿ: ಕಪಾಲಿ ಆಗ್ರಹ

ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲರು 2013, 2018 ಹಾಗೂ 2023ರ ಚುನಾವಣೆಯಲ್ಲಿ ನಿರಂತರವಾಗಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು, ಬಿಜಾಪುರ ಜಿಲ್ಲೆಯ ಜನಪ್ರೀಯ ನಾಯಕರಾಗಿ ಅವರು ಹೊರಹೊಮ್ಮಿದ್ದು, ಪಕ್ಷದ ಹೈಕಮಾಂಡ್ ಯಶವಂತರಾಯಗೌಡರಿಗೆ  ಸಚಿವ ಸ್ಥಾನ ನೀಡಬೇಕು ಎಂದು ಹಿರೇಮಸಳಿಯ ಗ್ರಾಪಂ ಮಾಜಿ ಸದಸ್ಯ ಪುಂಡಲಿಕ ಕಪಾಲಿ ಆಗ್ರಹಿಸಿದರು. 

ಯಶವಂತರಾಯಗೌಡ ಪಾಟೀಲರು ಅಭಿವೃದ್ಧಿಪರ, ಚಿಂತಕರು ಮಂತ್ರಿಮಂಡಲದಲ್ಲಿ ನಿಷ್ಠಾವಂತರು ಅವರಿಗೆ ಮುಂಬರುವ ಸಚಿವ ಸಂಪುಟದಲ್ಲಿ  ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಶಾಸಕ ಯಶವಂತರಾಯಗೌಡ ಪಾಟೀಲರು ದೀನ-ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಜನಾಂಗವನ್ನು ಒಂದೇ ಸೂರಿನಡಿ ನ್ಯಾಯ ನೀಡಿ. ಬಸವಣ್ಣನ ತತ್ವದಂತೆ ನಡೆದುಕೊಂಡಿದ್ದಾರೆ ಇಂತಹ ರಾಜಕೀಯ ಚಾಣುಕ್ಯನಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. 




ಸುದ್ದಿ ಓದಿ